ನಿಂತಿದ್ದ ಟ್ರಕ್‌ಗೆ ಪಿಕಪ್ ವ್ಯಾನ್ ಡಿಕ್ಕಿ – ಏಳು ಮಕ್ಕಳು ಸೇರಿ 10 ಮಂದಿ ಸಾವು

Public TV
1 Min Read
ಜೈಪುರ: ದೇವಸ್ಥಾನದಿಂದ ಹಿಂತಿರುಗುತ್ತಿದ್ದಾಗ ನಿಂತಿದ್ದ ಟ್ರಕ್‌ಗೆ ಪಿಕಪ್ ವ್ಯಾನ್ ಡಿಕ್ಕಿಯಾದ ಪರಿಣಾಮ 7 ಮಕ್ಕಳು ಸೇರಿ 11 ಮಂದಿ ಸಾವನ್ನಪ್ಪಿರುವ ಭೀಕರ ಅಪಘಾತ ರಾಜಸ್ಥಾನದ (Rajasthan) ದೌಸಾ (Dausa) ಎಂಬಲ್ಲಿ ನಡೆದಿದೆ.

ಬುಧವಾರ (ಆ.13) ಬೆಳಗಿನ ಜಾವ 3:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಪಿಕಪ್ ವ್ಯಾನ್‌ನಲ್ಲಿ ಖತುಶ್ಯಾಮ್ಜಿ ದೇವಸ್ಥಾನದ ದರ್ಶನ ಪಡೆದು ಭಕ್ತರು ಹಿಂತಿರುಗುತ್ತಿದ್ದರು. ಈ ವೇಳೆ ನಿಲ್ಲಿಸಿದ್ದ ಟ್ರಕ್‌ಗೆ ಪಿಕಪ್ ವ್ಯಾನ್ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಏಳು ಮಕ್ಕಳು ಹಾಗೂ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಟ್ಯಾರಿಫ್‌ ವಾರ್‌ ನಡುವೆ ಮುಂದಿನ ತಿಂಗಳು ಅಮೆರಿಕಗೆ ಮೋದಿ ಭೇಟಿ

ಅಧಿಕಾರಿಗಳ ಮಾಹಿತಿ ಪ್ರಕಾರ, ಮೃತಪಟ್ಟವರ ಪೈಕಿ ಹೆಚ್ಚಿನವರು ಉತ್ತರಪ್ರದೇಶದ ಇಟಾವಾ ಜಿಲ್ಲೆಯವರು ಎಂದು ತಿಳಿಸಿದ್ದಾರೆ. ಇನ್ನೂ ಅಪಘಾತದಲ್ಲಿ 15ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ 9 ಜನರನ್ನು ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಹಿನ್ನೆಲೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇತ್ತೀಚಿಗೆ ದೌಸಾದಲ್ಲಿ ಚಲಿಸುತ್ತಿದ್ದ ಟ್ರೇಲರ್ ಅರ್ಧ ಕತ್ತರಿಸಿ ಹಿಂದೆ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿ ಐವರು ಸಾವನ್ನಪ್ಪಿದ್ದರು. ಅದಾದ ನಾಲ್ಕು ದಿನಗಳಲ್ಲಿಯೇ ಈ ಅವಘಡ ಸಂಭವಿಸಿದೆ.ಇದನ್ನೂ ಓದಿ: ಬೆಂಗಳೂರು| ಅಗ್ನಿಶಾಮಕದಳ ಕಚೇರಿ ಬಳಿಯೇ ಹೊತ್ತಿ ಉರಿದ ಶಾಲಾ ವಾಹನ – ವ್ಯಕ್ತಿ ಸಜೀವ ದಹನ

Share This Article