ಮಂಡ್ಯ: ಕಬ್ಬು ಕಟಾವು ಮಾಡ್ತಿದ್ದಾಗ 10 ಅಡಿ ಉದ್ದದ ಹೆಬ್ಬಾವು ಪತ್ತೆ

Public TV
0 Min Read

ಮಂಡ್ಯ: ಕಬ್ಬು ಕಟಾವು ಮಾಡುತ್ತಿದ್ದ ವೇಳೆ ದೊಡ್ಡ ಹೆಬ್ಬಾವು ಕಾಣಿಸಿಕೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಕುಂದನಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ಹೆಬ್ಬಾವು ಕಾಣಿಸಿಕೊಂಡಿದೆ. ಗ್ರಾಮದ ಶಿವಕುಮಾರ್ ಎಂಬವರ ಜಮೀನಿನಲ್ಲಿ ಕಬ್ಬು ಕಟಾವು ಮಾಡಲಾಗುತ್ತಿತ್ತು. ಈ ವೇಳೆ ದೊಡ್ಡ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ಕೂಡಲೇ ಜಮೀನಿನ ಮಾಲೀಕ ಶಿವಕುಮಾರ್, ಸ್ನೇಕ್ ಮುನ್ನಾ ಅವರಿಗೆ ವಿಷಯ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಬಂದ ಸ್ನೇಕ್ ಮುನ್ನಾ, ಹೆಬ್ಬಾವನ್ನ ಸೆರೆ ಹಿಡಿದಿದ್ದಾರೆ. ಸುಮಾರು 40 ಕೆ.ಜಿ ತೂಕ, 10 ಅಡಿ ಉದ್ದವಿರುವ ಹೆಬ್ಬಾವನ್ನ ಅರಣ್ಯಾಧಿಕಾರಿಗಳ ವಶಕ್ಕೆ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *