ಖಮೇನಿ ಹತ್ಯೆಗೆ ಪ್ರತೀಕಾರ – ಇರಾನ್‌ ಕ್ಷಿಪಣಿ ದಾಳಿಗೆ ಇಸ್ರೇಲ್‌ನಲ್ಲಿ 10 ಮಂದಿ ಸಾವು

1 Min Read

ಜೆರುಸಲೇಂ: ಇರಾನ್‌ ಕ್ಷಿಪಣಿಗಳ (Iran Strikes) ದಾಳಿಗೆ ಮಧ್ಯ ಇಸ್ರೇಲ್‌ (Israel) ನಗರವಾದ ಬೆಟ್‌ ಶೆಮೇಶ್‌ನಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್‌ ತಿಳಿಸಿದೆ.

ಬೀಟ್ ಶೆಮೇಶ್ ಪ್ರದೇಶದಲ್ಲಿ 10 ಮಂದಿ ಮೃತಪಟ್ಟಿದ್ದು, 23 ಗಾಯಗೊಂಡಿದ್ದಾರೆ ಎಂದು ಮ್ಯಾಗೆನ್ ಡೇವಿಡ್ ಆಡಮ್ (ಎಂಡಿಎ) ತುರ್ತು ಸೇವೆ ತಿಳಿಸಿದೆ. ಕ್ಷಿಪಣಿಗಳು ಕಟ್ಟಡಕ್ಕೆ ನೇರವಾಗಿ ಅಪ್ಪಳಿಸಿರುವುದರಿಂದ ಸಾವುಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾದ ಶಸ್ತ್ರಾಸ್ತ ನಂಬಿ ಪ್ರಾಣ ಕಳೆದುಕೊಂಡ ಖಮೇನಿ!

ಇಸ್ರೇಲ್‌-ಯುಎಸ್‌ ಜಂಟಿ ಏರ್‌ಸ್ಟ್ರೈಕ್‌ ವಿರುದ್ಧ ಇರಾನ್‌ ಪ್ರತಿದಾಳಿ ನಡೆಸುತ್ತಿದೆ. ಇಸ್ರೇಲ್‌ ಮೇಲೆ 200ಕ್ಕೂ ಹೆಚ್ಚು ಮಿಸೈಲ್‌ಗಳು ಮತ್ತು 12 ಕ್ಕೂ ಹೆಚ್ಚು ಡ್ರೋನ್‌ ದಾಳಿ ನಡೆಸಿದೆ.

ಜೊತೆಗೆ ಗಲ್ಫ್‌ ರಾಷ್ಟ್ರಗಳ ಮೇಲೂ ಇರಾನ್‌ ಸಮರ ಸಾರಿದೆ. ಖತಾರ್‌, ಸೌದಿ ಅರೇಬಿಯಾ, ದುಬೈ, ಸಿರಿಯಾ, ಯುಎಇ ಮೇಲೆ ಡ್ರೋನ್‌ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ. ಇದನ್ನೂ ಓದಿ: ಇರಾನ್‌ ವಿರುದ್ಧ ಹೋರಾಟದಲ್ಲಿ ಮುಸ್ಲಿಮ್‌ ದೇಶಗಳು ಅಮೆರಿಕದೊಂದಿಗೆ ಕೈ ಜೋಡಿಸಿದ್ದು ಯಾಕೆ?

Share This Article