ಶ್ರೀನಗರ: ಮೂರು ಬಸ್‌ಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ 10ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು (Amarnath Yatra) ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ (Jammu And Kashmir) ಕುಲ್ಗಾಮ್ (Kulgam) ಜಿಲ್ಲೆಯಲ್ಲಿ ನಡೆದಿದೆ.
ಗಾಯಾಳು ಯಾತ್ರಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎಲ್ಲಾ ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಯಚೂರು | ಕಸ ವಿಲೇವಾರಿ ವಾಹನಗಳನ್ನು ಕದ್ದೊಯ್ದ ಕಳ್ಳರು
ಅಮರನಾಥ ಯಾತ್ರೆಗಾಗಿ ಬೇಸ್ ಕ್ಯಾಂಪ್‌ಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂರು ಬಸ್‌ಗಳು ಹಾನಿಗೊಳಗಾಗಿವೆ. ಬಸ್ಸಿನಲ್ಲಿದ್ದ ಉಳಿದ ಯಾತ್ರಿಕರಿಗೆ ಮೀಸಲು ಬಸ್ ವ್ಯವಸ್ಥೆ ಮಾಡಲಾಗಿದ್ದು, ಯಾತ್ರಿಕರು ಪ್ರಯಾಣ ಮುಂದುವರಿಸಿದ್ದಾರೆ. ಇದನ್ನೂ ಓದಿ: ಜಸ್ಟ್ 5 ಸಾವಿರಕ್ಕೆ ಸ್ನೇಹಿತರಿಂದಲೇ ಉತ್ತರ ಕರ್ನಾಟಕದ ಯುವ ಗಾಯಕ ಮಾರುತಿ ಲಠ್ಠೆ ಬರ್ಬರ ಕೊಲೆ