10 ವರ್ಷ ಅಕ್ರಮ ಸಂಬಂಧ, ಯುವತಿಯ ವಿವಾಹಕ್ಕೆ ಪ್ರಿಯತಮ ನಕಾರ- ಭಾವಿ ಪತಿಯಿಂದ ಬರ್ಬರ ಹತ್ಯೆ

Public TV
2 Min Read
– ಹೊಟ್ಟೆಗೆ ಮೂರು ಬಾರಿ ಇರಿದು, ಗಂಟಲು ಸೀಳಿ ಕೊಲೆ
– ಸೂಟ್‍ಕೇಸಿನಲ್ಲಿ ಮೃತದೇಹ ತುಂಬಿ ರೈಲಿನಿಂದ ಎಸೆದ್ರು

ನವದೆಹಲಿ: ವಿವಾಹದ ಕುರಿತು ಜಗಳವಾಗಿದ್ದು, ಪ್ರಿಯತಮೆಯ ವರನಿಂದಲೇ ಆಕೆಯ ಪ್ರಿಯತಮ ಉದ್ಯಮಿಯನ್ನು ಹತ್ಯೆ ಮಾಡಲಾಗಿದೆ. ಕೊಲೆ ಬಳಿಕ ಮೃತದೇಹವನ್ನು ಸೂಟ್‍ಕೇಸ್‍ನಲ್ಲಿ ತುಂಬಿ ರೈಲಿನಿಂದ ಎಸೆದಿರುವ ಆಘಾತಕಾರಿ ಘಟನೆ ನಡೆದಿದೆ.

ದೆಹಲಿಯ ಆದರ್ಶ ನಗರದಲ್ಲಿ ಘಟನೆ ನಡೆದಿದ್ದು, ಯುವತಿಯ ಪ್ರಿಯತಮನನ್ನು ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಸೂಟ್‍ಕೇಸ್‍ನಲ್ಲಿ ತುಂಬಿ ಗುಜರಾತ್‍ನ ಭರುಚ್ ಬಳಿ ರೈಲಿನಿಂದ ಎಸೆಯಲಾಗಿದೆ. ಸಂತ್ರಸ್ತನನ್ನು ಮಾಡೆಲ್ ಟೌನ್ ನಿವಾಸಿ 46 ವರ್ಷದ ನೀರಜ್ ಗುಪ್ತಾ ಎಂದು ಗುರುತಿಸಲಾಗಿದ್ದು, ಈತ ತನ್ನ ಉದ್ಯೋಗಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಮೂವರು ಆರೋಪಿಗಳಾದ ಫೈಸಲ್(29), ಈಕೆಯ ತಾಯಿ ಶಹೀನ್ ನಾಝ್(45) ಹಾಗೂ ವರ ಜುಬರ್(28)ನನ್ನು ಬಂಧಿಸಲಾಗಿದೆ ಎಂದು ವಾಯವ್ಯ ವಿಭಾಗದ ಡಿಸಿಪಿ ವಿಜಯಾಂತ ಆರ್ಯ ತಿಳಿಸಿದ್ದಾರೆ.

ನವೆಂಬರ್ 13ರಂದು ಯುವತಿಯ ಪ್ರಿಯತಮ ಗುಪ್ತಾ ವಾಯವ್ಯ ದೆಹಲಿಯಲ್ಲಿರುವ ಫೈಸಲ್ ಬಾಡಿಗೆ ಮನೆಗೆ ತೆರಳಿ ಜಗಳವಾಡಿದ್ದಾನೆ. ಈ ವೇಳೆ ಗುಪ್ತಾ ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ನಂತರ ಜಗಳವಾಗಿದ್ದು, ಪ್ರಿಯತಮೆ ಫೈಸಲ್ ಭಾವಿ ಪತಿ ಗುಪ್ತಾಗೆ ಇಟ್ಟಿಗೆಯಿಂದ ಬಲವಾಗಿ ತೆಲೆಗೆ ಹೊಡೆದಿದ್ದಾನೆ. ಹೊಟ್ಟೆಗೆ ಮೂರು ಬಾರಿ ಇರಿದು, ಗಂಟಲು ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ದೇಹವನ್ನು ಸಾಗಿಸಲು ವಧು ಹಾಗೂ ಆಕೆಯ ತಾಯಿ ಸಹಾಯ ಮಾಡಿದ್ದಾರೆ.

ಪ್ರಕರಣದ ಬಳಿಕ ಕೇವಲ್ ಪಾರ್ಕ್‍ನಿಂದ ಗುಪ್ತಾ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ವಾಯವ್ಯ ದೆಹಲಿಯ ಆದರ್ಶ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನನ್ನ ಪತಿ ಕಾಣೆಯಾಗಿರುವುದಕ್ಕೆ ಫೈಸಲ್ ಕಾರಣ, ಇವರಿಬ್ಬರು ದೀರ್ಘ ಕಾಲದ ಸಂಬಂಧ ಹೊಂದಿದ್ದರು ಎಂದು ಗುಪ್ತಾ ಪತ್ನಿ ಶಂಕಿಸಿದ್ದಾರೆ.

ಗುಪ್ತಾ ಪತ್ನಿ ದೂರು ನೀಡುತ್ತಿದ್ದಂತೆ ಐಪಿಸಿ ಸೆಕ್ಷನ್ 365(ಅಪಹರಣ) ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿ ಫೈಸಲ್‍ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಬಳಿಕ ಫೈಸಲ್ ಪತ್ತೆಹಚ್ಚಿ ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಈ ವೇಳೆ ಫೈಸಲ್ ತನ್ನ ವಿವಾಹೇತರ ಸಂಬಂಧದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾಳೆ.

ಫೈಸಲ್ ಗುಪ್ತಾ ಅವರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಕಳೆದ 10 ವರ್ಷಗಳ ಹಿಂದೆ ಗುಪ್ತಾನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಬಳಿಕ ಫೈಸಲ್ ಪೋಷಕರು ಜುಬರ್ ಜೊತೆ ವಿವಾಹ ಮಾಡಲು ನಿಶ್ಚಯಿಸಿದ್ದರು. ಮಾತುಕತೆ ನಂತರ ನಿಶ್ಚಿತಾರ್ಥವನ್ನೂ ಮಾಡಲಾಗಿತ್ತು. ಇದನ್ನು ಅವಳು ಗುಪ್ತಾಗೆ ತಿಳಿಸಿದ್ದಾಳೆ. ಈ ವಿಚಾರ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಗುಪ್ತಾ, ಆದರ್ಶ ನಗರದ ಕೇವಲ್ ಪಾರ್ಕ್‍ನ ಯುವತಿಯ ಬಾಡಿಗೆ ಮನೆಗೆ ಆಗಮಿಸಿ, ಜುಬರ್, ಫೈಸಲ್ ಹಾಗೂ ಅವಳ ತಾಯಿಯ ಜೊತೆ ಜಗಳವಾಡಿದ್ದಾನೆ ಎಂದು ಡಿಸಿಪಿ ಆರ್ಯ ಮಾಹಿತಿ ನೀಡಿದ್ದಾರೆ.

ಮಾತಿನ ಚಕಮಕಿ ವೇಳೆ ಗುಪ್ತಾ ಫೈಸಲ್‍ಳನ್ನು ತಳ್ಳಿದ್ದಾನೆ. ಇದರಿಂದ ಜುಬರ್ ಆಕ್ರೋಶಗೊಂಡಿದ್ದು, ಗುಪ್ತಾ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ ಎಂದು ಫೈಸಲ್ ತಿಳಿಸಿದ್ದಾಳೆ. ಗುಪ್ತಾನನ್ನು ಕೊಲೆ ಮಾಡಿದ ಬಳಿಕ ಮೃತದೇಹವನ್ನು ಸೂಟ್‍ಕೇಸ್‍ನಲ್ಲಿ ತುಂಬಿ ಕ್ಯಾಬ್‍ನಲ್ಲಿ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ತೆರಳಿ, ರೇಲ್ವೆ ಪ್ಯಾಂಟ್ರಿಯಲ್ಲಿ ಕೆಲಸ ಮಾಡುತ್ತಿದ್ದ ಜುಬರ್, ಸೂಟ್‍ಕೇಸ್‍ನೊಂದಿಗೆ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ತೆರಳಿ ಗುಜರಾತ್‍ನ ಭರುಚ್ ಬಳಿ ದೇಹವನ್ನು ಎಸೆದಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.

ಕೃತ್ಯದಲ್ಲಿ ಬಳಸಲಾದ ಚಾಕು ಹಾಗೂ ಇಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ. ದೇಹವನ್ನು ಸಹ ಹುಡುಕಲಾಗುತ್ತಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *