ಸಿಎಂ ಹಳೆ ಮನೆಯ ಕೂಗಳತೆ ದೂರದಲ್ಲಿ ಕಳ್ಳತನ – ಒಂದೂವರೆ ಕೆಜಿ ಚಿನ್ನ, ನಗದು ದರೋಡೆ

Public TV
1 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಹಳೆಮನೆ ಕೂಗಳತೆ ದೂರದ ಮನೆಯಲ್ಲಿ ದರೋಡೆ ನಡೆದಿದೆ. ಬೆಂಗಳೂರಿನ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನ (Theft) ನಡೆದಿದೆ.

ಕುಟುಂಬ ಸಮೇತ ಪ್ರವಾಸ ಹೋಗಿದ್ದ ವೇಳೆ ಒಂದೂವರೆ ಕೆಜಿ ಚಿನ್ನಾಭರಣ, ನಗದು ದೋಚಲಾಗಿದೆ. ಫೆ.4 ರಂದು ರಾಜಸ್ಥಾನ ಮೂಲದ ಮಂಜುಳಾ ದೇವಿ ಎಂಬುವರು ಕುಟುಂಬ ಸಮೇತ ಪ್ರವಾಸಕ್ಕೆ ಹೋಗಿದ್ದ ವೇಳೆ ಕಳ್ಳತನ ನಡೆದಿದೆ. ಇದನ್ನೂ ಓದಿ: ಟೈಮ್ಸ್‌ ನೌ ಸಮೀಕ್ಷೆ – NDA 366, INDIA 104 ಸೀಟ್‌: ಕರ್ನಾಟಕದಲ್ಲಿ ಬಿಜೆಪಿ ದಳ ಮೈತ್ರಿಗೆ 23 ಸ್ಥಾನ

 

ಹಾಡಹಗಲೇ ಪಕ್ಕದ ಮನೆ ಹತ್ತಿ ಜಂಪ್ ಮಾಡಿದ ಕಳ್ಳ ಗ್ರಿಲ್ ಕತ್ತರಿಸಿ ಕೃತ್ಯ ಎಸಗಿದ್ದಾನೆ. ಎರಡು ಮೂರು ದಿನ ಸತತವಾಗಿ ಬಂಗಲೆ ಗಮನಿಸಿದ್ದ ಕಳ್ಳ, ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ತಿಳಿದು ಕೃತ್ಯ ಎಸಗಿದ್ದಾನೆ.

ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ಕಳ್ಳ ಚಿನ್ನ, ಬೆಳ್ಳಿ ವಸ್ತುಗಳನ್ನ ಕದ್ದಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳನಿಗೆ ಬಲೆ ಬೀಸಿದ್ದಾರೆ.

Share This Article