1.5 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ವಶಕ್ಕೆ – 6 ಮಂದಿ ಅರೆಸ್ಟ್

Public TV
1 Min Read

ಬಳ್ಳಾರಿ/ವಿಜಯನಗರ: ಜಿಲ್ಲೆಯ ಹೊಸಪೇಟೆ ನಗರದ ಎಸ್.ವಿ.ಕೆ ಬಸ್ ನಿಲ್ದಾಣದ ಬಳಿ ಈ ಅಪರೂಪದ ತಿಮಿಂಗಿಲದ ವಾಂತಿಯನ್ನು ಮಾರಾಟ ಮಾಡುವುದಕ್ಕೆ ಯತ್ನಿಸುತ್ತಿದ್ದ ಆರು ಮಂದಿಯನ್ನು ಹೊಸಪೇಟೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಿಮಿಂಗಿಲದ ವಾಂತಿ ಮೌಲ್ಯದ ಅಂದಾಜು ಒಂದೂವರೆ ಕೋಟಿ ರೂಪಾಯಿಯಷ್ಟಾಗುತ್ತದೆ. ಇನ್ನು ಇವರಿಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಇನ್ನೂ ನಾಲ್ಕು ಜನರ ಮಾಹಿತಿ ದೊರೆತು ಅವರನ್ನು ಸಹ ಬಂಧಿಸಲಾಗಿದೆ. ಇದನ್ನೂ ಓದಿ: ದೇಶದಲ್ಲಿ 200ರ ಗಡಿದಾಟಿದ ಓಮಿಕ್ರಾನ್ ಸೋಂಕಿತರ ಸಂಖ್ಯೆ – ಮೋದಿ ಗುರುವಾರ ಮಹತ್ವದ ಸಭೆ

ಕೊಪ್ಪಳ ಜಿಲ್ಲೆ ಬಂಡಿ ಹರ್ಲಾಪುರದ ಲಂಬಾಣಿ ವೆಂಕಟೇಶ್ ಹಾಗೂ ಅಬ್ದುಲ್ ವಹಾಬ್ ಈ ತಿಮಿಂಗಿಲದ ವಾಂತಿಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ಮಾಡಿ ಇವರಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ವಿಚಾರಣೆಗೊಳಪಡಿಸಿದಾಗ, ಭಟ್ಕಳದ ಹಿರಮನೆ ಗಣಪತಿ, ಹುಬ್ಬಳ್ಳಿಯ ಪುಂಡಲೀಕ್ ಹಾಗೂ ಮಹೇಶ್ ಮತ್ತು ವಿಜಯಪುರ ಜಿಲ್ಲೆಯ ಶ್ರೀಧರ್ ಸಹ ಈ ದಂಧೆಯಲ್ಲಿ ಪಾಲುದಾರರಾಗಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಈ ನಾಲ್ವರನ್ನೂ ಇದೀಗ ಬಂಧಿಸಿದ್ದಾರೆ. ಇದನ್ನೂ ಓದಿ: ಎಂಇಎಸ್ ಇರಬೇಕಾದದ್ದು ಮಹಾರಾಷ್ಟ್ರದಲ್ಲಿ ಕರ್ನಾಟಕದಲ್ಲಿ ಅಲ್ಲ: ಶೋಭಾ ಕರಂದ್ಲಾಜೆ

ಬಹುತೇಕ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಈ ತಿಮಿಂಗಿಲದ ವಾಂತಿಯನ್ನು ಬಳಸಲಾಗುತ್ತದೆ. ಇನ್ನು ಕಾನೂನು ಪ್ರಕಾರ ಇದರ ಸಾಗಾಟ, ಶೇಖರಣೆ ಮತ್ತ ಮಾರಾಟ ಅಪರಾಧವಾಗಿದ್ದು, ಇನ್ನೂ ಹೆಚ್ಚಿನ ಪ್ರಮಾಣದ ತಿಮಿಂಗಿಲದ ವಾಂತಿಯ ಶೇಖರಣೆ ಕುರಿತು ಅನುಮಾನಗಳಿದ್ದು, ಅದರ ಕುರಿತು ತನಿಖೆ ನಡೆಸಲಾಗುತ್ತದೆ. ತಿಮಿಂಗಿಲದ ವಾಂತಿಗೂ ಸಹ ಇಷ್ಟೊಂದು ಬೇಡಿಕೆಯಿದೆ ಎಂದು ಇದೀಗ ಹೊಸಪೇಟೆಯ ಸಾರ್ವಜನಿಕರಿಗೆ ಗೊತ್ತಾಗಿದೆ. ಇನ್ನೂ ಸಹ ಹಲವು ಜನರು ಈ ದಂಧೆಯಲ್ಲಿ ಭಾಗಿಯಾಗಿರುವ ಮಾಹಿತಿ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *