ಟಿಬಿ ಡ್ಯಾಂನಿಂದ 1.30 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ರಾಯರ ಏಕಶಿಲಾ ವೃಂದಾವನ ಜಲಾವೃತ

Public TV
1 Min Read

– ಗುರುರಾಘವೇಂದ್ರ ಸ್ವಾಮಿಗಳ ಜಪದಕಟ್ಟೆ ಮುಳುಗಡೆ

ರಾಯಚೂರು: ತುಂಗಭದ್ರಾ ಜಲಾಶಯದಿಂದ 1.30 ಲಕ್ಷ ಕ್ಯೂಸೆಕ್ ನೀರಿನ್ನು ನದಿಗೆ ಬಿಡಲಾಗಿದ್ದು, ಪರಿಣಾಮ ರಾಯಚೂರಿನ ಎಲೆಬಿಚ್ಚಾಲಿ ಗ್ರಾಮದಲ್ಲಿರುವ ಗುರುರಾಘವೇಂದ್ರ ಸ್ವಾಮಿಗಳ ಏಕಶಿಲಾ ವೃಂದಾವನ ಜಲಾವೃತವಾಗಿದೆ.ಇದನ್ನೂ ಓದಿ: ಶಾಲೆಯಲ್ಲೇ ಹಿರಿಯ ವಿದ್ಯಾರ್ಥಿಗೆ ಚಾಕು ಇರಿತ – ಚಿಕಿತ್ಸೆ ಫಲಿಸದೇ ಬಾಲಕ ಸಾವು

ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿರುವುದರಿಂದ ಬಿಚ್ಚಾಲಮ್ಮ ದೇವಿ ದೇವಾಲಯ ಬಳಿಯ ರಾಯರ ವೃಂದಾವನಕ್ಕೆ ನೀರು ನುಗ್ಗಿದೆ. ಏಕಶಿಲಾ ವೃಂದಾವನ ದರ್ಶನ ಪಡೆಯಲು ಭಕ್ತರು ಪರದಾಡುತ್ತಿದ್ದು, ಅರ್ಚಕರು ನೀರಿನಲ್ಲೇ ತೆರಳಿ ಪೂಜೆ, ಅಭಿಷೇಕ ಮಾಡುತ್ತಿದ್ದಾರೆ. ಜೊತೆಗೆ ಗುರುರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿದ್ದ ಜಪದ ಕಟ್ಟೆ ಸಂಪೂರ್ಣ ಮುಳುಗಡೆಯಾಗಿದ್ದು, ಮಂತ್ರಾಲಯಕ್ಕೆ ಬರುವ ಭಕ್ತರು ಎಲೆಬಿಚ್ಚಾಲಿಗೆ ತಪ್ಪದೇ ಭೇಟಿ ನೀಡುತ್ತಾರೆ.

ರಾಯರ ಪರಮ ಭಕ್ತ ಅಪ್ಪಣ್ಣಾಚಾರ್ ನಿರ್ಮಿಸಿ ಪೂಜಿಸುತ್ತಿದ್ದ ವೃಂದಾವನ ಈಗ ಜಲಾವೃತವಾಗಿದೆ. ಎಲೆಬಿಚ್ಚಾಲಿಯ ಬಿಚ್ಚಾಲಮ್ಮ ದೇವಾಲಯ ಸುತ್ತಲೂ ನೀರು ಆವರಿಸಿದೆ. ಇಲ್ಲಿನ ಉಗ್ರನರಸಿಂಹ ದೇವಾಲಯ, ನಾಗದೇವತೆ ಕಟ್ಟೆ, ಶಿವಲಿಂಗ ಜಲಾವೃತವಾಗಿದ್ದು, ಮುಳುಗಡೆ ಹಂತದಲ್ಲಿವೆ. ತುಂಗಭದ್ರಾ ನದಿಗೆ ಇನ್ನೂ ಹೆಚ್ಚು ಪ್ರಮಾಣದ ನೀರು ಬಿಡುವ ಸಾಧ್ಯತೆಯಿದ್ದು, ಭಕ್ತರು ನದಿಗೆ ಇಳಿಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಒಂದೇ ತಿಂಗಳ ಅಂತರದಲ್ಲಿ 2ನೇ ಬಾರಿ ಜಾಲವೃತಗೊಂಡಿದೆ. ಇದನ್ನೂ ಓದಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಫಾರ್ಮ್‌ಹೌಸ್‌ನಲ್ಲಿ ದರೋಡೆಗೆ ಯತ್ನ – 15 ಮಂದಿ ದರೋಡೆಕೊರರ ಬಂಧನ

Share This Article