1 ಎಸೆತಕ್ಕೆ 2 ಬಾರಿ ರಿವ್ಯೂ – ಚರ್ಚೆಗೆ ಗ್ರಾಸವಾದ ರಹಮಾನ್ ಔಟ್ ತೀರ್ಪು

Public TV
1 Min Read

ದುಬೈ: ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 69 ರನ್‍ಗಳಿಂದ ಜಯಗಳಿಸಿದ್ದರೂ ಈಗ ಪಂಜಾಬ್ ಆಟಗಾರ ಮುಜೀಬ್ ಉರ್ ರಹಮಾನ್ ಔಟ್ ಆಗಿದ್ದ ಎಸೆತಕ್ಕೆ ಎರಡು ಬಾರಿ ರಿವ್ಯೂ ಪಡೆದುಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

14ನೇ ಓವರಿನ 5 ಎಸೆತವನ್ನು ಎದುರಿಸಲು ರಹಮಾನ್ ಸ್ಟ್ರೈಕ್‍ನಲ್ಲಿದ್ದರು. ಖಲೀಲ್ ಅಹ್ಮದ್ ಎಸೆದ ಎಸೆತವನ್ನು ಹೊಡೆಯಲು ಪ್ರಯತ್ನಿಸಿದರೂ ಬಾಲ್ ವಿಕೆಟ್ ಕೀಪರ್ ಬೈರ್‌ಸ್ಟೋವ್ ಕೈ ಸೇರಿತು. ಕೂಡಲೇ ಹೈದರಾಬಾದ್ ಆಟಗಾರರು ಔಟ್‍ಗೆ ಬಲವಾಗಿ ಮನವಿ ಮಾಡಿದರು. ಅಂಪೈರ್ ಯಾವುದೇ ನಿರ್ಧಾರ ಪ್ರಕಟಿಸದೇ ಬಾಲ್ ಬ್ಯಾಟಿಗೆ ಬಡಿದಿದ್ಯಾ ಇಲ್ಲವೋ ಎಂಬುದನ್ನು ಪರಿಶೀಲಿಸಲು ರಿವ್ಯೂ ನೋಡಲು ಮುಂದಾದರು. ಈ ವೇಳೆ ಬಾಲ್ ಬ್ಯಾಟಿಗೆ ತಾಗಿ ವಿಕೆಟ್ ಕೀಪರ್ ಕೈ ಸೇರಿದ ಕಾರಣ ಔಟ್ ಎಂದು ತೀರ್ಪು ನೀಡಿದರು.

ಔಟ್ ತೀರ್ಪಿನ ಹಿನ್ನೆಲೆಯಲ್ಲಿ ಕ್ರೀಸಿನಿಂದ ಹೊರ ನಡೆಯುತ್ತಿದ್ದಾಗ ಡ್ರೆಸ್ಸಿಂಗ್ ರೂಮ್‍ನಿಂದ ಡಿಆರ್‍ಎಸ್ ತೆಗೆದುಕೊಳ್ಳುವಂತೆ ಸೂಚನೆ ಬಂತು. ಕೂಡಲೇ ರಹಮಾನ್ ಮನವಿ ಮಾಡಿದರು. ಅಲ್ಟ್ರಾ ಎಡ್ಜ್‌ನಲ್ಲಿ ಬಾಲ್ ಬ್ಯಾಟಿಗೆ ತಾಗಿರುವ ಧ್ವನಿ ಕೇಳಿಸಿತು. ಮೂರನೇ ಅಂಪೈರ್ ಸಹ ಔಟ್ ತೀರ್ಪು ನೀಡಿದರು.

ಫೀಲ್ಡ್‌ನಲ್ಲಿರುವ ಅಂಪೈರ್ ಅವರಿಗೆ ಅಲ್ಟ್ರಾ ಎಡ್ಜ್ ನೋಡಿ ತೀರ್ಪು ನೀಡಲು ಬರುವುದಿಲ್ಲ. ಹೀಗಾಗಿ ಮೊದಲ ಬಾರಿ ರಿವ್ಯೂ ನೋಡುವಾಗ ಅಲ್ಟ್ರಾ ಎಡ್ಜ್ ನೋಡಿರಲಿಲ್ಲ. ಈ ಕಾರಣಕ್ಕೆ ಡಿಆರ್‍ಎಸ್ ತೆಗೆದುಕೊಳ್ಳಲಾಯಿತು. ಇದನ್ನೂ ಓದಿ: ಕೆಲ ಸಿಎಸ್‍ಕೆ ಆಟಗಾರರು ತಂಡದಲ್ಲಿ ತಮ್ಮ ಸ್ಥಾನವನ್ನು ಸರ್ಕಾರಿ ಕೆಲಸ ಅಂದ್ಕೊಂಡಿದ್ದಾರೆ: ಸೆಹ್ವಾಗ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ಪರ ಬೈರ್‌ಸ್ಟೋವ್ 92 ರನ್(55 ಎಸೆತ 7 ಬೌಂಡರಿ, 6 ಸಿಕ್ಸರ್) ಡೇವಿಡ್ ವಾರ್ನರ್ 52 ರನ್(40 ಎಸೆತ, 5 ಬೌಂಡರಿ 1 ಸಿಕ್ಸರ್) ಹೊಡೆದ ಪರಿಣಾಮ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ್ದ ಪಂಜಾಬ್ 16.5 ಓವರ್‌ಗಳಿಗೆ 132 ರನ್‍ ಗಳಿಸಿ  ಆಲೌಟ್ ಆಯ್ತು.

Share This Article
Leave a Comment

Leave a Reply

Your email address will not be published. Required fields are marked *