ಹೋಟೆಲಿನಲ್ಲಿ ಸ್ಟಾರ್ ನಟರೊಬ್ಬರಿಂದ ವೇಟರ್ ಮೇಲೆ ಹಲ್ಲೆ – ಬೊಮ್ಮಾಯಿಗೆ ಇಂದ್ರಜಿತ್ ದೂರು

Public TV
1 Min Read

ಬೆಂಗಳೂರು: ಸ್ಟಾರ್ ನಟರೊಬ್ಬರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರು ಇಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ದೂರು ನೀಡಿದ್ದಾರೆ.

ಮೈಸೂರಿನ ಸಂದೇಶ್ ನಾಗರಾಜ್ ಮಾಲೀಕತ್ವದ ಹೋಟೇಲಿನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣದ ಸಂಪೂರ್ಣ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಸ್ಟಾರ್ ನಟ,  ಹೋಟೇಲಿನಲ್ಲಿ ದಲಿತ ವೇಟರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದ್ರಜಿತ್ ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಇಂದ್ರಜಿತ್, ಸಂದೇಶ್ ನಾಗರಾಜ್ ಹೋಟೆಲಿನಲ್ಲಿ ನಟರೊಬ್ಬರು ದಲಿತ ಸಮುದಾಯದ ವೇಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ವೇಟರ್ ಗೆ ಕಣ್ಣುಗಳಿಗೆ ಹಾನಿಯಾಗಿದೆ. ಸಿಸಿ ಟಿವಿ ದೃಶ್ಯ ಇದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಎಂದು ಇಂದ್ರಜಿತ್ ಆಗ್ರಹಿಸಿದ್ದಾರೆ. ಆದರೆ ನಟನ ಹೆಸರನ್ನು ಮಾತ್ರ ಇಂದ್ರಜಿತ್ ಮನವಿಯಲ್ಲಿ ಉಲ್ಲೇಖ ಮಾಡಿಲ್ಲ.

ನಾನು ಸಾಮಾನ್ಯರ ಪರ. ಪ್ರತಿಯೊಂದು ಕೇಸ್ ನಲ್ಲಿ ಸಾಮಾನ್ಯರಿಗೆ ನ್ಯಾಯ ಸಿಗ್ತಿಲ್ಲ. ಹೀಗಾಗಿ ಈ ಪ್ರಕರಣದಲ್ಲಾದರೂ ನ್ಯಾಯ ಸಿಗಲಿ ಎಂದು ಇಂದ್ರಜಿತ್ ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *