ಹೊಂಬಾಳೆ ಸಮೂಹದ ಎಲ್ಲ ಸಿಬ್ಬಂದಿ, ಕುಟುಂಬ ಸದಸ್ಯರಿಗೆ ಉಚಿತ ಕೋವಿಡ್‌ ಲಸಿಕೆ

Public TV
1 Min Read

ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಣ ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರತಿಷ್ಠಿತ ಹೊಂಬಾಳೆ ಸಮೂಹವು ತನ್ನ ಉದ್ಯೋಗಿಗಳು, ನೌಕರರು ಹಾಗೂ ಅವರ ಅವಲಂಬಿತ ಅಂದಾಜು ಐದು ಸಾವಿರ ಮಂದಿಗೆ ಉಚಿತವಾಗಿ ಕೋವಿಡ್‌ ಲಸಿಕೆ ಹಾಕಿಸಲು ನಿರ್ಧರಿಸಿದೆ.

ತನ್ನೊಂದಿಗೆ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಹೊಂಬಾಳೆ ಸಮೂಹವು ಎಲ್ಲರ ವ್ಯಾಕ್ಸಿನೇಶನ್‌ಗೆ ಆಗುವ ಪೂರ್ಣ ವೆಚ್ಚವನ್ನು ತಾನೇ ಭರಿಸಲಿದೆ.

ಹೊಂಬಾಳೆ ಫಿಲ್ಮ್‌ ಬ್ಯಾನರ್‌ನಡಿ ಕೆಲಸ ಮಾಡುವ ಎಲ್ಲ ಸದಸ್ಯರು ಹಾಗೂ ಪೂರಕ ಸಿಬ್ಬಂದಿ ಹಾಗೂ ಅವರ ಅವಲಂಬಿತರೆಲ್ಲರಿಗೂ ವ್ಯಾಕ್ಸಿನ್‌ ನೀಡಲಾಗುವುದು. ಜತೆಗೆ ಹೊಂಬಾಳೆ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯ ಎಂದು ಹೊಂಬಾಳೆ ಸಮೂಹದ ಪ್ರಕಟಣೆ ತಿಳಿಸಿದೆ.

ಕೇಂದ್ರ ಸರಕಾರ ಮಾರ್ಗಸೂಚಿಯಂತೆ ಮುಂದಿನ ಹಂತದಲ್ಲಿ ಅವರವರ ವಯೋಮಿತಿ ಆಧಾರದ ಮೇಲೆ ಕೋವಿಡ್‌ ವ್ಯಾಕ್ಸಿನ್‌ ಕೊಡಿಸಲಾಗುವುದು ಮತ್ತು ನಮ್ಮವರ ಆರೋಗ್ಯದ ಜತೆಗೆ ಅವರ ಕುಟುಂಬದ ಆರೋಗ್ಯವೂ ನಮಗೆ ಮುಖ್ಯವಾಗಿದೆ ಎಂದು ಸಂಸ್ಥೆ ಹೇಳಿದೆ.

https://twitter.com/VKiragandur/status/1374705049268482050

Share This Article
Leave a Comment

Leave a Reply

Your email address will not be published. Required fields are marked *