ಹೆಲ್ಮೆಟ್ ಮರೆತ್ರೆ ದಂಡ, ಡಿಎಲ್ ಅಮಾನತು – ಸಾರಿಗೆ ಇಲಾಖೆಯಿಂದ ಮಹತ್ವದ ಆದೇಶ

Public TV
1 Min Read

ಬೆಂಗಳೂರು: ಹೆಲ್ಮೆಟ್ ಹಾಕದ ದ್ವಿಚಕ್ರ ವಾಹನಗಳನ್ನು ಹತ್ತುವವರು ಇನ್ಮುಂದೆ ಎಚ್ಚರಿಕೆಯಿಂದಿರಬೇಕು. ರಾಜ್ಯ ಸಾರಿಗೆ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು, ಹೆಲ್ಮೆಟ್ ಹಾಕದಿದ್ದರರೆ ದಂಡದ ಜೊತೆ ಮೂರು ತಿಂಗಳು ನಿಮ್ಮ ಚಾಲನಾ ಪರವಾನಿಗೆ (ಡಿಎಲ್) ರದ್ದಾಗಲಿದೆ. ಮೋಟಾರು ಕಾಯ್ದೆ 1988ರ ಕಲಂ 194ರ ಅನ್ವಯ ಸರ್ಕಾರ ಆದೇಶಿಸಿದೆ.

4 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಜೊತೆಗೆ ಹಿಂಬದಿ ಸವಾರರು ಸಹ ಕಡ್ಡಾಯವಾಗಿ ಹೆಲ್ಮೆಟ್ ಹಾಕಬೇಕು. ರಾಜ್ಯದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 230 ಉಪ ನಿಯಮ (1)ರ ಪ್ರಕಾರ ಎಲ್ಲ ದಿಚಕ್ರ ವಾಹನ ಸವಾರರು, ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಹೆಲ್ಮೆಟ್ ಧರಿಸದೇ ಸಂಚರಿಸುವ ಪರಿಣಾಮವಾಗಿ ರಸ್ತೆ ಅಪಘಾತಗಳಲ್ಲಿ ಸವಾರರು ಸಾವನ್ನಪ್ಪುತ್ತಿದ್ದಾರೆ. ಇಂತಹ ಮರಣ/ತೀವ್ರತರವಾದ ಗಾಯಗಳನ್ನ ತಡೆಗಟ್ಟಲು ಮೋಟಾರು ವಾಹನಗಳ ಕಾಯ್ದೆಯಡಿ ದಂಡ ಮತ್ತು ಡಿಎಲ್ ಅಮಾನತುಗೊಳಿಸಲು ಸರ್ಕಾರ ಮುಂದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *