ಹೆಣದ ಮೇಲೆ ಹಣದಾಟ – ಅಂಬುಲೆನ್ಸ್ ದಂಧೆಯ ಕರಾಳ ಮುಖ

Public TV
2 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಂಬುಲೆನ್ಸ್ ದಂಧೆಯ ಕರಾಳ ಮುಖ ಅನಾವರಣಗೊಳ್ಳುತ್ತಿದೆ. ಬದುಕಿರುವ ವ್ಯಕ್ತಿಗಳನ್ನು ಕರೆದುಕೊಂಡು ಹೋದರೆ ದುಡ್ಡು ಬರಲ್ಲ, ಅದೇ ಸತ್ತವರನ್ನು ಹಾಕಿಕೊಂಡರೆ ಜಾಸ್ತಿ ದುಡ್ಡು ಬರುತ್ತದೆ ಎಂಬ ಕಾರಣಕ್ಕೆ ಕೆಲ ಚಾಲಕರು ಹಣವನ್ನು ಕೊಳ್ಳೆ ಹೊಡೆಯಲು ಮುಂದಾಗಿದ್ದಾರೆ.

ದುಡ್ಡು ಹೊಡೆಯುವುದು ಮಾತ್ರ ಅಲ್ಲದೇ ಕೆಲ ಅಂಬುಲೆನ್ಸ್ ಗಳು ಈಗ ಕೊರೊನಾ ಸೂಪರ್ ಸ್ಪ್ರೆಡರ್ ಗಳು ಆಗಿವೆ. ಕೊರೊನಾ ಮೃತದೇಹ ಸಾಗಿಸಿದ ಬಳಿಕ ಗಾಡಿಯನ್ನು ತೊಳೆದು ಸ್ಯಾನಿಟೈಸ್ ಮಾಡಬೇಕು. ಆದರೆ ಅಂಬುಲೆನ್ಸ್ ಗಳು ಈ ನಿಯಮವನ್ನು ಪಾಲನೆ ಮಾಡದ ಕಾರಣ ಕೊರೊನಾ ಉಳಿದವರಿಗೂ ಹರಡುತ್ತಿದೆ. ಈ ಎಲ್ಲ ವಿಚಾರಗಳು ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್  ವೇಳೆ ಬಯಲಾಗಿದೆ.

ಹೆಣದ ಮೇಲೆ ಹಣದಾಟ
ಪ್ರತಿನಿಧಿ – ಎರಡ್ ಟಿಟಿ ಇದೆ ಒಂದ್ ಅಟ್ಯಾಚ್ ಮಾಡಿಸಿಕೊಡಿ ಅಣ್ಣಾ..
ಚಾಲಕ – ಎಲ್ಲಿಗೆ..?
ಪ್ರತಿನಿಧಿ – ಯಾವುದಕ್ಕಾದ್ರೂ ಸರಿ..?
ಚಾಲಕ – ಬಿಬಿಎಂಪಿಗೆ ಮಾಡಿಸಬಹುದು, ಆದ್ರೆ ದುಡ್ಡು ಬರಲ್ಲ, ನ್ಯಾಯವಾಗಿ ಬಿಲ್ಲೂ ಕೊಡಲ್ಲ
ಪ್ರತಿನಿಧಿ – ಗಾಡಿ ಸುಮ್ಮನೆ ಮನೆ ಹತ್ರ ನಿಂತಿದೆ.

ಚಾಲಕ – ಗಾಡಿ ಹೇಗಿದೆ ಹಾಗೇ ಇರಲಿ, ಮೇಲ್ಗಡೆ ಸೈರನ್ ಲೈಟ್, ಹಿಂದೆ-ಮುಂದೆ ಅಂಬುಲೆನ್ಸ್ ಅನ್ನೋ ಸ್ಟಿಕ್ಕರ್ ಜೊತೆಗೆ ಪ್ಲಸ್ ಮಾರ್ಕ್ ಹಾಕ್ಕೊಂಡು ಹೊಡೀತಾ ಇರಿ
ಪ್ರತಿನಿಧಿ – ಬಾಡಿಗೆ ಸಿಗುತ್ತಾ..?
ಚಾಲಕ – ಬಾಡಿಗೆ ಸಿಕ್ಕೇ ಸಿಗುತ್ತೆ, 60 ಸಾವಿರ ಬಿಲ್ಲು ಮುಖ ನೋಡಿ 4 ತಿಂಗಳು ದುಡಿದು ಅನುಭವಿಸಿದ್ದಿನಿ, ಬಿಲ್ ಕೊಡದೇ ಗಾಡಿ ಮಾರಿದ್ದೀನಿ.

ಪ್ರತಿನಿಧಿ – ಗಾಡಿ ಸುಮ್ಮನೆ ಇದೆ
ಚಾಲಕ – ಹಿಂದೆ ಮುಂದೆ ಸ್ಟಿಕರ್, ಪ್ಲಸ್ ಮಾರ್ಕ್ ಸಾಕು, ಜನ ಕೇಳಿಕೊಂಡ್ ಬರ್ತಾರೆ.
ಪ್ರತಿನಿಧಿ – ಹೆಂಗೆ..?
ಚಾಲಕ – ಹಿಂದೆ ಮೂರ್ ಸೀಟ್ ಬಿಚ್ಚಾಕಿ, ರಟ್ಟು-ಗಿಟ್ಟು ಹಾಕಿ, ಬರ್ತಾ ಇರ್ತವೆ, ಮಲಗಿಸಿಕೊಂಡು ಹೋಗ್ತಾ ಇರಿ
ಪ್ರತಿನಿಧಿ – ಹಂಗಾ..?
ಚಾಲಕ – ಬಿಬಿಎಂಪಿನಾ ನಂಬೋಕೆ ಹೋಗ್ಬೇಡಿ, ಬಿಲ್ಲೇ ಆಗಲ್ಲ
ಪ್ರತಿನಿಧಿ – ನಮ್ ಹುಡುಗ ಫಸ್ಟ್ ಲಾಕ್‍ಡೌನ್‍ನಲ್ಲಿ ಒಂದೂವರೆ ಲಕ್ಷ ಬಿಲ್‍ವರೆಗೂ ಕೆಲಸ ಮಾಡಿದ್ದ, ಆದ್ರೆ ಒಂದ್ ರೂಪಾಯಿ ಕೊಟ್ಟಿಲ್ವಂತೆ
ಚಾಲಕ – ಅದೇ ಹೇಳಿದ್ದು..

 

ಹೆಣದ ಮೇಲೆ ಹಣದಾಟ..!
ಚಾಲಕ – ಎರಡ್ ಗಾಡಿ ಓನರ್ ಆಗಿದ್ದೋನು. ಈಗ ನಾನೇ ಬಾಡಿಗೆ ಗಾಡಿ ಹೊಡೀತಿದ್ದೀನಿ
ಪ್ರತಿನಿಧಿ – ಹಂಗೆ ಮಾಡಿದ್ರೆ ಅಫೆನ್ಸಾ..?
ಚಾಲಕ – ಏನ್ ಆಗಲ್ಲ .. ಸಿಕ್ತಾ ರುಬ್ಬಿ…. ಕೇಳೋರೇ ಇಲ್ಲ
ಪ್ರತಿನಿಧಿ – ದುಡ್ಡ್ ಹೆಂಗಣ್ಣ..?
ಚಾಲಕ- ರೂಲ್ಸ್ ಇದೆ.. ನೀವು 25 ಸಾವಿರಕ್ಕೆ ಶುರು ಮಾಡಿ, 20ಕ್ಕೆ ಓಕೆ ಮಾಡಿ.. ಏನೂ ಲಾಸ್ ಆಗಲ್ಲ
ಪ್ರತಿನಿಧಿ – ಓಕೆ ಅಣ್ಣ

ಚಾಲಕ – ನಮ್ಮ ಹತ್ರ ಅಂಬುಲೆನ್ಸ್ ಇದೆ.. 500 ಡೀಸೆಲ್‍ಗೆ ಹೋಗುತ್ತಾ..? ಗಾಡಿ ವಾಷಿಂಗ್‍ಗೆ 500 ಹೋಗುತ್ತೆ, ಈಗ ಯಾವ ವಾಷಿಂಗೂ ಮಾಡಿಸಲ್ಲ
ಪ್ರತಿನಿಧಿ – ಸ್ಯಾನಿಟೈಸ್ ಮಾಡಿಸಲ್ವಾ..?
ಚಾಲಕ – ಯಾವ್ ಸ್ಯಾನಿಟೈಜ್.. ರುಬ್ತಾ ಇರ್ತೀವಿ… ಕೈಯಲ್ಲಿ ಗ್ಲೌಸ್ ಇಲ್ಲ, ಕಿಟ್ ಇಲ್ಲ, ಇದೇ ಮಾಸ್ಕನ್ನು 3-4 ದಿನದಿಂದ ಯೂಸ್ ಮಾಡ್ತೀವಿ
ಪ್ರತಿನಿಧಿ – ಹೌದಾ..?
ಚಾಲಕ – ಮೊದಲ ಸಲ ಕೊರೋನಾ ಬಂದಾಗ ಎಲ್ಲರೂ ಹೆದರಿದ್ರು, 15 ದಿನ ಆದ್ಮೇಲೆ ಈಗ ಯಾರೂ ಕ್ಯಾರೇ ಅನ್ನೋರಿಲ್ಲ
ಪ್ರತಿನಿಧಿ – ಸರಿ ಅಣ್ಣ ಥ್ಯಾಂಕ್ಸ್ ಅಣ್ಣ

Share This Article
Leave a Comment

Leave a Reply

Your email address will not be published. Required fields are marked *