ಹೆಚ್‍ಡಿಕೆ ಹೇಳಿಕೆ ಕಾಲಕ್ಕೆ ತಕ್ಕಂತೆ ಬದಲಾಗುತ್ತೆ: ಶೆಟ್ಟರ್

Public TV
1 Min Read

ಯಾದಗಿರಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಯಾದಗಿರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಡ್ರಗ್ ಮಾಫಿಯಾದ ಹಣದಿಂದ ಮೈತ್ರಿ ಸರ್ಕಾರ ಉರುಳಿತು ಎಂದು ಕುಮಾರಸ್ವಾಮಿ ಅವರು ಅವತ್ತೇ ಹೇಳಬೇಕಿತ್ತು. ಇವತ್ತು ನೆನಪಾಗಿದೆಯಾ? ಒಂದು ಕಡೆ ಸಿದ್ದರಾಮಯ್ಯನವರ ತಂತ್ರಗಾರಿಕೆಯಿಂದ ಸರ್ಕಾರ ಪತನವಾಯ್ತು ಅಂತಾ ಹೇಳ್ತಾರೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ವಿಷಯಗಳೊಂದಿಗೆ ಹೇಳಿಕೆಗಳು ಬದಲಾಗುತ್ತಿರುತ್ತೆ ಎಂದು ಕುಮಾರಸ್ವಾಮಿ ಅವರ ಆರೋಪಗಳಿಗೆ ತಿರುಗೇಟು ನೀಡಿದರು.

ಕಾಲಕ್ಕೆ ತಕ್ಕಂತೆ ಬದಲಾಗುವ ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಯಾವುದೇ ಅರ್ಥವಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದವರು, ಅವರ ಕಾಲದಲ್ಲಿ ಡ್ರಗ್ ಮಾಫಿಯಾ ಇರಲಿಲ್ಲವಾ? ಡ್ರಗ್ ಮಾಫಿಯಾ ಬಗ್ಗೆ ಗುಪ್ತಚರ ಮಾಹಿತಿ ನೀಡಿರಲಿಲ್ಲವಾ? ಅಧಿಕಾರದಲ್ಲಿದಾಗ ಡ್ರಗ್ ಮಾಫಿಯಾ ಬಗ್ಗೆ ಹೇಳಬೇಕಿತ್ತು ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿಯಿಂದ ಡ್ರಗ್ಸ್ ಮಾಫಿಯಾ ಹಣ ಬಳಕೆ- ಎಚ್‍ಡಿಕೆ

ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸರ್ಕಾರ ಯಾವುದೇ ಮುಲಾಜಿಗೆ ಒಳಗಾಗುವದಿಲ್ಲ. ಪ್ರಕರಣದಲ್ಲಿ ಯಾರೇ ಇರಲಿ ಅವರ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಜರುಗಿಸುತ್ತೆ. ಡ್ರಗ್ ಮಾಫಿಯಾ ಸದೆ ಬಡಿಯಲು ಗೃಹ ಇಲಾಖೆ ಎಲ್ಲ ಕೆಲಸಗಳನ್ನ ಮಾಡುತ್ತಿದೆ ಎಂದರು. ಇದನ್ನೂ ಓದಿ: ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಬಗ್ಗೆ ಮಾತನಾಡ್ತಿದ್ದಾರೆ- ಸುಧಾಕರ್‌ಗೆ ಎಚ್‍ಡಿಕೆ ಟಾಂಗ್

Share This Article
Leave a Comment

Leave a Reply

Your email address will not be published. Required fields are marked *