ಹೆಚ್‍ಡಿಕೆಗೆ ಗುಡ್‍ವಿಲ್ ಇದ್ರೆ ತಾನೇ ಹಾಳಾಗೋದು?: ಸಿದ್ದರಾಮಯ್ಯ

Public TV
2 Min Read

– ಕಣ್ಣೀರು ಹಾಕೋದು ದೇವೇಗೌಡರ ಕುಟುಂಬದ ಸಂಸ್ಕೃತಿ

ಬೆಳಗಾವಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಗುಡ್‍ವಿಲ್ ಇದ್ರೆ ತಾನೇ ಹಾಳಾಗೋದು. ಸುಳ್ಳು ಹೇಳುವದರಲ್ಲಿ ಕುಮಾರಸ್ವಾಮಿ ನಿಪುಣರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯನವರು, 37 ಸೀಟ್ ಗೆದ್ದವರನ್ನ ಸಿಎಂ ಮಾಡಿದ್ದು ಯಾರಿಗೆ ಲಾಭವಾಯ್ತು? 80 ಕ್ಷೇತ್ರಗಳಲ್ಲಿ ಗೆದ್ದಿದ್ದರೂ ಕುಮಾರಸ್ವಾಮಿ ಅವರನ್ನ ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ಪದೇ ಪದೇ ಕಣ್ಣೀರು ಹಾಕೋದು ದೇವೇಗೌಡರ ಕುಟುಂಬ ಸಂಸ್ಕೃತಿ. ಹಾಗಾಗಿ ಸಿಎಂ ಆದ ಒಂದೇ ತಿಂಗಳಿಗೆ ಕಣ್ಣೀರು ಹಾಕಿರಬಹುದು. ಆ ಕಣ್ಣೀರಿಗೆ ಕಾಂಗ್ರೆಸ್ ಕಾರಣ ಅಲ್ಲ ಮತ್ತು ಅದಕ್ಕೆ ಬೆಲೆಯೂ ಇಲ್ಲ ಎಂದು ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತ್ಯುತ್ತರ ನೀಡಿದರು.

ಸಿಎಂ ಆಗಿ ವೆಸ್ಟ್ ಆ್ಯಂಡ್ ಹೋಟೆಲ್ ನಿಂದ ಆಡಳಿತ ನಡೆಸಿ, ಒಬ್ಬ ಶಾಸಕರಿಗೂ ಸಿಗಲಿಲ್ಲ. ಕುಮಾರಸ್ವಾಮಿ ತಮ್ಮ ಮನೆಯಿಂದ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಿದ್ರಾ? ಅದರಲ್ಲಿ ಏನು ದೊಡ್ಡಸ್ಥಿಕೆ. ಕುಮಾರಸ್ವಾಮಿ ನೀಡುವ ಬೇಜವಾಬ್ದಾರಿ ಹೇಳಿಕೆಗಳಿಗೆ ಉತ್ತರವೇ ನೀಡಬಾರದು. ಹೋಟೆಲ್ ನಲ್ಲಿ ಕುಳಿತು ಆಡಳಿತ ನಡೆಸಿದ್ರೆ ಶಾಸಕರ ವಿಶ್ವಾಸ ಹೇಗೆ ಗಳಿಸೋಕೆ ಆಗುತ್ತೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದನ್ನೂ ಓದಿ: ಬಿಜೆಪಿ ಜೊತೆ ಸೇರಿದ್ರೆ 5 ವರ್ಷ ನಾನೇ ಸಿಎಂ ಆಗುತ್ತಿದ್ದೆ: ಕುಮಾರಸ್ವಾಮಿ

ಮೈತ್ರಿ ಸರ್ಕಾರ ಪತನವಾಗಿದ್ರೆ ಕುಮಾರಸ್ವಾಮಿ ಹೋಟೆಲ್ ನಲ್ಲಿ ಕುಳಿತಿದಕ್ಕೆ ಹೊರತು ಬೇರೆ ಯಾರೂ ಕಾರಣರಲ್ಲ. ದೇವೇಗೌಡರ ಕುಟುಂಬ ಯಾರನ್ನೂ ಬೆಳೆಸಲ್ಲ, ಅವರ ಕುಟುಂಬದವರನ್ನು ಮಾತ್ರ ಬೆಳೆಸುತ್ತಾರೆ. ಬೆಳೆಸಿದ್ದೀವಿ ಅಂತ ನಾಟಕ ಮಾಡುತ್ತಾರೆ ಎಂದರು. ಇದನ್ನೂ ಓದಿ: ಕುಮಾರಸ್ವಾಮಿ ಬಿಜೆಪಿ ಜೊತೆ ಬಂದಿದ್ರೆ ಸಿಎಂ ಆಗ್ತಿರಲಿಲ್ಲ: ಅಶ್ವಥ್ ನಾರಾಯಣ್

ಹೆಚ್‍ಡಿಕೆ ಹೇಳಿದ್ದೇನು?: ನಮ್ಮ ಪಕ್ಷವನ್ನು ಬಿ ಟೀಂ ಎಂದು ಪದೇ ಪದೇ ಹೇಳಿ ಬಿಜೆಪಿಗೆ ಹೆಚ್ಚು ಸ್ಥಾನ ಬರುವಂತೆ ಮಾಡಿದರು. ಈಗಲೂ ವಿಪಕ್ಷವಾಗಿ ಕಾಂಗ್ರೆಸ್ ಗಟ್ಟಿಯಾದ ವಿಚಾರ ಹಿಡಿದು ಕೊಂಡು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತಿಲ್ಲ. ಉಪಚುನಾವಣೆಯ ಸೋಲಿನ ಬಗ್ಗೆ ನಡೆದ ಆತ್ಮಾವಲೋಕನಾ ಸಭೆಯಲ್ಲಿ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಹಗರುವಾಗಿ ಕಾಣಬಾರದು ಎಂದು ತಿಳಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಚ್‍ಡಿಕೆ, ಕಾಂಗ್ರೆಸ್ ನ ಸೋಲು, ಗೆಲುವು ಜೆಡಿಎಸ್ ಮೇಲೆ ನಿಂತಿದೆ ಎಂಬುದು ಕಾಂಗ್ರೆಸ್ ನ ಮಾಜಿ ಸಿಎಂ ನ ಹೇಳಿಕೆಯಿಂದ ಗೊತ್ತಾಗುತ್ತದೆ ಎಂದರು.

ಸಿದ್ದರಾಮಯ್ಯ ಯಾರನ್ನು ಯಾವಾಗ ಭೇಟಿ ಮಾಡುತ್ತಾರೆ ಎಂಬುದು ನನಗೆ ಗೊತ್ತು. ಮೊನ್ನೆಯೂ ಅವರು ಯಾರನ್ನು ಎಲ್ಲಿ ಭೇಟಿ ಮಾಡಿದ್ದಾರೆ ಎನ್ನುವುದು ನನಗೆ ತಿಳಿದಿದೆ. ನಾನು ಸಿಎಂ ಅವರನ್ನು ಭೇಟಿ ಮಾಡಿದರೂ ಕದ್ದು ಮುಚ್ಚಿ ಭೇಟಿ ಮಾಡುವುದಿಲ್ಲ ಎಂದರು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು, ಕೃಷ್ಣಾ ಬಿಟ್ಟು ಈ ಸರ್ಕಾರ ಎಲ್ಲೂ ಬಂದಿಲ್ಲ – ಡಿಕೆಶಿ

Share This Article
Leave a Comment

Leave a Reply

Your email address will not be published. Required fields are marked *