ಹೆಂಡತಿಯನ್ನು ಕೊಂದು ತನ್ನ ಕೋಣೆಯಲ್ಲೇ ಸುಟ್ಟ 84ರ ವೃದ್ಧ

Public TV
1 Min Read

ಮುಂಬೈ: 84 ವರ್ಷ ವಯಸ್ಸಿನ ವೃದ್ಧರೊಬ್ಬರು ತನ್ನ ಪತ್ನಿಯನ್ನು ಕ್ಷುಲ್ಲಕ ಕಾರಣಕ್ಕೆ ಕೊಂದು ಸುಟ್ಟ ಘಟನೆ ಮಹಾರಾಷ್ಟ್ರದ ಡೊಂಬಿವಾಲಿಯಲ್ಲಿ ನಡೆದಿದೆ.

ಆರೋಪಿ ವೃದ್ಧನನ್ನು 84 ವರ್ಷದ ಬಲಿರಾಮ್ ಪಾಟೀಲ್ ಎಂದು ಗುರುತಿಸಲಾಗಿದೆ. ಬಲಿರಾಮ್ ಪಾಟೀಲ್ ಅವರ ಮಗ ರಮಾಕಾಂತ್ ಪಾಟೀಲ್ ಕಲ್ಯಾಣ್ ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಶನ್‍ನ ಕಾರ್ಪೊರೇಟರ್ ಆಗಿದ್ದಾರೆ.

ರಾತ್ರಿ ವೇಳೆ ಆರೋಪಿ ಬಲಿರಾಮ್ ಪಾಟೀಲ್ ಮತ್ತು ಅವರ ಪತ್ನಿ 80 ವರ್ಷ ಪ್ರಾಯದ ಪಾರ್ವತಿ ಅವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಇದರಿಂದ ಕೋಪಗೊಂಡ ಬಲಿರಾಮ್ ಪಾಟೀಲ್ ತಮ್ಮ ಪತ್ನಿ ಪಾರ್ವತಿ ಅವರಿಗೆ ಚಾಕುವಿನಿಂದ ಹಲವುಬಾರಿ ಚುಚ್ಚಿದ್ದಾರೆ. ನಂತರ ಶವವನ್ನು ಬೆಂಕಿ ಹಚ್ಚಿ ಸುಟ್ಟಿದ್ದಾರೆ.

 

ಬೆಳಗ್ಗೆ ರಮಾಕಾಂತ್ ಅವರ ಹೆಂಡತಿ ಎದ್ದಾಗ ಪಕ್ಕದ ಕೋಣೆಯಿಂದ ಹೊಗೆ ಬರುತ್ತಿದ್ದನ್ನು ಗಮನಿಸಿ ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ರಮಾಕಾಂತ್ ಘಟನೆಯನಂತರ ತಂದೆಯನ್ನು ಮನೆಯಲ್ಲಿ ಹುಡುಕಾಡಿದಾಗ ಅವರು ಮನೆಯಿಂದ ಪರಾರಿಯಾಗಿದ್ದರು. ನಂತರ ಸ್ಥಳೀಯ ಮನ್ಪಾಡಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ಬಲಿರಾಮ್ ಅವರನ್ನು ಬಂಧಿಸಿದ್ದಾರೆ. ಪೊಲೀಸರೊಂದಿಗೆ ಘಟನೆಯ ಬಗ್ಗೆ ವಿವರಿಸಿ ತಾನೆ ಪತ್ನಿಯನ್ನು ಚೂರಿಯಿಂದ ಇರಿದು ನಂತರ ಸುಟ್ಟಿರುವುದಾಗಿ ಬಲಿರಾಮ್ ಒಪ್ಪಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *