ಹುಲಿಗೆಮ್ಮ ದೇವಸ್ಥಾನದ ಸುತ್ತಲು 144 ಸೆಕ್ಷನ್ ಜಾರಿ

Public TV
2 Min Read

ಕೊಪ್ಪಳ: ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳವಾಗಿರುವ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿಯ ಸಾರ್ವಜನಿಕ ದರ್ಶನ ಈ ವಾರವು ಸ್ಥಗಿತಗೊಳಿಸಲಾಗಿದೆ. ಇಂದಿನಿಂದ ನಾಳೆ ಮಧ್ಯರಾತ್ರಿಯವರೆಗೂ ಹುಲಿಗೆಮ್ಮ ದೇವಸ್ಥಾನದ ಸುತ್ತಲು ಕಲಂ 144ರ ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.

ಈ ಮಧ್ಯೆ ಲಾಕ್ ಡೌನ್ ನಿಂದಾಗಿ ದೇವಸ್ಥಾನಕ್ಕೆ ಮೂರು ತಿಂಗಳಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿ ಆದಾಯಕ್ಕೆ ಖೋತಾ ಬಿದ್ದಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಹಾಗೂ ತೆಲಂಗಾಣದ ಲಕ್ಷಾಂತರ ಭಕ್ತರನ್ನು ಹೊಂದಿರುವ ಕೊಪ್ಪಳ ಜಿಲ್ಲೆಯ ತುಂಗಭದ್ರಾ ತಟದಲ್ಲಿರುವ ಹುಲಿಗಿಯ ಹುಲಿಗೆಮ್ಮ ದೇವಸ್ಥಾನವು ಏಪ್ರಿಲ್ 24 ರಿಂದ ಭಕ್ತರಿಗೆ ದೇವಿ ದರ್ಶನ ಬಂದ್ ಮಾಡಲಾಗಿದೆ.

ಪ್ರತಿ ಹುಣ್ಣಿಮೆ ಹಾಗೂ ಮಂಗಳವಾರ, ಶುಕ್ರವಾರ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ರಾತ್ರಿ 12 ಗಂಟೆಯವರೆಗೂ ದೇವಸ್ಥಾನದಿಂದ 2 ಕಿ.ಮೀ ದೂರದವರೆಗೂ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಭಕ್ತರು ದೇವಿಯ ದರ್ಶನಕ್ಕೆ ಹುಲಿಗಿಗೆ ಬಾರದಂತೆ ಸೂಚನೆ ನೀಡಿ ಸಹಾಯಕ ಆಯುಕ್ತ ನಾರಾಯಣ ಕನಕರಡ್ಡಿ ಆದೇಶ ಹೊರಡಿಸಿದ್ದಾರೆ.

ಪ್ರತಿ ತಿಂಗಳ ಒಂದು ಕೋಟಿ ರೂಪಾಯಿಗೂ ಅಧಿಕ ಆದಾಯ ಹೊಂದಿರುವ ಹುಲಿಗೆಮ್ಮ ದೇವಸ್ಥಾನದಲ್ಲಿ ಈ ಮೂರು ತಿಂಗಳಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿಗೂ ಅಧಿಕ ಆದಾಯ ನಷ್ಟವಾಗಿದೆ. ಕಳೆದ ತಿಂಗಳು ಮೇ 1 ರಿಂದ ಮೂರು ದಿನಗಳ ಕಾಲ ದೇವಿಯ ಜಾತ್ರೆ ನಡೆಯಬೇಕಿತ್ತು, ಆದರೆ ಕೊರೊನಾ ಲಾಕ್ ಡೌನ್ ನಿಂದಾಗಿ ಜಾತ್ರೆಯನ್ನು ದೇವಸ್ಥಾನದ ಆವರಣದಲ್ಲಿ ಸಂಪ್ರಾದಾಯಕವಾಗಿ ಆಚರಿಸಲಾಯಿತು. ಜಾತ್ರೆಯ ಮೂರು ದಿನಗಳಲ್ಲಿಯೇ ಸರಿಸುಮಾರು ಒಂದು ಕೋಟಿ ಆದಾಯ ಬರುತ್ತಿತ್ತು, ಆದರೆ ಈ ಬಾರಿ ಜಾತ್ರೆ ಇಲ್ಲದೆ ಆದಾಯ ಬಂದಿಲ್ಲ, ಕಳೆದ ಬಾರಿಯೂ ಜಾತ್ರೆಯ ಸಂದರ್ಭದಲ್ಲಿ ಲಾಕ್ ಡೌನ್ ಆಗಿ ಆಗಲೂ ಆದಾಯಕ್ಕೆ ಖೋತಾ ಬಿದ್ದಿತ್ತು. ನವೆಂಬರ್ ತಿಂಗಳಿನಿಂದ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಿದ್ದರಿಂದ ಮೂರೂವರೆ ತಿಂಗಳಲ್ಲಿ 4 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕಾಧಿಕಾರಿ ಅರವಿಂದ ಸುತಗಟ್ಟಿ ತಿಳಿಸಿದ್ದಾರೆ.

ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಆದಾಯವಿರಲಿಲ್ಲಕ್ಕಿಲ್ಲ, ಆದರೆ ಜನರು ಆರೋಗ್ಯವಾಗಿರಬೇಕು, ಸರ್ಕಾರ ಹಾಗೂ ಜಿಲ್ಲಾಡಳಿತದ ಸೂಚನೆಯನ್ನು ಪಾಲಿಸಿಕೊಳ್ಳಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನೆಟ್‍ವರ್ಕ್ ಸಮಸ್ಯೆ – ಆನ್‍ಲೈನ್ ಶಿಕ್ಷಣ ಪಡೆಯಲಾಗದೇ ವಿದ್ಯಾರ್ಥಿಗಳ ಪರದಾಟ

Share This Article
Leave a Comment

Leave a Reply

Your email address will not be published. Required fields are marked *