ಹಾಸನ ಡಿಎಚ್‍ಒಗೆ ಕೊರೊನಾ ಪಾಸಿಟಿವ್

Public TV
1 Min Read

ಹಾಸನ: ಜಿಲ್ಲೆಯಲ್ಲಿ ಡಿಎಚ್‍ಒ ಸತೀಶ್ ಸೇರಿದಂತೆ ಇಂದು ಒಟ್ಟು 226 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, 7 ಮಂದಿ ಮೃತಪಟ್ಟಿದ್ದಾರೆ.

ಹಾಸನ ಡಿಎಚ್‍ಒ ಸತೀಶ್ ಕೊರೊನಾ ರೋಗ ಆರಂಭವಾದ ದಿನದಿಂದಲೂ ಜಿಲ್ಲೆಯಾದ್ಯಂತ ಅವಿರತವಾಗಿ ಕೆಲಸ ಮಾಡಿ ಕೊರೊನಾ ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಂಗಳವಾರ ಅವರಿಗೆ ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಇಂದು ವರದಿ ಬಂದಿದ್ದು ಡಿಎಚ್‍ಒ ಸತೀಶ್‍ಗೆ ಪಾಸಿಟಿವ್ ಕಂಡು ಬಂದಿದೆ.

ಡಿಎಚ್‍ಒ ಸತೀಶ್ ಜೊತೆ ಕೊರೊನಾ ವಾರಿಯರ್ಸ್ ಹಲವರು ಪ್ರಾಥಮಿಕ ಸಂಪರ್ಕದಲ್ಲಿದ್ದರು. ಹೀಗಾಗಿ ಅವರೆಲ್ಲರಿಗೂ ಆತಂಕ ಶುರುವಾಗಿದೆ. ತಮಗೆ ಕೊರೊನಾ ಪಾಸಿಟಿವ್ ಇರುವುದು ದೃಢ ಪಟ್ಟಿರುವ ಕಾರಣ ಜನಸಾಮಾನ್ಯರಂತೆ ಡಿಎಚ್‍ಒ ಸತೀಶ್ ಕೂಡ ಹಾಸನದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾಸನದಲ್ಲಿ ಇದುವರೆಗೂ 5224 ಜನರಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ. ಅವರಲ್ಲಿ 3318 ಜನ ಗುಣಮುಖರಾಗಿದ್ದರೆ, 1756 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಹಾಸನದಲ್ಲಿ 150 ಜನ ಕೊರೊನಾದಿಂದ ಸಾವಿಗೀಡಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *