– ಚಿತ್ರಕ್ಕೆ ಥ್ರಿಲ್ಲರ್ ಮಂಜು ಅದ್ಧೂರಿ ಸಾಹಸ ನಿರ್ದೇಶನ
ಹಾಫ್ ಸಿನಿಮಾ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಅಟ್ಟಯ್ಯ ಸಿನಿಮಾ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿರುವ ನಿರ್ದೇಶಕ ಲೋಕೇಂದ್ರ ಸೂರ್ಯ ಮತ್ತೊಂದು ಹೊಚ್ಚ ಹೊಸ ಸಿನಿಮಾ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಹಾಫ್ ಸಿನಿಮಾದ ಮೂಲಕವಾಗಿ ನಿರ್ದೇಶನದ ಜೊತೆ ನಾಯಕ ನಟನಾಗಿ ತೆರೆ ಮೇಲೆ ಮಿಂಚಲು ಲೋಕೇಂದ್ರ ಸೂರ್ಯ ಸಜ್ಜಾಗಿದ್ದಾರೆ. ಈ ಚಿತ್ರದ ಕಲರ್ ಫುಲ್ ಫೋಟೋ ಶೂಟ್ ಸಖತ್ ವೈರಲ್ ಆಗಿತ್ತು. ಚಿತ್ರೀಕರಣಕ್ಕೆ ತೆರೆಳಿದ್ದ ಚಿತ್ರತಂಡ ಇದೀಗ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿ ರಿಲ್ಯಾಕ್ಸ್ ಮೂಡ್‍ನಲ್ಲಿದೆ.
ಹದಿನೈದು ದಿನಗಳ ಕಾಲ ನಡೆದ ಮೊದಲ ಹಂತದ ಚಿತ್ರೀಕರಣದಲ್ಲಿ ಚಿತ್ರದ ಪ್ರಮುಖ ಫೈಟ್ ಸೀನ್‍ಗಳನ್ನು ಸೆರೆ ಹಿಡಿಯಲಾಗಿದೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ಮೂಡಿ ಬಂದಿರೋ ಸಾಹಸ ದೃಶ್ಯದಲ್ಲಿ ನೂರೈವತ್ತಕ್ಕು ಹೆಚ್ಚು ಸಾಹಸ ಕಲಾವಿದರು ಭಾಗಿಯಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಜೊತೆಗೆ ಹೀರೋ ಆಗಿ ಹಾಫ್ ಚಿತ್ರದ ಸಂಪೂರ್ಣ ಜವಾಬ್ದಾರಿಯನ್ನು ಲೋಕೇಂದ್ರ ಸೂರ್ಯ ಹೊತ್ತುಕೊಂಡಿದ್ದಾರೆ.
ಇನ್ನು ಚಿತ್ರದಲ್ಲಿ ಖಡಕ್ ವಿಲನ್‍ಗಳಾಗಿ ರೆಡ್ ಅಂಡ್ ವೈಟ್ ಸವೆನ್ ರಾಜ್ ಮತ್ತು ರಾಜು ಕಲ್ಕುಣಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಲ್ಲಿಕಾರ್ಜುನ್ ಬಿ. ಆರ್ ಸಿನಿಮಾಟೋಗ್ರಫಿ, ರಾಕಿ ಸೋನು ಸಂಗೀತ ನಿರ್ದೇಶನ ಹಾಫ್ ಚಿತ್ರಕ್ಕೆ ಇದೆ. ಆಸಿಯಾ, ಅಥಿರಾ, ರಾಜು ಕಲ್ಕುಣಿ, ರೋಹಿಣಿ.ಕೆ, ಸಿವಿಜಿ ಚಂದ್ರು ಸೇರಿದಂತೆ ತಾರಾಬಳಗವೇ ಚಿತ್ರದಲ್ಲಿ ಇರಲಿದೆ.
ಆರ್ ಡಿ ಎಂಟರ್‌ಪ್ರೈಸಸ್, ರಾಜು ಕಲ್ಕುಣಿ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಹಾಫ್ ಚಿತ್ರಕ್ಕೆ ಡಾ.ಪವಿತ್ರ, ಆರ್. ಪ್ರಭಾಕರ್ ರೆಡ್ಡಿ ಬಂಡವಾಳ ಹೂಡಿದ್ದಾರೆ.