ಹಾಟ್ ಫೋಟೋಶೂಟ್‍ನಲ್ಲಿ ಪಾರುಲ್ ಯಾದವ್ ಹವಾ

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಪಾರುಲ್ ಯಾದವ್ ಹಾಟ್ ಫೋಟೋ ಶೂಟ್ ಮಾಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತೀರುವ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕಲರ್​ಫುಲ್ ಆದಂತಹ ಫೋಟೋಶೂಟ್‍ಗಳ ಮೂಲಕ ಅವರು ಆಗಾಗ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಪಾರುಲ್ ಯಾದವ್ ಮಾಡಿಸಿರುವ ಹೊಸ ಫೋಟೋಶೂಟ್ ಕೂಡ ಆಕರ್ಷಕವಾಗಿದೆ. ಗ್ಲಾಮರಸ್ ಲುಕ್‍ನಲ್ಲಿ ಪಾರುಲ್ ಮಿಂಚಿದ್ದಾರೆ. ತಿಳಿ ನೀಲಿ ಬಣ್ಣದ ಉಡುಗೆ ಧರಿಸಿ, ಪಡ್ಡೆಗಳ ನಿದ್ದೆ ಕೆಡಿಸಿದ್ದಾರೆ.

 

View this post on Instagram

 

A post shared by Parul Yadav (@theparulyadav)

ನಟಿ ಪಾರುಲ್ ಯಾದವ್ ಅವರಿಗೆ ಬಹುಭಾಷೆಯಲ್ಲಿ ಅಭಿಮಾನಿಗಳಿದ್ದಾರೆ. ಕನ್ನಡದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿದ ಅವರು ಮೂಲತಃ ಮುಂಬೈನವರು. ಕಿಚ್ಚ ಸುದೀಪ್, ಉಪೇಂದ್ರ ಮುಂತಾದ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಚಾನ್ಸ್ ಅವರಿಗೆ ಸಿಕ್ಕಿತ್ತು. 2000ನೇ ಇಸವಿಯಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಪಾರುಲ್‍ಗೆ ಒಂದು ದಶಕದ ಅನುಭವ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾ ಆಯ್ಕೆ ಮಾಡಿಕೊಳ್ಳಲು ವಿಳಂಬ ಮಾಡುತ್ತಿದ್ದಾರೆ. ಹಾಗಂತ ಅವರು ಅಭಿಮಾನಿಗಳಿಂದ ದೂರ ಇಲ್ಲ. ಸೋಶಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ಜೊತೆ ಪಾರುಲ್ ಸದಾ ಸಂಪರ್ಕದಲ್ಲಿ ಇರುತ್ತಾರೆ.

 

View this post on Instagram

 

A post shared by Parul Yadav (@theparulyadav)

2018ರ ಬಳಿಕ ಪಾರುಲ್ ಯಾವುದೇ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಹೊಸ ಚಿತ್ರದ ಮೂಲಕವಾಗಿ ಮತ್ತೆ ಪರದೆ ಮೇಲೆ ಬರುತ್ತೇನೆ ಎಂದು ಹೇಳುತ್ತಾರೆ. ಪಾರುಲ್ ಇದೀಗ ಹೊಸ ಫೋಟೋಶೂಟ್ ಇವರ ಮುಂದಿನ ಚಿತ್ರದ್ದಾ ಎಂಬುವ ಕುರಿತಾಗಿ ತಿಳಿದುಬರಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *