ಹಾಕಿ ಆಟಗಾರ್ತಿ ಸಲೀಮಾ ಆಟ ನೋಡಲು ಗ್ರಾಮಕ್ಕೆ ಟಿವಿ ಅಳವಡಿಸಿದ ಜಿಲ್ಲಾಡಳಿತ

Public TV
2 Min Read

ರಾಂಚಿ: ಟೋಕಿಯೋ ಒಲಂಪಿಕ್ಸ್ ಮಹಿಳಾ ವಿಭಾಗದ ಹಾಕಿ ಸೆಮಿಫೈನಲ್ ಪಂದ್ಯ ಇಂದು ನಡೆಲಿಯಲಿದೆ. ಈ ಪಂದ್ಯವನ್ನು ವೀಕ್ಷಿಸಲು ಹಾಕಿ ತಂಡದ ಆಟಗಾರ್ತಿ ಸಲೀಮಾ ಟೆಟೆ ಗ್ರಾಮಕ್ಕೆ ಜಿಲ್ಲಾಡಳಿತ ಕಡೆಗೂ ಟಿವಿ ಅಳವಡಿಸಿ ಗ್ರಾಮಸ್ಥರ ಬೇಡಿಕೆ ಈಡೇರಿಸಿದೆ.

ಜಾರ್ಖಂಡ್‍ನ ಸಲೀಮಾ ಟೆಟೆ ಹುಟ್ಟೂರು ಸಿಮ್ದೇಗಾದಲ್ಲಿ ಟಿವಿ, ಮೊಬೈಲ್, ಇಂಟರ್ನೆಟ್ ಸಮಸ್ಯೆಯಿದೆ. ಆದರೆ ಇಲ್ಲಿನ ಹಳ್ಳಿ ಪ್ರತಿಭೆ ಜಪಾನ್ ನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ವನಿತೆಯರ ಹಾಕಿ ತಂಡದ ಆಟಗಾರ್ತಿಯಾಗಿ ಮಿಂಚಿದ್ದರು. ಆದರೆ ಅವರ ಆಟ ನೋಡಲು ಅವರ ಮನೆಯವರಿಗಾಗಲಿ ಅಲ್ಲಿನ ಗ್ರಾಮಸ್ಥರಿಗಾಗಲಿ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಈ ಬಗ್ಗೆ ಆಕೆಯ ಸಹೋದರಿ ಮಹಿಮಾ ಟೆಟೆ, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಟಿವಿ ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು. ತಕ್ಷಣ ಸ್ಪಂದಿಸಿದ ಜಿಲ್ಲಾಡಳಿತ ಸಲೀಮಾ ಟೆಟ್ ಮನೆಯಲ್ಲಿ ಹೊಸ ಸ್ಮಾರ್ಟ್ ಟಿವಿಯನ್ನು ಸೆಟ್ ಆಪ್ ಬಾಕ್ಸ್ ನೊಂದಿಗೆ ಅಳವಡಿಸಿ ಪಂದ್ಯ ವೀಕ್ಷಣೆಗೆ ಅನುವು ಮಾಡಿಕೊಟ್ಟಿದೆ.

ಜಿಲ್ಲಾಡಳಿತ ಟಿವಿ ಅಳವಡಿಸಿರುವುದರಿಂದಾಗಿ ಇದೀಗ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಇಂದು ನಡೆಯಲಿರುವ ಭಾರತ ಹಾಗೂ ಅರ್ಜೆಂಟೀನಾ ನಡುವಿನ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾ ಕ್ರೀಡಾಧಿಕಾರಿ ತುಷಾರ್ ರಾಯ್ ತಿಳಿಸಿದ್ದಾರೆ.

ಸಲೀಮಾ ಜಾಖರ್ಂಡ್‍ನ ನಕ್ಸಲ್ ಪೀಡಿತ ಜಿಲ್ಲೆಯ ಭಾಗವಾದ ಸಿಮ್ದೇಗಾದ ಬಡ್ಕಿಚಾಪರ್ ಹಳ್ಳಿಯವರು. ಇಲ್ಲಿರುವ ಅನೇಕ ಮನೆಗಳು ಟಿವಿ, ಮೊಬೈಲ್, ಇಂಟರ್ನೆಟ್ ಸಂಪರ್ಕ ಸಿಗದೆ ಕಷ್ಟಪಡುತ್ತಿದೆ. ಇದೀಗ ಸಲೀಮಾ ಟೆಟೆಯ ಸಾಧನೆಯ ಬಳಿಕವಾದರೂ ಗ್ರಾಮದ ಅಭಿವೃದ್ಧಿ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಗ್ರಾಮಸ್ಥರು. ಇದನ್ನೂ ಓದಿ: ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಫೈನಲ್‍ಗೆ ಎಂಟ್ರಿ

ನೀರಜ್ ಚೋಪ್ರಾ ಫೈನಲ್‍ಗೆ:
ಟೋಕಿಯೋ ಒಲಿಂಪಿಕ್ಸ್ ನ 12ನೇ ದಿನವಾದ ಇಂದು ಭಾರತೀಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಫೈನಲ್ ಪ್ರವೇಶಿಸಿದ್ದಾರೆ. ನೀರಜ್ ಚೋಪ್ರಾ ಪೂಲ್ ‘ಎ’ನಲ್ಲಿದ್ದರು. ನೀರಜ್ ತಮ್ಮ ಮೊದಲ ಪ್ರಯತ್ನದಲ್ಲಿಯೇ 86.65 ಮೀಟರ್ ಥ್ರೋ ಮಾಡುವ ಮೂಲಕ ಭಾರತಕ್ಕೆ ಮತ್ತೊಂದು ಪದಕದ ನಿರೀಕ್ಷೆಯನ್ನು ಮೂಡಿಸಿದರು. ತಮ್ಮ ಮೊದಲ ಥ್ರೋನಲ್ಲಿಯೇ ಫೈನಲ್ ನಲ್ಲಿ ನೀರಜ್ ಸ್ಥಾನಗಿಟ್ಟಿಸಿಕೊಂಡರು.

ಬೆಳಗ್ಗೆ 11 ಗಂಟೆಗೆ ಮಹಿಳೆಯರ 69 ಕೆಜಿ ವಿಭಾಗದ ಬಾಕ್ಸಿಂಗ್ ಸೆಮಿಫೈನಲ್ ಪಂದ್ಯ ನಡೆಯಲಿದೆ. ಭಾರತದ ಲವ್ಲಿನಾ ಟರ್ಕಿಯ ಬುಸೆನಾಜ್ ಸುರ್ಮೆನ್ಲಿ ವಿರುದ್ಧ ಸೆಣಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಮಹಿಳೆಯ ಹಾಕಿ ತಂಡ ಅರ್ಜೆಂಟಿನಾ ವಿರುದ್ಧ ಸೆಮಿಫೈನಲ್ ಆಡಲಿದೆ.

Share This Article
Leave a Comment

Leave a Reply

Your email address will not be published. Required fields are marked *