ಹಳ್ಳಿಗೆ ಹೋಗಲು ನೆಗೆಟಿವ್ ರಿಪೋರ್ಟ್ ಕಡ್ಡಾಯ

Public TV
2 Min Read

– ಬೆಂಗಳೂರಲ್ಲಿ ಸೋಂಕಿತರ ಮನೆಗೆ ಕೆಂಪುಪಟ್ಟಿ

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಮಹಾಮಾರಿ ಕೊರೋನಾ ತಡೆಗೆ ಸಿಎಂ ಬಿಎಸ್‍ವೈ ಮುಂದಾಗಿದ್ದಾರೆ. ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಹೋಗುವ ಮಂದಿಗೆ ಕೋವಿಡ್ ನೆಗೆಟಿವ್ ಟೆಸ್ಟ್ ಕಡ್ಡಾಯ ಮಾಡಿ ಎಂದು ಆದೇಶ ನೀಡಿದ್ದಾರೆ.

ಒಂದು ವೇಳೆ ಟೆಸ್ಟ್ ವೇಳೆ ಪಾಸಿಟಿವ್ ಬಂದರೆ ಊರ ಹೊರಗಡೆ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಇಂದು ಬೆಳಗಾವಿ, ಬಳ್ಳಾರಿ, ಶಿವಮೊಗ್ಗ ಹಾಗೂ ಮೈಸೂರಿನ ಆಯ್ದ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಒಗಳ ಜೊತೆ ಸಂವಾದ ನಡೆಸಿದ ಸಿಎಂ ಈ ಆದೇಶ ನೀಡಿದ್ದಾರೆ.

ಕೋವಿಡ್ ನಿರ್ವಹಣೆಗೆ ಗ್ರಾ.ಪಂ.ಮಟ್ಟದ ಟಾಸ್ಕ್ ಫೋರ್ಸ್ ಯಾವ ರೀತಿ ಕೆಲಸ ಮಾಡುತ್ತಿದೆ? ಗ್ರಾಮದಲ್ಲಿ ಕೋವಿಡ್ ತಡೆಗೆ ಯಾವೆಲ್ಲ ಕ್ರಮ ಕೈಗೊಂಡಿದ್ದಾರೆ ಎಂಬ ಬಗ್ಗೆ ಸಿಎಂ ಸಮಾಲೋಚನೆ ನಡೆಸಿದರು.

ಪಾಸಿಟಿವಿಟಿ ರೇಟ್ ಶೇ. 20ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಒಂದೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದೊಂದು ಕೋವಿಡ್ ಕೇರ್ ಸೆಂಟರ್ ತೆರೆಯಿರಿ ಎಂದು ಸೂಚನೆ ನೀಡಿದ್ದಾರೆ.

ಜನ ಸೇರುವ ಸಂತೆ, ಜಾತ್ರೆ ಮತ್ತಿತರ ಕಾರ್ಯಕ್ರಮಗಳ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು. ಇದೇ ವೇಳೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ನೌಕರರನ್ನು ಕೊರೋನಾ ವಾರಿಯರ್ಸ್ ಅಂತಾ ಸಿಎಂ ಘೋಷಣೆ ಮಾಡಿದರು.

ಮತ್ತೆ ಕಂಟೈನ್ಮೆಂಟ್ ಝೋನ್
ಇವತ್ತಿನಿಂದ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮೈಕ್ರೋ ಕಂಟೈನ್ಮೆಂಟ್ ಝೋನ್ ಪದ್ಧತಿ ಜಾರಿ ಮಾಡಲಾಗಿದೆ. ಸೊಂಕಿತರ ಮನೆಗೆ ರೆಡ್ ಟೇಪ್ ಹಾಕಿ, ಸೋಂಕಿತರ ಕೈಗೆ ಸೀಲ್ ಹಾಕುವ ಹಳೆಯ ಕಟ್ಟುನಿಟ್ಟಿನ ರೂಲ್ಸನ್ನು ಮತ್ತೆ ಅನುಷ್ಠಾನಕ್ಕೆ ತರಲಾಗಿದೆ.

ಬಿಟಿಎಂ ಲೇಔಟ್, ಪದ್ಮನಾಭನಗರ, ಬಸವನಗುಡಿಯಲ್ಲಿ 1000 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಕೆಂಪು ಪಟ್ಟಿ ಅಂಟಿಸಿದ್ದಾರೆ. 14 ದಿನಗಳ ಕಾಲ ಸೋಂಕಿತರು ಮನೆಯಿಂದ ಮಿಸುಕಾಡದಂತೆ ಮಾಡಿದ್ದಾರೆ. ಕೊರೋನಾ ಸೋಂಕಿತರ ಮನೆಗಳ ಮುಂದಿನ ರಸ್ತೆಗಳಲ್ಲಿ ಸ್ಯಾನಿಟೇಸೇಷನ್ ಮಾಡಲಾಗಿದೆ.

ಕೆಂಪು ಪಟ್ಟಿ ಪದ್ದತಿ ಜಾರಿ ಮಾಡಿರೋದನ್ನು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸಮರ್ಥನೆ ಮಾಡಿಕೊಂಡಿದ್ದಾರೆ. ಹೋಂ ಐಸೋಲೇಷನ್ ಪರಿಣಾಮಕಾರಿ ಮಾಡಲು ಸೋಂಕಿತರ ಮನೆಗಳ ಮುಂದೆ ರೆಡ್ ಟೇಪ್ ಸಿಸ್ಟಂ ಜಾರಿ ಮಾಡಲಾಗಿದೆ ಅಂತ ಹೇಳಿದ್ದಾರೆ. ಆದ್ರೆ ಆ ಸೋಂಕಿತರ ಮನೆಯವರಿಗೆ ನಿತ್ಯದ ಅಗತ್ಯಗಳನ್ನು ಯಾರು ತಲುಪಿಸ್ತಾರೆ ಎಂಬ ಪ್ರಶ್ನೆ ಎದುರಾಗಿದೆ.

Share This Article
Leave a Comment

Leave a Reply

Your email address will not be published. Required fields are marked *