ಹಳೆಯ ಎಸಿ ಬಸ್‍ಗಳಲ್ಲಿ ಹಣ್ಣು, ತರಕಾರಿ ಸಾಗಾಟಕ್ಕೆ ಕೆಎಸ್‌ಆರ್‌ಟಿಸಿಯಿಂದ ಚಿಂತನೆ

Public TV
2 Min Read

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್(ಕೆಎಸ್‌ಆರ್‌ಟಿಸಿ)ಗಳಲ್ಲಿ ನಿತ್ಯ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಾರೆ. ಇದೀಗ ಕೆಎಸ್‌ಆರ್‌ಟಿಸಿ ಸಂಸ್ಥೆ ಪ್ರಯಾಣಿಕರನ್ನು ಹೊರತುಪಡಿಸಿ ರೈತರ ಕೃಷಿ ಉತ್ಪನ್ನಗಳ ಸಾಗಾಣಿಕೆ ಅಂತಾನೆ ಹಳೆಯ ಎಸಿ ಬಸ್‍ಗಳನ್ನು ಒದಗಿಸಲು ಮುಂದಾಗಿದೆ.

ಕೆಎಸ್‌ಆರ್‌ಟಿಸಿ ಬಸ್‍ಗಳ ಮೇಲೆ ಗ್ರಾಮೀಣ ಭಾಗದ ಜನರು ಹೆಚ್ಚು ಅವಲಂಬಿತರಾಗಿದ್ದಾರೆ. ಗ್ರಾಮೀಣ ಭಾಗದ ರೈತರು ಕಡಿಮೆ ಪ್ರಮಾಣದಲ್ಲಿ ಬೆಳೆದ ತಮ್ಮ ಕೃಷಿ ಉತ್ಪನ್ನಗಳನ್ನು ಬೆಂಗಳೂರು ಮಾರುಕಟ್ಟೆಗೆ ತರುವ ಈ ಬಸ್‍ಗಳನ್ನೇ ಹೆಚ್ಚು ನಂಬಿಕೊಂಡಿದ್ದಾರೆ. ಇದನ್ನು ಅರಿತಿರುವ ನಿಗಮ ಇದೀಗ ರೈತರ ಕೃಷಿ ಉತ್ಪನ್ನಗಳ ಸಾಗಾಣಿಕೆ ಅಂತಾನೆ ವಿಶೇಷ ಸಾರಿಗೆ ಸೌಲಭ್ಯ ಒದಗಿಸಲು ಮುಂದಾಗಿದೆ. ಇದನ್ನೂ ಓದಿ: ಬೊಮ್ಮಾಯಿ ಸಂಪುಟ ರಚನೆಗೆ 60:20:20 ಸೂತ್ರ

ಗ್ರಾಮೀಣ ಭಾಗದಿಂದ ಬೆಂಗಳೂರು ನಗರಕ್ಕೆ ಬರಲು ಇರೋ ಸಾರಿಗೆ ಸೌಲಭ್ಯ ಅಂದ್ರೆ ಅದು ಕೆಎಸ್‌ಆರ್‌ಟಿಸಿ ಬಸ್‍ಗಳು. ಗ್ರಾಮೀಣ ಭಾಗಗಳಿಗೆ ಹೆಚ್ಚಿನ ಸಂಖ್ಯೆಯ ಬಸ್‍ಗಳು ಇರುವುದಿಲ್ಲ. ಇರುವ ಬಸ್‍ಗಳಲ್ಲೇ ಪ್ರಯಾಣಿಕರ ಜೊತೆಗೆ ರೈತರು ತಾವು ಬೆಳೆದ ಅಷ್ಟೋ ಇಷ್ಟೋ ಕೃಷಿ ಉತ್ಪನ್ನಗಳನ್ನು ಇದೆ ಬಸ್‍ಗಳ ಮೂಲಕ ಮಾರುಕಟ್ಟೆಗೆ ಸಾಗಾಟ ಮಾಡುತ್ತಾರೆ. ಬಸ್‍ನಲ್ಲಿ ಹೆಚ್ಚಿನ ಜನ ಇದ್ರೆ ಒಮೊಮ್ಮೆ ಅದಕ್ಕೂ ಅವಕಾಶ ಸಿಗೋದಿಲ್ಲ. ಟೆಂಪೋ ಅಥವಾ ಲಗೇಜ್ ಆಟೋಗಳಲ್ಲಿ ಸಾಗಾಟ ಮಾಡಲು ಹೆಚ್ಚಿನ ಖರ್ಚು ಆಗುತ್ತದೆ ಇದು ರೈತರ ಸಮಸ್ಯೆ. ಈ ಸಮಸ್ಯೆಯನ್ನು ಅರಿತ ಕೆಎಸ್‌ಆರ್‌ಟಿಸಿ ಸಂಸ್ಥೆ ರೈತರು ಬೆಳೆದ ಕೃಷಿ ಉತ್ಪನ್ನ ಸಾಗಟಕ್ಕೆ ಅಂತಲೇ ವಿಶೇಷ ಸಾರಿಗೆ ಸೌಲಭ್ಯ ಒದಗಿಸಲು ತಯಾರಿ ನಡೆಸಿದೆ.

ಎಸಿ ಬಸ್ ಸೇರಿದಂತೆ ಕೆಎಸ್‌ಆರ್‌ಟಿಸಿ ನಿಗಮದಲ್ಲಿ ಇರುವ ಹಳೆಯ, ರಸ್ತೆ ಮೇಲೆ ಸಂಚರಿಸಲು ಯೋಗ್ಯವಿರುವ ಬಸ್‍ಗಳನ್ನು ಒಳ ಭಾಗದಲ್ಲಿ ಕೆಲವು ಮಾರ್ಪಟು ಮಾಡಿ ನವೀಕರಣ ಮಾಡಿ, ಅವುಗಳನ್ನು ಬೆಂಗಳೂರು ಸುತ್ತಮುತ್ತ ಅಂದರೆ ಕೋಲಾರ, ಚಿಕ್ಕಬಳ್ಳಾಪುರ, ಹೊಸಕೋಟೆ, ರಾಮನಗರ, ಮಾಗಡಿ, ದೇವನಹಳ್ಳಿ ಇತರ ಭಾಗಗಳ ರೈತರು ಬೆಳೆದ ಹಣ್ಣು, ತರಕಾರಿ, ಸೊಪ್ಪು ಇತರ ಕೃಷಿ ಪದಾರ್ಥಗಳನ್ನು ನಗರದ ಪ್ರಮುಖ ಮಾರುಕಟ್ಟೆಗೆ ಸಾಗಿಸಲು ರೈತರಿಗೆ ಸಾರಿಗೆ ಸಂಪರ್ಕ ಕಲ್ಪಿಸಲು ನಿಗಮ ನಿರ್ಧರಿಸಿದೆ. ಇದಕ್ಕೆ ಈಗಾಗಲೇ ನಿಗಮದ ಕಾರ್ಯಗಾರಗಳಲ್ಲಿ ಬಸ್‍ಗಳು ಸಿದ್ದಗೊಳ್ಳುತ್ತಿವೆ. ಪೈಲೆಟ್ ಪ್ರೊಜೆಕ್ಟ್ ಆಗಿ ಕೆಲವು ಬಸ್‍ಗಳನ್ನು ರಸ್ತೆಗೆ ಇಳಿಸಲು ಸಿದ್ಧವಾಗಿರುವ ನಿಗಮ. ಇನ್ನು ಯಾವುದೇ ದರ ನಿಗದಿ ಮಾಡಿಲ್ಲ. ಕೆಲವೇ ವಾರಗಳಲ್ಲಿ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಒತ್ತು ಮಾರುಕಟ್ಟೆಯತ್ತ ಸಾಗಲಿದೆ ಕೆಎಸ್‌ಆರ್‌ಟಿಸಿಯ ವಿಶೇಷ ಗಳು ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

Share This Article
Leave a Comment

Leave a Reply

Your email address will not be published. Required fields are marked *