– ಟಿವಿಯಲ್ಲಿ ನೋಡಿದ್ದು ಇಂದು ಅನುಭವಕ್ಕೆ ಬಂತು
ಬೆಂಗಳೂರು: ಕೋವಿಡ್ ಭಯಂಕರತೆ ಅದನ್ನು ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತು ಎಂದು ಕೊರೊನಾ ಸೋಂಕಿನಿಂದ ಮೃತ ಆಪ್ತರು ಚಿತಾಗಾರದ ಬಳಿ ತಮ್ಮವರನ್ನ ಕೊನೆ ಬಾರಿ ನೋಡಲಾಗದೇ ಕಣ್ಣೀರು ಹಾಕಿದ್ದಾರೆ.
ಕಳೆದ ಶುಕ್ರವಾರ ಕೋವಿಡ್ ಪಾಸಿಟಿವ್ ಬಂದ್ಮೇಲೆ ಗೆಳೆಯನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಳ್ಳೆಯ ಚಿಕಿತ್ಸೆ ನೀಡಲಾಗಿತ್ತು. ಪ್ರತಿ ದಿನ ಮಧ್ಯಾಹ್ನ ಅವರ ಪತ್ನಿಗೆ ವೈದ್ಯರೇ ಫೋನ್ ಮಾಡಿ ಹೆಲ್ತ್ ಅಪ್‍ಡೇಟ್ ಕೊಡುತ್ತಿದ್ದರು. ಆಸ್ಪತ್ರೆ ಬಳಿ ಬಂದಾಗ ಕುಟುಂಬಸ್ಥರಿಗೆ ಸಹಾಯವಾಣಿ ವ್ಯವಸ್ಥೆ ಮಾಡಬೇಕಿತ್ತು. ತಮ್ಮವರ ಆರೋಗ್ಯ ತಿಳಿದುಕೊಂಡು ಮುಂದೆ ಏನ್ ಮಾಡಬೇಕೆಂದು ನಿರ್ಧರಿಸಲು ಸಹಾಯ ಆಗ್ತಿತ್ತು ಎಂದು ಬೇಸರ ಹೊರ ಹಾಕಿದರು.
ಸ್ನೇಹಿತನ ಕುಟುಂಬಸ್ಥರೇ ಅವರನ್ನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿದರು. ಅವನು ಸಹ ಇಲ್ಲಿರಲು ನನಗೆ ಆಗ್ತಿಲ್ಲ. ಬೇರೆ ಕಡೆ ಶಿಫ್ಟ್ ಮಾಡಿ ಅಂತ ಕೇಳಿಕೊಂಡಿದ್ದ. ಹಾಗಾಗಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಮುಂದೆ ಬರಬೇಕಿದೆ. ಟಿವಿಯಲ್ಲಿ ನೋಡುವಾಗ ಕೊರೊನಾ ಬಗ್ಗೆಯೇ ಹೇಳ್ತಾರೆ ಅಂತ ಮಾತನಾಡಿಕೊಳ್ಳುತ್ತಿದ್ದೀವಿ. ಅದನ್ನ ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತು. ನಿಜಕ್ಕೂ ಕೋವಿಡ್ ಭಯಂಕರವಾಗಿದೆ ಎಂದರು.
ಇದೇ ವೇಳೆ ಮೃತ ವ್ಯಕ್ತಿಯ ಅಂತಿದ ದರ್ಶನ ಪಡೆಯಲು ಆಗದೇ ಮಹಿಳೆ ಕಣ್ಣೀರು ಹಾಕಿದರು. ಮೃತ ವ್ಯಕ್ತಿ ನಮ್ಮ ಪಕ್ಕದ್ಮನೆಯವರು. ಮಕ್ಕಳು ವಯಸ್ಸಾಗಿದೆ ಹೋಗಬೇಡ ಅಂದ್ರು ಬಂದೆ. ಆದ್ರೆ ಇಲ್ಲಿ ನೋಡಲು ಅವಕಾಶವೇ ಕೊಡಲಿಲ್ಲ ಎಂದು ಕಣ್ಣೀರಿಟ್ಟರು.