ಹತ್ತಿರ ಬರ್ತಿದೆ ಇನ್ನೇನು ಎದ್ದೇಳ್ತೀನಿ ಅಂದಾಗ ಹರಿದೇ ಬಿಟ್ಟ ರೈಲು- ಯುವಕನ ದೇಹ ಇಬ್ಭಾಗ

Public TV
1 Min Read

– ಚಿಕಿತ್ಸೆಯ ವೇಳೆ ಯಾರ ತಪ್ಪಿಲ್ಲ ಎನ್ನುತ್ತಲೇ ಪ್ರಾಣ ಬಿಟ್ಟ

ಲಕ್ನೋ: ರೈಲು ಹರಿದು ದೇಹ ಎರಡು ಭಾಗವಾಗಿ ಬಿದ್ದಿದ್ದರೂ ಯಾರ ತಪ್ಪಿಲ್ಲ ಎನ್ನುತ್ತಾ ಯುವಕ ಪ್ರಾಣ ಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಶಹಜನ್‍ಪುರದಲ್ಲಿ ನಡೆದಿದೆ.

ಮೃತ ಯುವಕನನ್ನು ಹರ್ಷವರ್ಧನ್(19) ಎಂದು ಗುರುತಿಸಲಾಗಿದೆ. ರೈಲಿಗಾಗಿ ಕಾಯುತ್ತಾ ಕುಳಿತಿದ್ದ ಯುವಕ ರೈಲು ಹತ್ತಿರ ಬರುತ್ತಿದೆ ಎಂದು ಎದ್ದು ಹೋಗಬೇಕು ಎನ್ನುವಷ್ಟರಲ್ಲಿ ಆತನ ಮೇಲೆ ರೈಲು ಹರಿದೇ ಬಿಟ್ಟಿದೆ.

 

ಹರ್ಷವರ್ಧನ್ ತಾಯಿಯ ಬಳಿ ಹಣ ಪಡೆದು ಹೊರಗೆ ಹೋಗಿ ಬರುವುದಾಗಿ ಹೇಳಿ ಬಂದಿದ್ದಾನೆ. ರೈಲ್ವೆ ಹಳಿಯ ಮೇಲೆ ಕೂತು ರೈಲಿಗಾಗಿ ಕಾಯುತ್ತಾ ಕುಳಿತಿದ್ದಾನೆ. ಆಗ ರೈಲು ಹತ್ತಿರ ಬಂತು ಇನ್ನೇನು ಎದ್ದು ದೂರ ಸರಿಯಬೇಕು ಎನ್ನುವಷ್ಟರಲ್ಲಿ ಯುವಕನ ಮೇಲೆ ರೈಲು ಹರಿದಿದೆ. ಕಾಲಿನ ಮೇಲ್ಭಾಗ ಚರಂಡಿಯಲ್ಲಿ ಬಿದ್ದಿದೆ. ಯುವಕ ಚರಂಡಿಯಲ್ಲಿ ನರಳಾಡಿದ್ದಾನೆ. ಅಲ್ಲೇ ಹತ್ತಿರದಲ್ಲಿದ್ದವರು ಯುವಕನ ನರಳಾಟವನ್ನು ನೋಡಿ ಆಸ್ಪತ್ರೆಗೆ ದಾಖಲು ದಾಖಲಿಸಿದ್ದಾರೆ.

ರೈಲ್ವೆ ಅಪಘಾತದಲ್ಲಿ ಗಾಯಗೊಂಡ ಹರ್ಷವರ್ಧನ್‍ಗೆ 13 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಆ ವೇಳೆ ಯುವಕ ಈ ಅಪಘಾತದಲ್ಲಿ ಯಾರದ್ದೂ ತಪ್ಪಿಲ್ಲ ಎಂದು ಪದೇ ಪದೇ ಹೇಳುತ್ತಿದ್ದನಂತೆ. ಆದರೆ ಅಪಘಾತದಲ್ಲಿ ಹೆಚ್ಚಿನ ರಕ್ತ ಸ್ರಾವವಾದ ಕಾರಣ ಯುವಕ ಕೊನೆಯುಸಿರೆಳೆದಿದ್ದಾನೆ.

ಸದ್ಯ ಯುವಕ ರೈಲು ಹತ್ತಿರ ಬರುವವರೆಗೂ ಯಾಕೆ ಸುಮ್ಮನೆ ಕುಳಿತ್ತಿದ್ದನು ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *