ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್ – ಬಿಗ್‍ಬಾಸ್ ಸ್ಪರ್ಧಿ ಆದಂ ಪಾಷಾ ಎನ್‍ಸಿಬಿ ವಶಕ್ಕೆ

Public TV
3 Min Read

– ಮುಳುವಾಯ್ತಾ ಅನಿಕಾ ಜೊತೆಗಿನ ನಂಟು?

ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‍ಬಾಸ್ ಸ್ಪರ್ಧಿ ಆದಂ ಪಾಷಾ ಅವರನ್ನ ಎನ್‍ಸಿಬಿ (ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು ವಿಭಾಗದ ಎನ್‍ಸಿಬಿ ಅಧಿಕಾರಿಗಳು ಆದಂ ಪಾಷಾ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಡ್ರಗ್ ಪೆಡ್ಲರ್ ಅನಿಕಾಳಿದಂದ ಆದಂ ಡ್ರಗ್ಸ್ ಖರೀದಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಆದಂ ಪಾಷಾಗೆ ಎನ್‍ಸಿಬಿ ಸಮನ್ಸ್ ನೀಡಿತ್ತು. ಈ ಹಿಂದೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಆದಂ ಪಾಷಾ, ಅನಿಕಾ ತಮಗೆ ಪರಿಚಯ ಎಂದು ಹೇಳಿಕೊಂಡಿದ್ದರು. ಆಗಸ್ಟ್ 19ರಂದು ಎನ್.ಸಿ.ಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದ ಅನಿಕಾ ಜೊತೆಗೆ ಆದಂ ಪಾಷಾಗೆ ಸಂಪರ್ಕವಿದ್ದು ಡ್ರಗ್ಸ್ ಖರೀದಿಸಿರುವ ಬಗ್ಗೆ ಪಕ್ಕಾ ಮಾಹಿತಿಗಳನ್ನ ಆಧರಿಸಿದ ಎನ್‍ಸಿಬಿ ಪಾಷಾರನ್ನ ವಶಕ್ಕೆ ಪಡೆದಿದೆ. ಇದನ್ನೂ ಓದಿ:  ಸ್ಯಾಂಡಲ್‍ವುಡ್ ಡ್ರಗ್ಸ್‌ಗೆ ಕೇರಳ ರಾಜಕೀಯ ನಂಟು

ಅನಿಕಾ ಬಂಧನದ ಬಳಿಕ ಆದಂ ಪಾಷಾಗೆ ಅನಿಕಾ ಜೊತೆ ನಂಟಿದ್ದ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಈ ಬಗ್ಗೆ ಮಾತನಾಡಿದ್ದ ಪಾಷಾ ನನಗೆ ಅನಿಕಾ ಪರಿಚಯವಿರುವುದು ನಿಜ. ಆದ್ರೆ ಆಕೆ ಡ್ರಗ್ ಡೀಲರ್ ಎಂಬುದು ಗೊತ್ತಿರಲಿಲ್ಲ ಎಂದಿದ್ದರು. ಎನ್‍ಸಿಬಿ ಮುಂದೆ ಹಾಜಾರಾಗುವಂತೆ ಪಾಷಾಗೆ ನೋಟಿಸ್ ಸಹ ನೀಡಲಾಗಿತ್ತು. ಅದರಂತೆ ಇಂದು ಎನ್.ಸಿ.ಬಿ ಮುಂದೆ ಹಾಜರಾಗಿದ್ದ ಆದಂ ಪಾಷಾ ವಿಚಾರಣೆ ನಡೆಸಿದ ಅಧಿಕಾರಿಗಳು ಅಂತಿಮವಾಗಿ ಪಾಶಾರನ್ನ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಗ್ರಾಹಕರಲ್ಲಿ ನಟರಿಗಿಂತ ನಟಿಯರೇ ಹೆಚ್ಚು – ಬಂಧಿತ ಡೀಲರ್ ಬಿಚ್ಚಿಟ್ಟ ಸ್ಫೋಟಕ ಸತ್ಯ

ಅನಿಕಾ ಜೊತೆ ಆದಂ ನಂಟು: ಒಂದು ವರ್ಷದ ಹಿಂದೆ ಕಮ್ಮನಹಳ್ಳಿಯ ಕ್ಲಬ್ ನಲ್ಲಿ ಅನಿಕಾ ಪರಿಚಯ ಆಗಿದ್ದಳು. ನಾನು ಡ್ಯಾನ್ಸರ್ ಆಗಿದ್ದರಿಂದ ಡ್ಯಾನ್ಸ್ ಕ್ಲಬ್ ಹೋದಾಗ ಅನಿಕಾ ಸಿಕ್ಕಿದ್ದಳು ಆಗಿನಿಂದ ಪರಿಚಯ ಆಗಿದ್ದಳು. ಆಫ್ರಿಕನ್ ಮ್ಯೂಸಿಕ್ ಕ್ಲಬ್‍ಗೆ ಹೋದಾಗ ನನಗೆ ಅನಿಕಾ ಪರಿಚಯವಾಗಿದ್ದಳು. ಆದರೆ ಅವಳು ಆಗ ನಿಜ ಹೆಸರು ಹೇಳಿರಲಿಲ್ಲ. ಅವಳ ಹೆಸರನ್ನು ನಿಕಿ ಎಂದು ಹೇಳಿದ್ದಳು. ಎಲ್ಲರೂ ಕ್ಲಬ್‍ಗೆ ಬರುವುದು ಮಾಮೂಲಿ ಆಗಿದ್ದರಿಂದ ನಾನು ತಲೆಕೆಡೆಸಿಕೊಳ್ಳಲಿಲ್ಲ. ನೀವು ಏನು ಮಾಡುತ್ತೀರಿ ಏನು ಎತ್ತ ಏನನ್ನೂ ಕೇಳಲಿಲ್ಲ ಎಂದು ಆದಂ ಹೇಳಿಕೊಂಡಿದ್ದರು. ಇದನ್ನೂ ಓದಿ:  ವಿದ್ಯಾರ್ಥಿನಿಯಾಗಿದ್ದಾಗಲೇ ಡ್ರಗ್ ಸಪ್ಲೈ – ಅಧಿಕಾರಿಗಳು ಬಂಧಿಸಿದಾಗಲೂ ನಶೆಯಲ್ಲಿದ್ದ ಅನಿಕಾ

ಒಂದೊಂದು ಬಾರಿ ಕ್ಯಾಬ್‍ಗೂ ಹಣವಿಲ್ಲದಿದ್ದಾಗ ಅನಿಕಾ ನಮಗೆ ಹಣ ನೀಡಿ ಕಳುಹಿಸುತ್ತಿದ್ದಳು. ನಾನು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ನಾನು ಯಾವುದಕ್ಕೂ ಹೆದರಿಕೊಳ್ಳುವುದಿಲ್ಲ. ಸಿನಿಮಾ ಸೆಲೆಬ್ರಿಟಿಗಳ ಜೊತೆ ನನಗೆ ನಂಟಿಲ್ಲ. ಹಾಗಾಗಿ ಯಾರು ಅನಿಕಾ ಜೊತೆ ಬರುತ್ತಿದ್ದರು ಎಂಬುದು ಗೊತ್ತಿಲ್ಲ. ನಾನು ಕ್ಲಬ್ ನಲ್ಲಿ ಸಾಲ್ಸಾ ಡ್ಯಾನ್ಸ್ ಮಾಡಲು ಹೋಗುತ್ತಿದ್ದೆ ಎಂದು ತಿಳಿಸಿದ್ದರು.

ಅವಳೊಂದಿಗೆ ಯಾರು ಇರುತ್ತಿದ್ದರು ಎಂದು ಸಹ ನಾನು ನೋಡಿಲ್ಲ. ಕ್ಲಬ್ ನಲ್ಲಿ ಡ್ಯಾನ್ಸ್ ಮಾಡಿ ಬರುತ್ತಿದ್ದೆ ಅಷ್ಟೆ. ನಾನ್ಯಾಕೆ ಬೇರೆಯವರನ್ನು ನೋಡಬೇಕು. ನಟಿ ನಯನ ಮನೆಯಲ್ಲಿ ಕೊನೆಯ ಸೆಲೆಬ್ರೆಟಿ ಪಾರ್ಟಿಯಾಗಿತ್ತು. ನಂತರ ಯಾವುದೇ ಪಾರ್ಟಿಗೆ ನಾನು ಹೋಗಿಲ್ಲ ಎಂದು ಹೇಳುವ ಮೂಲಕ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳನ್ನ ತಳ್ಳಿ ಹಾಕಿದ್ದರು.

ಯಾರು ಈ ಲೇಡಿ ಡ್ರಗ್ ಡೀಲರ್ ಅನಿಕಾ?: ಅನಿಕಾ ಮೂರು ನಕಲಿ ನೇಮ್‍ಗಳನ್ನು ಇಟ್ಟುಕೊಂಡಿದ್ದಳು. ಅನಿಕಾ ಡಿ, ಅನಿ ಮತ್ತು ಬಿಮನಿ ಎಂಬ ಮೂರು ಹೆಸರಿನಿಂದ ಪರಿಚಯಿಸಿಕೊಂಡು ಡ್ರಗ್ ಡೀಲ್ ಮಾಡುತ್ತಿದ್ದಳು. ಈಕೆ ಸಾಮಾಜಿಕ ಜಾಲತಾಣದಲ್ಲಿ ಬಿಮನಿ ಎಂಬ ಹೆಸರು ಬಳಸುತ್ತಿದ್ದಳು ಎಂಬ ಮಾಹಿತಿ ಲಭಿಸಿದೆ. ಜೊತೆಗೆ ಈಕೆ ತಮಿಳುನಾಡಿನವಳಾಗಿದ್ದು, 24 ವರ್ಷ ವಯಸ್ಸಿನವಳಾಗಿದ್ದಾಳೆ.

ಅನಿಕಾ ತಮಿಳುನಾಡಿನ ಸೇಲಂ ಸಮೀಪದ ಯರ್ಕಾಡ್ ಮೂಲದವಳು. ಅನಿಕಾ ತಂದೆ ದಿನೇಶ್‍ಗೆ ಮೂವರು ಮಕ್ಕಳಿದ್ದು, ಅನಿಕಾಳೇ ದೊಡ್ಡವಳು. ಅನಿಕಾಗೆ ಒಬ್ಬಳು ತಂಗಿ, ಒಬ್ಬ ತಮ್ಮ ಇದ್ದು ತಮಿಳುನಾಡಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅನಿಕಾ ಯರ್ಕಾಡ್‍ನ ಶೆವ್ರಾಯ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಹೋಟೆಲ್ ಮ್ಯಾನೇಜ್‍ಮೆಂಟ್ ಡಿಗ್ರಿಯ ಎರಡನೇ ವರ್ಷದಲ್ಲಿ ಫೇಲ್ ಆಗಿ ವಿದ್ಯಾಭ್ಯಾಸವನ್ನು ಬಿಟ್ಟಿದ್ದಾಳೆ ಎನ್ನಲಾಗಿದೆ.

ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಅನಿಕಾ, ಕೆಲಸ ಸಿಗದೇ ಡ್ರಗ್ ಜಾಲ ಸೇರಿಕೊಂಡಳು. ನಗರದ ದೊಡ್ಡಗುಬ್ಬಿಯಲ್ಲಿ ಐಶ್ವರ್ಯ ನಿಲಯದಲ್ಲಿ ವಾಸವಾಗಿದ್ದು, ಇಲ್ಲಿಂದಲೇ ಡ್ರಗ್ ದಂಧೆ ನಡೆಸುತ್ತಿದ್ದಳು. ಮುಂಬೈನ ಡ್ರಗ್ ಪೆಡ್ಲರ್ ಕೊಟ್ಟ ಮಾಹಿತಿ ಮೇರೆಗೆ ಈಕೆ ಮನೆಯ ಮೇಲೆ ದಾಳಿ ಮಾಡಿದಾಗ, ಎಂಡಿಎಂಎ ಎಂಬ ಮಾದಕ ವಸ್ತು ಸಮೇತ ಸಿಕ್ಕಿಬಿದ್ದು ಅರೆಸ್ಟ್ ಆಗಿದ್ದಾಳೆ.

 

Share This Article
Leave a Comment

Leave a Reply

Your email address will not be published. Required fields are marked *