ಬೆಂಗಳೂರು: ನಾವು ನೀವೆಲ್ಲಾ ಫಲಿತಾಂಶ ನೋಡ್ತಿದಿವಿ ಸೋಲನ್ನು ಒಪ್ಪಬೇಕು. ಗೆಲುವನ್ನು ಒಪ್ಪಬೇಕು ಇದು ಪ್ರಜಾಪ್ರಭುತ್ವದ ನಿಯಮವಾಗಿದೆ. ಮಸ್ಕಿಯಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದೇವೆ. ಕಾರ್ಯಕರ್ತರು ಯಾರೂ ಸಂಭ್ರಮ ಮಾಡಬಾರದು ಕೋವಿಡ್ ನಿಯಮ ಪಾಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದ್ದಾರೆ.
ಬೈ ಎಲೆಕ್ಷನ್ ಚುನಾವಣಾ ಫಲಿತಾಂಶ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಸ್ಕಿಯಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದೇವೆ. ಮಸ್ಕಿ ಕ್ಷೇತ್ರದ ಅಭ್ಯರ್ಥಿ ತುರುವಿಹಾಳ್‍ಗೆ ಕರೆ ಮಾಡಿ ಅಭಿನಂದನೆ ಹೇಳಿದ್ದೇನೆ. ಯಾರೂ ಸಂಭ್ರಮ ಮಾಡದಂತೆ ಸೂಚನೆ ನೀಡಿದ್ದೇನೆ. ಲಾಕ್‍ಡೌನ್ ಮುಗಿದ ನಂತರ ಬಂದು ಭೇಟಿ ಆಗುವಂತೆ ಸೂಚನೆ ಕೊಡಲಾಗಿದೆ ಎಂದರು.
ಹೊರ ರಾಜ್ಯದಲ್ಲಿ ಬಿಜೆಪಿ ಸೋಲು ಡಿಎಂಕೆ ಗೆಲವು ಯಾವುದನ್ನು ಸಂಭ್ರಮಿಸುವುದು ಬೇಡ. ಮಮತಾ ಬ್ಯಾನರ್ಜಿ ಅವರಿಗೆ ಕೊಡಬಾರದ ಕಾಟ ಕೊಟ್ಟರು. ಆ ಶೋಷಣೆ ಇದೆಯಲ್ಲ ಹೇಳಬಾರದು. 8 ಹಂತದಲ್ಲಿ ಚುನಾವಣೆ ಮಾಡಿದರು. ದೇಶದ ಅಧಿಕಾರ ಸರ್ಕಾರ ಎಲ್ಲಾ ದುರ್ಬಳಕೆ ಮಾಡಿಕೊಂಡರು. ಆದರೂ ಪಶ್ಚಿಮ ಬಂಗಾಳದ ಜನ ಅವರ ಕೈ ಹಿಡಿದಿದ್ದಾರೆ ಎಂದರು.ರಾಜ್ಯದಲ್ಲೂ ಚುನಾವಣೆ ಮುಂದೂಡಿ ಅಂತ ನಾವು ಸಾಕಷ್ಟು ಬಾರಿ ಕೇಳಿಕೊಂಡಿದ್ದೇವು. ಆದರೆ ನಮ್ಮ ಮಾತು ಕೇಳಲಿಲ್ಲ. ಈಗ ಅನುಭವಿಸ್ತಿದ್ದಾರೆ. ಸೆಲೆಬ್ರೇಷನ್ ಗೆಲುವು ನಮ್ಮ ಪ್ರಯಾರಿಟಿ ಅಲ್ಲ. ಒಂದು ಜೀವ ಉಳಿದರೂ ಅದು ಮುಖ್ಯ ನಮಗೆ. ಕೆಪಿಸಿಸಿ ಕಚೇರಿಗೆ ಯಾರು ಬರಬೇಡಿ ಯಾವುದು ಸಲೆಬ್ರೇಷನ್ ಮಾಡಬೇಡಿ ಎಂದು ಪಕ್ಷದ ಕಾರ್ಯಕರ್ತರಲ್ಲಿ ಡಿಕೆಶಿ ಮನವಿ ಮಾಡಿದರು.