ಸೋನು ಸೂದ್ ಸಮಾಜಮುಖಿ ಕಾರ್ಯಗಳಿಗೆ ಈ ರಾಜಕಾರಣಿ ಸ್ಫೂರ್ತಿಯಂತೆ

Public TV
1 Min Read

ಮುಂಬೈ: ಬಾಲಿವುಡ್ ನಟ ಸೋನುಸೂದ್‍ರವರು ನನಗೆ ರಾಜಕೀಯ ಪ್ರವೇಶಿಸಲು ಇಷ್ಟ ಇಲ್ಲ. ಆದರೆ ಈ ರಾಜಕಾರಣಿ ನನಗೆ ಸ್ಪೂರ್ತಿ ಎಂದು ತಿಳಿಸಿದ್ದಾರೆ.

ಕೊರೊನಾ ಸಂಕಷ್ಟದಲ್ಲಿರುವ ಹಲವಾರು ಮಂದಿಗೆ ಸೆಲೆಬ್ರೆಟಿಗಳು ಸಹಾಯ ಮಾಡುತ್ತಿದ್ದಾರೆ. ಅಲ್ಲದೇ ಬಾಲಿವುಡ್ ನಟ ಸೂನ್ ಸೂದ್ ಕೂಡ ಲಾಕ್‍ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿ ಆರ್ಥಿಕವಾಗಿ ಹಾಗೂ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಅನೇಕ ಜನರಿಗೆ ನೆರವಾಗುತ್ತಿದ್ದಾರೆ.

ಇಷ್ಟೆಲ್ಲಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಟ ಸೋನು ಸೂದ್‍ರವರಿಗೆ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಎಂದರೆ ಬಹಳ ಇಷ್ಟ ಹಾಗೂ ಅವರು ಅಭಿವೃದ್ಧಿ ಪಡಿಸಿದ ಕಾರ್ಯಗಳು ತಮಗೆ ಸ್ಫೂರ್ತಿ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಮೊದಲಿಗೆ ನಾನು ನಟನಾಗಿ ಕೆಲಸ ಆರಂಭಿಸಿದಾಗ ಶೂಟಿಂಗ್‍ಗಾಗಿ ಹೈದರಾಬಾದ್‍ಗೆ ತೆರಳುತ್ತಿದ್ದೆ. ಈ ನಗರ ನೋಡಲು ಬಹಳ ಸುಂದರವಾಗಿತ್ತು. ಅಲ್ಲಿನ ಬೆಳವಣಿಗೆಗೆ ಕಾರಣ ಚಂದ್ರಬಾಬು ನಾಯ್ಡುರವರು ಎಂಬ ವಿಚಾರ ತಿಳಿಯಿತು. ಸದ್ಯ ತಾವು ಮಾಡುತ್ತಿರುವ ಅನೇಕ ಕೆಲಸಗಳಿಗೆ ಅವರೇ ಸ್ಪೂರ್ತಿ ಹಾಗೂ ಇಂದಿನ ಯುವ ಜನತೆ ಕೂಡ ಅವರನ್ನು ಪ್ರೇರಣೆಯಾಗಿ ಪಡೆದುಕೊಳ್ಳಬೇಕು ಎಂದಿದ್ದಾರೆ.

ವಿಶೇಷವೆಂದರೆ ಸೋನು ಸೂದ್ ಪತ್ನಿ ಸೋನಾಲಿಯವರು ಕೂಡ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯವರಾಗಿದ್ದು, ತಮ್ಮ ವಿದ್ಯಾಭ್ಯಾಸಕ್ಕಾಗಿ ನಾಗ್‍ಪುರಕ್ಕೆ ತೆರಳಿದಾಗ ಸೋನು ಸೂದ್‍ರವರನ್ನು ಭೇಟಿಯಾಗಿದ್ದು, ನಂತರ ಇಬ್ಬರು ಪ್ರೀತಿಸಿ ವಿವಾಹವಾಗಿದ್ದಾರೆ.

ಲಾಕ್‍ಡೌನ್ ವೇಳೆ ಸೋನು ಸೂದ್‍ರವರು ಮಾಡಿರುವ ಅನೇಕ ಕೆಲಸಗಳನ್ನು ನೋಡಿ ಚಂದ್ರಬಾಬುರವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: IAS ಆಕಾಂಕ್ಷಿಗಳಿಗೆ ಫ್ರೀ ಕೋಚಿಂಗ್ ಆಫರ್ ನೀಡಿದ ಸೋನು ಸೂದ್

Share This Article
Leave a Comment

Leave a Reply

Your email address will not be published. Required fields are marked *