ಸೋಂಕಿತರಿಗೆ ನೆಗೆಟಿವ್‌, ಆರೋಗ್ಯವಂತರಿಗೆ ಪಾಸಿಟಿವ್‌

Public TV
2 Min Read

ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಫಲಿತಾಂಶದ ಬಗ್ಗೆ ಗೊಂದಲ

ಬೆಂಗಳೂರು: ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಫಲಿತಾಂಶದ ನಿಖರತೆ ಬಗ್ಗೆ ಹಲವು ಸಂದೇಹಗಳು ಎದ್ದಿವೆ. ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವಡೆ ಆಟಿಜೆನ್ ಟೆಸ್ಟ್‌ಗಳ ಅಸಲಿ ಬಂಡವಾಳ ಬಯಲಾಗ್ತಿದೆ.

ಪರೀಕ್ಷೆಯ ವೇಳೆ ಸೋಂಕಿತರಿಗೆ ನೆಗೆಟಿವ್ ಎಂದು, ಆರೋಗ್ಯವಂತರಿಗೆ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ಆಂಟಿಜೆನ್ ಟೆಸ್ಟ್‌ಗಳ ಖಚಿತತೆ ಬಗ್ಗೆ ವೈದ್ಯರೇ ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಆಂಟಿಜೆನ್ ಟೆಸ್ಟ್ ಮಾಡಿಸಿದ್ದರೂ ಆರ್‌ಟಿ – ಪಿಸಿಆರ್ ಟೆಸ್ಟ್ ಮಾಡಿಸಲು ಸೂಚಿಸುತ್ತಿದ್ದಾರೆ.

ಹೊತ್ತಲ್ಲಿ ರಾಜ್ಯ ಸರ್ಕಾರ, ಇನ್ನೂ 5 ಲಕ್ಷ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್‍ಗಳ ಖರೀದಿಗೆ ಮುಂದಾಗಿದೆ. ಬೆಂಗಳೂರಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, 5 ಲಕ್ಷ ಆಂಟಿಜೆನ್ ಟೆಸ್ಟ್ ಖರೀದಿಗೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಇನ್ಮುಂದೆ ಟೆಸ್ಟ್‌ಗಳ ಸಂಖ್ಯೆಯನ್ನು ಜಾಸ್ತಿ ಮಾಡುತ್ತೇವೆ. 5 ಲಕ್ಷದಲ್ಲಿ ಅರ್ಧದಷ್ಟನ್ನು ಬೆಂಗಳೂರಿನಲ್ಲಿಯೇ ಬಳಸುತ್ತೇವೆ ಎಂದಿದ್ದಾರೆ.

ನಿನ್ನೆ ಅಪೂರ್ಣಗೊಂಡಿದ್ದ ಕೋವಿಡ್‌ ಟಾಸ್ಕ್ ಫೋರ್ಸ್‌ ಸಭೆ ಇಂದು ನಡೆಯಿತು. ಈ ವೇಳೆ 5 ಲಕ್ಷ ರ‍್ಯಾಪಿಡ್ ಆಂಟಿಜನ್‌ ಕಿಟ್ ಖರೀದಿಗೆ ಅನುಮೋದನೆ ನೀಡಲಾಯಿತು. ರ‍್ಯಾಪಿಡ್ ಆಂಟಿಜನ್‌ ಟೆಸ್ಟ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರ ಕಳುಹಿಸುವ ರೋಗಿಗಳಿಗೆ ಎರಡು ಸಾವಿರ ರೂ. ಮತ್ತು ಖಾಸಗಿಯಾಗಿ ಪರೀಕ್ಷೆಗೆ ಬಂದವರಿಗೆ ಮೂರು ಸಾವಿರ ರೂ. ಶುಲ್ಕ ನಿಗದಿಗೆ ತೀರ್ಮಾನಿಸಲಾಗಿದೆ.

ಹೊಸದಾಗಿ 16 – ಆರ್‌ಟಿ – ಪಿಸಿಆರ್‌ ಮತ್ತು 15- ಆಟೋಮೇಟೆಡ್‌ ಆರ್‌ಎನ್‌ಎ ಎಕ್ಸಟ್ರಾಕ್ಷನ್‌ ಲ್ಯಾಬ್ ಸ್ಥಾಪನೆಗೂ ಸರ್ಕಾರ ಅನುಮೋದನೆ ನೀಡಲಾಗಿದೆ. ಇದರಿಂದ ಈಗ ಲಭ್ಯವಿರುವ ಲ್ಯಾಬ್‌ಗಳ ಜತೆಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ. ಟೆಸ್ಟ್‌ಗಳ ಸಂಖ್ಯೆ ಸಹಜವಾಗಿ ಹೆಚ್ಚಾಗಲಿದ್ದು ದಿನಕ್ಕೆ ಐವತ್ತು ಸಾವಿರ ಟೆಸ್ಟ್‌ಗಳ ಗುರಿ ತಲುಪಲು ಸಾಧ್ಯವಾಗಲಿದೆ.

ಏನಿದು ರ‍್ಯಾ‍‍ಪಿಡ್ ಟೆಸ್ಟ್‌?
ಈಗ ಸಾಮಾನ್ಯ ಜ್ವರ ಬಂದರೂ ಕೊರೊನಾ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಇದರಲ್ಲಿ ನಿಖರ ಫಲಿತಾಂಶ ಬಂದರೂ ಫಲಿತಾಂಶ ಬರುವುದು ತಡವಾಗುತ್ತದೆ. ಹೀಗಾಗಿ ಸರ್ಕಾರ ರ‍್ಯಾ‍‍ಪಿಡ್ ಟೆಸ್ಟ್‌ಗೆ ಮುಂದಾಗಿದೆ. ಪಲ್ಸ್‌ ಆಕ್ಸಿ ಮೀಟರ್‌’ ಬಳಸಿ ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದವರನ್ನು ಅವರಿದ್ದ ಸ್ಥಳಕ್ಕೆ ಹೋಗಿ ಪರೀಕ್ಷೆ ಮಾಡಬಹುದು. ಕೇವಲ 20 ರಿಂದ 30 ನಿಮಿಷದ ಒಳಗಡೆ ಫಲಿತಾಂಶವನ್ನು ಪಡೆಯಬಹುದು.

Share This Article
Leave a Comment

Leave a Reply

Your email address will not be published. Required fields are marked *