ಸೋಂಕಿತರಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ ರೇಣುಕಾ ವಿದ್ಯಾಪೀಠ

Public TV
1 Min Read

ತುಮಕೂರು: ರೇಣುಕಾ ವಿದ್ಯಾಪೀಠ ಎಂಬ ವಿದ್ಯಾ ಸಂಸ್ಥೆ ವಿದ್ಯಾದಾನ ಜೊತೆ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.

ಇಡೀ ವಿದ್ಯಾಸಂಸ್ಥೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿ ಕೋವಿಡ್ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ. 150 ಬೇಡ್‍ಗಳನ್ನು ಮಾಡಿ ಅದರಲ್ಲಿ 40 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿವರೆಗೂ 550 ಸೋಂಕಿತರು ಗುಣಮುಖರಾಗಿ ಹೋಗಿದ್ದಾರೆ. ತಜ್ಞ ವೈದ್ಯರು ಸೇರಿದಂತೆ ದಾದಿಯರು 24 ಗಂಟೆ ಇಲ್ಲಿ ಇದ್ದು ಸೋಂಕಿತರ ಆರೋಗ್ಯ ನೋಡುತ್ತಿದ್ದಾರೆ. ಸೋಂಕಿತರಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದು, ರೋಗನಿರೋಧಕ ಶಕ್ತಿ ಹೆಚ್ಚಾಗುವ ಆಹಾರವನ್ನು ನೀಡುತ್ತಿದ್ದಾರೆ. ಇದನ್ನೂ ಓದಿ: ಬಿಎಸ್‍ವೈಗೆ ಆಡಳಿತ ನಡೆಸಲು ಆಗುತ್ತಿಲ್ಲ,ಅವರ ಪುತ್ರ ಆಡಳಿತ ನಡೆಸುತ್ತಿದ್ದಾರೆ: ಶಾಸಕ ಶರಣಬಸಪ್ಪ ದರ್ಶನಾಪುರ

ಬೆಳಗ್ಗೆ ಎದ್ದ ತಕ್ಷಣ ಆಯುರ್ವೇದಿಕ್ ಕಷಾಯ, ಬಳಿಕ ಯೋಗಾಭ್ಯಾಸ. ಉಪಹಾರ, ಮಧ್ಯಾಹ್ನ ಊಟ, ಹಣ್ಣು ಹಂಪಲು, ಅರಿಶಿಣ ಮಿಶ್ರಿತ ಹಾಲು ಕೊಟ್ಟು ಸೋಂಕಿತರನ್ನು ಗುಣಮುಖರನ್ನಾಗಿ ಮಾಡಲಾಗುತ್ತಿದೆ. ಸೋಂಕಿತರ ಮಾನಸಿಕ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆಧ್ಯಾತ್ಮಿಕತೆಗೆ ಹೆಚ್ಚು ಒತ್ತುಕೊಟ್ಟು ಸಾಧು ಸಂತರಿಂದ ಪ್ರವಚನ ಮಾಡಿಸಲಾಗುತ್ತಿದೆ.

ಸಿದ್ದಗಂಗಾ ಶ್ರೀಗಳು ಸೇರಿದಂತೆ ಹಲವು ಸ್ವಾಮಿಜಿಗಳು ಪ್ರವಚನ ಮಾಡಿ ಸೋಂಕಿತರ ಆತ್ಮಬಲ ಹೆಚ್ಚಿಸಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಬಡವರ ಸೇವೆ ಮಾಡುತ್ತಾ ಬಂದಿದೆ. ರೇಣುಕಾ ವಿದ್ಯಾಪೀಠ ಇವರ ಈ ಸೇವೆಗೆ ಶ್ಲಾಘನೆ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *