ಸೈಯದ್ ಮುಸ್ತಫಾ ಚಾರಿಟೇಬಲ್ ಟ್ರಸ್ಟ್- 15 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು ಹಾನಗಲ್ ತಾಲ್ಲೂಕು ಆಸ್ಪತ್ರೆಗೆ ದಾನ

Public TV
1 Min Read

ಹಾವೇರಿ: ಕೊರೊನಾ ಅರ್ಭಟದಿಂದಾಗಿ ಆಕ್ಸಿಜನ್, ಬೆಡ್‍ಗೆ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಸೋಂಕಿತರಿಗೆ ಪ್ರಾಣವಾಯುವಿನ ಅಲಭ್ಯತೆಯಿಂದ ಸೋಂಕಿತರು ಸಂಕಷ್ಟಕ್ಕೀಡಾಗಬಾರದು ಎನ್ನುವ ಸದುದ್ದೇಶದಿಂದ ಹಾನಗಲ್ ಸೈಯದ್ ಮುಸ್ತಫಾ ಚಾರಿಟೇಬಲ್ ಟ್ರಸ್ಟ್‌ನಿಂದ15 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನ ನೀಡಲಾಯಿತು.

ಸೈಯ್ಯದ್ ಮುಸ್ತಫಾ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ 2 ರಿಂದ 9 ಲೀ. ಕ್ಷಮತೆಯುಳ್ಳ ಒಟ್ಟು 15 ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು ಸ್ವಯಂ ಆಕ್ಸಿಜನ್ ಉತ್ಪಾದಿಸಿಕೊಳ್ಳಲಿದ್ದು, ಸೋಂಕಿತರಿಗೆ ಪ್ರಾಣವಾಯುವಿನ ಕೊರತೆ ನೀಗಿಸಲಿವೆ. ಈಗಾಗಲೇ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ 5 ಕಾನ್ಸಂಟ್ರೇಟರ್ ನೀಡಿದ್ದಾರೆ. ಸೈಯದ್ ಮುಸ್ತಫಾ ಚಾರಿಟೇಬಲ್ ಟ್ರಸ್ಟ್‍ನಿಂದ 15 ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಿ ರೋಗಿಗಳಿಗೆ ಅನುಕೂಲವಾಗುವಂತೆ ಕಾನ್ಸ್‍ಂಟ್ರೇಟರ್ ನೀಡಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಸಂಚಾರಿ ಕೋವಿಡ್ ಚಿಕಿತ್ಸಾ ಆಸ್ಪತ್ರ್ರೆ ಆರಂಭ

ಸೈಯ್ಯದ್ ಆಶೀಫ್ ಇನಾಂದಾರ್ ಇವರ ನೇತೃತ್ವದಲ್ಲಿ ಸೈಯ್ಯದ್ ಮುಸ್ತಫಾ ಚಾರಿಟೇಬಲ್ ಸದಸ್ಯರು, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಆಸ್ಪತ್ರೆಯ ಅಧಿಕಾರಿಗಳು ವೈದ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *