ಸೈಕಲ್, ಟ್ಯಾಕ್ಸಿಗೆ ಗುದ್ದಿದ ಮರ್ಸಿಡಿಸ್ – ಮೂವರು ಸ್ಥಳದಲ್ಲೇ ದುರ್ಮರಣ

Public TV
1 Min Read

ಚಂಢೀಗಢ್: ವೇಗವಾಗಿ ಚಲಿಸುತ್ತಿದ್ದ ಮರ್ಸಿಡಿಸ್ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಪಂಚಾಬ್‍ನ ಮೊಹಾಲಿಯಲ್ಲಿ ನಡೆದಿದೆ.

ಮೃತರನ್ನು ಮಥುರಾದ ಪ್ರಸಾದ್ (ಸೈಕಲ್ ಸವಾರ), ಝಾಕಿರ್‍ಪುರ್ ನಿವಾಸಿ ಅಂಕುಶ್ ನರುಲಾ ಹಾಗೂ ಘೋಲುಮಾಜ್ರಾ ಗ್ರಾಮದ ಧರಮ್‍ಪ್ರೀತ್ ಎಂದು ಗುರುತಿಸಲಾಗಿದೆ.

ಮೊಹಾಲಿ ಏರ್ಪಪೋರ್ಟ್ ರಸ್ತೆಯ ರಾಧಾ ಸೋಮಿ ಸತ್ಸಂಗ್ ಚೌಕ್ ಬಳಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದ ಪರಿಣಾಮವಾಗಿ ಮೂವರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು ಮೊದಲು ಟ್ಯಾಕ್ಸಿಯೊಂದಕ್ಕೆ ಗುದ್ದಿ ನಂತರ ಸೈಕಲ್ ಸವಾರರ ಮೇಲೆ ಹರಿದಿದೆ. ರಾತ್ರಿ ಕೆಲಸ ಮುಗಿಸಿ ಟ್ಯಾಕ್ಸಿಯಲ್ಲಿ ಹೋಗುತ್ತಿದ್ದ ನೌಕರರಲ್ಲಿ ಇಬ್ಬರು ಹಾಗೂ ಸೈಕಲ್ ಸವಾರರಲ್ಲಿ ಒಬ್ಬ ಸೇರಿ ಒಟ್ಟು ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಚಾಲಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *