ಸೆ.7ರಿಂದ ಮೆಟ್ರೋ ಸೇವೆ ಆರಂಭ – ಪ್ರಯಾಣಿಕರಿಗೆ ಷರತ್ತುಗಳೇನು?

Public TV
2 Min Read

– ಟೋಕನ್‌ ವ್ಯವಸ್ಥೆ ಇಲ್ಲ
– ಸ್ಮಾರ್ಟ್‌ ಕಾರ್ಡ್‌ ಹೊಂದಿದವರಿಗೆ ಮಾತ್ರ ಅನುಮತಿ

ಬೆಂಗಳೂರು: ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮೆಟ್ರೋ ಓಟಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ.

ಕೋವಿಡ್‌ 19 ಕಾರಣದಿಂದ ಮಾರ್ಚ್ 22 ರಿಂದ ಮೆಟ್ರೋ ಸೇವೆ ರದ್ದುಪಡಿಸಲಾಗಿತ್ತು. ಈಗ ಪ್ರಯಾಣಿಕರಿಗೆ ಕೆಲ ಷರತ್ತಗಳನ್ನು ವಿಧಿಸಿ ಮೆಟ್ರೋ ಓಡಿಸಲು ಸಿದ್ಧತೆ ನಡೆಸಿದೆ.

ಸೆಪ್ಟೆಂಬರ್ 7 ರಿಂದ 10ನೇ ತಾರೀಖಿನವರೆಗೆ ನೇರಳೆ ಮಾರ್ಗದಲ್ಲಿ ಬೆಳಗ್ಗೆ 3 ಗಂಟೆ ಕಾಲ ಸಂಜೆ 3 ಗಂಟೆ ಕಾಲ ಮಾತ್ರ ಮೆಟ್ರೋ ಕಾರ್ಯಾಚರಣೆ ಮಾಡಲಿದೆ. ಸೆಪ್ಟೆಂಬರ್ 9ರಿಂದ ಹಸಿರು ಮಾರ್ಗದಲ್ಲಿ ಮೆಟ್ರೋ ಆರಂಭವಾಗಲಿದೆ.

ಸೆಪ್ಟೆಂಬರ್ 7 ರಿಂದ 10ರವರೆಗೆ ನೇರಳೆ ಮಾರ್ಗದಲ್ಲಿ ಬೆಳಗ್ಗೆ 8 ರಿಂದ ಬೆಳಗ್ಗೆ 11 ವರೆಗೆ ಮತ್ತು ಸಂಜೆ 4-30 ರಿಂದ ರಾತ್ರಿ 7-30 ವರಿಗೆ ಹಸಿರು ಮಾರ್ಗದಲ್ಲಿ ಸೆಪ್ಟೆಂಬರ್ 9 , 10 ರಂದು ಬೆಳಗ್ಗೆ 8 ರಿಂದ 11 ವರೆಗೆ ಸಂಜೆ 4.30 ರಿಂದ ರಾತ್ರಿ 7.30ವರೆಗೆ ಮಾತ್ರ ಮೆಟ್ರೋ ಓಡಾಟ ನಡೆಸಲಿದೆ.

ಸೆಪ್ಟೆಂಬರ್ 11 ರಿಂದ ಎಲ್ಲಾ ರೈಲು ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೆ ಎರಡು ಮಾರ್ಗದಲ್ಲಿ ಸಂಚರಿಸಲಿದೆ. ಜನದಟ್ಟಣೆಯ ಅವಧಿಯಲ್ಲಿ ಪ್ರತಿ 5 ನಿಮಿಷಕ್ಕೊಮ್ಮೆ ಹಾಗೂ ಬೇರೆ ಸಮಯದಲ್ಲಿ10 ನಿಮಿಷಗಳ ಅಂತರದಲ್ಲಿ ಮೆಟ್ರೋ ಓಡಲಿದೆ.

ಷರತ್ತುಗಳು ಏನು?
– ಮೆಟ್ರೋದಲ್ಲಿ ಓಡಾಟ ನಡೆಸುವವರು ರೀಚಾರ್ಜ್ ನೊಂದಿಗೆ ಸ್ಮಾರ್ಟ್ ಕಾರ್ಡ್ ನಲ್ಲಿ ಪ್ರಯಾಣ
-ಮೆಟ್ರೋ ಪ್ರಯಾಣಿಕರಿಗೆ ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ
– ಪ್ರವೇಶ ದ್ವಾರ , ನಿರ್ಗಮನದ, ಹಾಗೂ ಪ್ಲಾಟ್ ಫಾರ್ಮ್ ನಲ್ಲಿ ಹಳದಿ ಗುರುತಿನ ಜಾಗದಲ್ಲಿ ನಿಲ್ಲಬೇಕು
– ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು
– 50 ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲುವಂತಿಲ್ಲ

-ಆರು ಬೋಗಿ ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ
-ರೈಲಿನಲ್ಲಿ ಗುರುತಿಸಿರುವ ಆಸನಗಳಲ್ಲಿ ಮಾತ್ರ ಕೂರಲು ಅವಕಾಶ
– ಎಲ್ಲಾ ಪ್ರಯಾಣಿಕರಿಗೆ ದೇಹದ ಟೆಂಪರೇಚರ್ ಪರೀಕ್ಷೆ ಮಾಡಲಾಗುತ್ತೆ
– ಎಸ್ಕೇಲೇಟರ್ ಗಳನ್ನ ಬಳಸುವ ಪ್ರಯಾಣಿಕರು ತಮ್ಮ ಮುಂದಿರುವ ಪ್ರಯಾಣಿಕರಿಂದ ಒಂದು ಮೆಟ್ಟಿಲು ಅಂತರ ಕಾಪಾಡಬೇಕು

– 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಇದ್ರೆ ಮಾತ್ರ ಓಡಾಟ
– ಕಂಟೈನ್ಮೆಂಟ್ ಜೋನ್ ವ್ಯಾಪ್ತಿಯ ಮೆಟ್ರೋ ನಿಲ್ದಾಣಗಳು ಬಂದ್
– ಕಂಟೈನ್ಮೆಂಟ್ ಜೋನ್ ಗಳ ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ನಿಲ್ಲಿಸಲ್ಲ

Share This Article
Leave a Comment

Leave a Reply

Your email address will not be published. Required fields are marked *