ಸೂಕ್ತ ಪ್ರಮಾಣದಲ್ಲಿ ವ್ಯಾಕ್ಸಿನ್ ಲಭ್ಯ ಇಲ್ಲ: ಗೌರವ್ ಗುಪ್ತಾ

Public TV
2 Min Read

ಬೆಂಗಳೂರು: ಸಿಲಿಕಾನ್ ಸಿಟಿಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ಕೊರತೆ ಕಾಣುತ್ತಿದೆ. ಕಾರಣ ಅಗತ್ಯ ಪ್ರಮಾಣದಲ್ಲಿ ಆರೋಗ್ಯ ಇಲಾಖೆಯಿಂದ ವ್ಯಾಕ್ಸಿನ್ ಲಭ್ಯತೆ ಆಗುತ್ತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಮೀಷನರ್, ನಗರಕ್ಕೆ ನಿತ್ಯ 40-50 ಸಾವಿರ ಮಾತ್ರ ವ್ಯಾಕ್ಸಿನ್ ಸಿಗುತ್ತಿದೆ. ಆದರೆ ಒಂದೂವರೆ ಲಕ್ಷದವರೆಗೂ ವ್ಯಾಕ್ಸಿನ್ ಕೊಡಲು ಪಾಲಿಕೆ ಬಳಿ ಸಿಸ್ಟಂ ರೆಡಿ ಇದೆ. ಆದರೆ ಪೂರೈಕೆ ಹೆಚ್ಚಳ ಆಗಬೇಕಿದೆ ಎಂದರು.

ಇದೇ ವೇಳೆ ಮಹಾರಾಷ್ಟ್ರದ ಮಾದರಿಯಂತೆ ಮನೆ ಮನೆಯ ಬೆಡ್ ರಿಡನ್ ಗಳಿಗೆ ವ್ಯಾಕ್ಸಿನ್ ಮಾಡೆಲ್ ವಿಚಾರವೂ ಚರ್ಚೆ ಆಗಿದೆ. ಈ ದಿಕ್ಕಿನಲ್ಲಿ ವ್ಯಾಕ್ಸಿನ್ ನೀಡುವ ವಿಚಾರವೂ ಈಗಾಗಲೇ ಚರ್ಚೆ ನಡೆಯುತ್ತಾ ಇದೆ. ಶೇ.50 ಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಪಾಲಿಕೆಯೇ ಹೆಚ್ಚು ವ್ಯಾಕ್ಸಿನ್ ನೀಡಲಾಗಿದೆ. ವ್ಯಾಕ್ಸಿನ್ ಲಭ್ಯತೆ ಆಧರಿಸಿ ಪಾಲಿಕೆಯೇ ಮನೆ ಬಾಗಿಲಿಗೆ ಹೋಗಿ ವ್ಯಾಕ್ಸಿನ್ ಕೊಡಲಾಗುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಸೂಚನೆಯಂತೆ ಕಾಲೇಜುಗಳಲ್ಲಿ ವ್ಯಾಕ್ಸಿನ್ ಡ್ರೈವ್ ಕ್ಯಾಂಪ್ ನಡೆಯುತ್ತಿದೆ. 61 ಕಾಲೇಜುಗಳಲ್ಲಿ ವ್ಯಾಕ್ಸಿನ್ ನೀಡುವ ಕೆಲಸಕ್ಕೂ ಚಾಲನೆ ನೀಡಲಾಗಿದೆ. ಇದನ್ನೂ ಓದಿ: ನಾಲ್ಕು ಬಾರಿ ಕಾರ್ ಪಲ್ಟಿಯಾಗಿ, ಮರಕ್ಕೆ ಡಿಕ್ಕಿ ಹೊಡಿತು: ಪ್ರತ್ಯಕ್ಷದರ್ಶಿ

ನೆಗೆಟಿವ್ ರಿಪೋರ್ಟ್ ಕಡ್ಡಾಯದ ಉಲ್ಲೇಖ ಇಲ್ಲ:
ಮಹಾರಾಷ್ಟ್ರ ಭಾಗದಿಂದ ಬರುವ ಪ್ರಯಾಣಿಕರಿಗೆ ಕೊರೋನಾ ನೆಗೆಟಿವ್ ವರದಿ ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿಲ್ಲ. ಆದರೆ ಗಡಿ ಪ್ರದೇಶದ ಜಿಲ್ಲೆಗಳಲ್ಲಿ ನೆಗೆಟಿವ್ ರಿಪೋರ್ಟ್ ಬಗ್ಗೆ ಉಲ್ಲೇಖ ಇದೆ. ಜೊತೆಗೆ ನಗರದಲ್ಲಿ ವಿಮಾನ, ರೈಲು, ಬಸ್, ಖಾಸಗೀ ವಾಹನಗಳಲ್ಲಿ ಬರುವವರ ಕೊರೋನಾ ನೆಗೆಟಿವ್ ವರದಿ ಪಡೆಯುವುದು ಕಷ್ಟ ಎಂದು ಕಮೀಷನರ್ ಸ್ಪಷ್ಟಪಡಿಸಿದರು.

ತದನಂತರ ಅನ್ ಲಾಕ್ 3.0 ಸಂಬಂಧಿತ ಸಭೆಯಲ್ಲಿ ಸಿನಿಮಾ ರಂಗನವನ್ನು ಪರಿಗಣಿಸಿ ಎಂದು ಸಾರಾ ಗೋವಿಂದು ಪಾಲಿಕೆ ಕಮೀಷನರ್ ಗೆ ಮನವಿ ಮಾಡಿದರು. ಔಟ್ ಡೋರ್ ಶೂಟಿಂಗ್ ಗೆ ಅವಕಾಶ ದೊರಕಿದೆ. ಅದೇ ರೀತಿ ಇನ್ ಡೋರ್ ಶೂಟಿಂಗ್ ಗೆ ಅವಕಾಶ ಕೊಡಿ, ಸೆಟ್ ಗಳನ್ನ ಹಾಕಿ ಸಮಯಕ್ಕಾಗಿ ಕಾಯುತ್ತಿದ್ದು, ತಡವಾದರೆ ಸೆಟ್ ಹಾಳಾಗುವ ಸ್ಥಿತಿಯನ್ನ ಸಾ.ರಾ ಗೋವಿಂದು ಕಮೀಷನರ್ ಗೆ ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *