ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೆ ಇಂದು ಜೈಲೂಟ

Public TV
3 Min Read

-ನಾಳೆ ಜಾಮೀನು ಅರ್ಜಿ ವಿಚಾರಣೆ

ಮುಂಬೈ: ಮಂಗಳವಾರ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‍ಸಿಬಿ)ನಿಂದ ಬಂಧನಕ್ಕೊಳಗಾಗಿದ್ದ ನಟಿ ರಿಯಾ ಚಕ್ರವರ್ತಿಯನ್ನ ಇಂದು ಮುಂಬೈನ ಬೈಖಲಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ನಾಳೆ ರಿಯಾ ಮತ್ತು ಸೋದರ ಶೌವಿಕ್ ಚಕ್ರವರ್ತಿಯ ಜಾಮೀನು ಅರ್ಜಿಯ ವಿಚಾರಣೆ ಮುಂಬೈ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.

https://www.instagram.com/p/CE34mbMnB_E/

ಮಂಗಳವಾರ ವಿಚಾರಣೆಗೆ ಹಾಜರಾಗಿದ್ದ ರಿಯಾ ಚಕ್ರವರ್ತಿಯನ್ನ ಎನ್‍ಸಿಬಿ ಮಧ್ಯಾಹ್ನ 3.30ಕ್ಕೆ ಬಂಧಿಸಿತ್ತು. ನಂತರ ವೈದ್ಯಕೀಯ ತಪಾಸಣೆ ಬಳಿಕ ರಿಯಾರನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದ ಎನ್‍ಸಿಬಿ, ಆರೋಪಿಯನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಿಕೊಂಡಿತ್ತು. ನ್ಯಾಯಾಧೀಶರು ಆರೋಪಿಗೆ 14 ದಿನದ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಇದನ್ನೂ ಓದಿ: ಡ್ರಗ್ಸ್ ಅಡಿಕ್ಟ್ ಸುಶಾಂತ್‍ನನ್ನು ಪ್ರೀತಿಸಿದ್ದಕ್ಕೆ ಈ ಶಿಕ್ಷೆ: ರಿಯಾ ಪರ ವಕೀಲ

https://www.instagram.com/p/CE5z56OH2-5/

ನ್ಯಾಯಾಂಗ ಬಂಧನದ ಬಳಿಕ ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮನೋಶಿಂಧೆ, ಜಾಮೀನು ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ವಾವ-ಪ್ರತಿವಾದ ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿತ್ತು. ತಡರಾತ್ರಿಯಾದ ಹಿನ್ನೆಲೆ ರಿಯಾರನ್ನ ಎನ್‍ಸಿಬಿ ಕಚೇರಿಯಲ್ಲಿಯೇ ಇರಿಸಲಾಗಿತ್ತು. ಇಂದು ಬೆಳಗ್ಗೆ ನ್ಯಾಯಾಲಯದ ಆದೇಶದಂತೆ ಬೈಖಲಾ ಜೈಲಿಗೆ ರವಾನೆ ಮಾಡಲಾಗಿದೆ. ಹಾಗಾಗಿ ಇಂದು ರಿಯಾ ಚಕ್ರವರ್ತಿಯ ಜೈಲಿನಲ್ಲಿ ಕಳೆಯಲಿದ್ದು, ಅಲ್ಲಿ ನೀಡುವ ಊಟವನ್ನ ಸೇವಿಸಬೇಕಿದೆ.

ರಿಯಾ ವಿರುದ್ಧ ಎನ್‍ಡಿಪಿಎಸ್ ಆ್ಯಕ್ಟ್ 8(ಸಿ), 20(ಬಿ), 22, 27ಎ, 28 ಮತ್ತು 29 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಡ್ರಗ್ಸ್ ಖರೀದಿ ಮತ್ತು ವ್ಯಾಪಾರದ ಆರೋಪಗಳು ರಿಯಾ ಮೇಲಿವೆ. ಗೆಳತ ಸುಶಾಂತ್ ಸಿಂಗ್ ರಜಪೂತ್ ಹಣದಿಂದ ರಿಯಾ ಡ್ರಗ್ಸ್ ಖರೀದಿಸುತ್ತಿದ್ದರು. ಮೂರು ದಿನದ ವಿಚಾರಣೆಯಲ್ಲಿ ರಿಯಾ ನೀಡಿರುವ ಹೇಳಿಕೆಗಳು ಆಕೆಯ ಬಂಧನಕ್ಕೆ ಸಾಕ್ಷ್ಯಗಳಾಗಿವೆ ಎಂದು ಎನ್‍ಸಿಬಿ ಉಪನಿರ್ದೇಶಕ ಎಂ.ಎ.ಜೈನ್ ಹೇಳಿದ್ದಾರೆ. ಇದನ್ನೂ ಓದಿ: ವಿಚಾರಣೆ ವೇಳೆ ತಮ್ಮನನ್ನ ನೋಡಿ ಕಣ್ಣೀರಿಟ್ಟ ರಿಯಾ ಚಕ್ರವರ್ತಿ-25 ಬಿಟೌನ್ ಸ್ಟಾರ್ ಗಳಿಗೆ ಢವಢವ ಶುರು

ಮಂಗಳವಾರ ರಿಯಾ ಬಂಧನದ ಬಳಿಕ ಮಾತನಾಡಿದ್ದ ವಕೀಲ ಸತೀಶ್ ಮನೋಶಿಂಧೆ, ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನ ಪ್ರೀತಿಸಿದ ತಪ್ಪಿಗೆ ನನ್ನ ಕಕ್ಷಿದಾರ ರಿಯಾ ಚಕ್ರವರ್ತಿಯ ಬಂಧನವಾಗಿದೆ. ಮೂರು ತನಿಖಾ ಏಜೆನ್ಸಿಗಳು ಓರ್ವ ಮಹಿಳೆ ಹಿಂದೆ ಬಿದ್ದಿವೆ. ಕಾರಣ ಆಕೆ ಓರ್ವ ಡ್ರಗ್ಸ್ ಅಡಿಕ್ಟ್ ನನ್ನು ಪ್ರೀತಿಸುತ್ತಿದ್ದಳು. ಸುಶಾಂತ್ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದರು. ಇದನ್ನೂ ಓದಿ: ಕರ್ಮ ನಿಮ್ಮನ್ನ ಬಿಡಲ್ಲ- ರಿಯಾ ಬಂಧನಕ್ಕೆ ಅಂಕಿತಾ ಪ್ರತಿಕ್ರಿಯೆ

ಜೂನ್ 14ರಂದು ಸುಶಾಂತ್ ಮೃತದೇಹ ಅವರ ಬಾಂದ್ರಾ ನಿವಾಸದಲ್ಲಿ ಪತ್ತೆಯಾಗಿತ್ತು. ಮಾನಸಿಕ ಖಿನ್ನತೆಗೆ ಒಳಗಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿತ್ತು. ಆದ್ರೆ ಬಾಲಿವುಡ್ ನಟಿ ಕಂಗನಾ ರಣಾವತ್, ಇದೊಂದು ಪಕ್ಕಾ ಪೂರ್ವಯೋಜಿತ ಕೊಲೆ. ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ ಮಹಾರೋಗಕ್ಕೆ ಸುಶಾಂತ್ ಬಲಿಯಾಗಿದ್ದಾರೆ ಎಂದು ಆರೋಪಿಸಿ ಧ್ವನಿ ಎತ್ತಿದ್ದರು. ತದನಂತರ ಸಾವಿನ ಬಗ್ಗೆ ಮತ್ತು ಮುಂಬೈ ಪೊಲೀಸರ ತನಿಖೆಯ ಕುರಿತು ಅನುಮಾನಗಳು ವ್ಯಕ್ತವಾಗಿದ್ದರು. ಇತ್ತ ಸುಶಾಂತ್ ನಿಧನದ ಒಂದೂವರೆ ತಿಂಗಳ ಬಳಿಕ ಸುಶಾಂತ್ ತಂದೆ ಕೆ.ಕೆ.ಸಿಂಗ್ ಬಿಹಾರದ ಪಾಟ್ನಾದಲ್ಲಿ ನಟಿ ರಿಯಾ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ: ಡ್ರಗ್ಸ್ ಸೇವನೆ, ಮಾರಾಟ ಆರೋಪ- ರಿಯಾ ಚಕ್ರವರ್ತಿ ವಕೀಲ ಸ್ಪಷ್ಟನೆ

https://www.instagram.com/p/CE35YHCnVhY/

ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ತನಿಖೆಯನ್ನ ಸಿಬಿಐಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಇತ್ತ ನಟಿ ರಿಯಾ, ಪಾಟ್ನಾ ಪ್ರಕರಣವನ್ನ ಮುಂಬೈಗೆ ವರ್ಗಾಯಿಸಬೇಕೆಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣದ ತನಿಖೆ ಸಿಬಿಐಗೆ ವರ್ಗಾಯಿಸಿ ಅದೇಶ ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *