ಸುಶಾಂತ್ ಆತ್ಮಹತ್ಯೆ ಪ್ರಕರಣ- ಮಾಜಿ ಪ್ರೇಯಸಿ ರಿಯಾ ವಿರುದ್ಧ ದೂರು

Public TV
2 Min Read

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಯ ವಿರುದ್ಧ ಬಿಹಾರ್ ನ್ಯಾಯಾಲಯದಲ್ಲಿ ಶನಿವಾರ ದೂರು ದಾಖಲಾಗಿದೆ.

ಬಿಹಾರದ ಮುಜಪ್ಫರ್ ಪುರದಲ್ಲಿನ ಪಟಾಹಿ ನಿವಾಸಿ ಕುಂದನ್ ಕುಮಾರ್ ದೂರು ನೀಡಿದ್ದಾರೆ. ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಕೇಶ್ ಕುಮಾರ್ ಅವರ ಎದುರು ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದಾರೆ. ಈ ಪ್ರಕರಣ ಜೂನ್ 24ರಂದು ವಿಚಾರಣೆಗೆ ಬರಲಿದೆ. ಇದನ್ನೂ ಓದಿ: ಸುಶಾಂತ್ ಸಿಂಗ್ ಕುರಿತು ಸಲ್ಮಾನ್ ಟ್ವೀಟ್- ನೆಟ್ಟಿಗರಿಂದ ಆಕ್ರೋಶ

ರಿಯಾ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಶೋಷಿಸಿದ್ದಾರೆ ಎಂದು ಕುಂದನ್ ಕುಮಾರ್ ಆರೋಪಿಸಿದ್ದಾರೆ. “ನನ್ನ ಕಕ್ಷಿದಾರರು ಸುಶಾಂತ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಹೀಗಾಗಿ ಅವರ ಆತ್ಮಹತ್ಯೆಯಿಂದ ತೀವ್ರವಾಗಿ ನೊಂದಿದ್ದಾರೆ. ಐಪಿಸಿ ಸೆಕ್ಷನ್‍ಗಳಾದ 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 420 (ವಂಚನೆ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ” ಎಂದು ಕುಮಾರ್ ಪರ ವಕೀಲ ಕಮಲೇಶ್ ತಿಳಿಸಿದ್ದಾರೆ.

ಉತ್ತರ ಬಿಹಾರದ ಪಟ್ಟಣ ಮುಜಫ್ಫರ್ ಪುರದಲ್ಲಿನ ಸಿಜೆಎಂ ನ್ಯಾಯಾಲಯದಲ್ಲಿ ನಟ ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ದಾಖಲಾಗಿರುವ ಎರಡನೆಯ ಪ್ರಕರಣ ಇದಾಗಿದೆ.

ಸುಶಾಂತ್ ಆತ್ಮಹತ್ಯೆಯ ನಂತರ ಮುಂಬೈ ಪೊಲೀಸರು ರಿಯಾರನ್ನು ವಿಚಾರಣೆ ನಡೆಸಿದ್ದರು. ಸುಶಾಂತ್ ಹೆಸರು ಕೆಲವು ನಟಿಯರ ಜೊತೆ ಥಳಕು ಹಾಕಿಕೊಂಡಿತ್ತು. ಈ ನಟಿಯರ ಪೈಕಿ ರಿಯಾ ಚಕ್ರವರ್ತಿ ಸಹ ಒಬ್ಬರು. ಸುಶಾಂತ್ ಆತ್ಮಹತ್ಯೆಯ ಹಿಂದಿನ ದಿನ ಗೆಳೆತಿ ರಿಯಾಗೆ ಕಾಲ್ ಮಾಡಿದ್ದಾರೆ. ಆದರೆ ರಿಯಾ ಕರೆಯನ್ನು ಸ್ವೀಕರಿಸಿಲ್ಲ. ಹಾಗಾಗಿ ಇಬ್ಬರ ಮಧ್ಯೆ ಏನಾದ್ರೂ ಜಗಳ ನಡೆದಿತ್ತಾ? ಇಬ್ಬರ ನಡುವಿನ ಸಂಬಂಧ ಹೇಗಿತ್ತು? ಎಂಬುದರ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಈ ಹಿಂದೆ ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಜಾ, ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಸಿನಿಮಾ ನಿರ್ದೇಶಕರಾದ ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ, ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ನಟ ಸಲ್ಮಾನ್ ಖಾನ್ ಸೇರಿದಂತೆ ಎಂಟು ಜನರ ವಿರುದ್ಧ ಐಪಿಸಿ ಸೆಕ್ಸನ್ 306, 109, 504 ಮತ್ತು 506 ಅಡಿಯಲ್ಲಿ ಕೇಸ್ ದಾಖಲಿಸಿದ್ದರು.

ರಿಯಾ ಚಕ್ರವರ್ತಿ:
ಕೆಲವು ದಿನಗಳಿಂದ ಸುಶಾಂತ್ ಸಿಂಗ್ ಹೆಸರು ನಟಿ ರಿಯಾ ಚಕ್ರವರ್ತಿಯೊಂದಿಗೆ ಕೇಳಿ ಬಂದಿತ್ತು. ಖಾಸಗಿ ಕಾರ್ಯಕ್ರಮಗಳು ಸೇರಿದಂತೆ ಹಲವೆಡೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳಲಾರಭಿಸಿದ್ದರು. ಸುಶಾಂತ್ ಮದುವೆ ಆಗ್ತಿದ್ದಾರೆ ಅಂತಾ ನ್ಯೂಸ್ ಹರಿದಾಡಿದ್ದುಂಟು. ಈಗತಾನೇ ಬಣ್ಣದ ಲೋಕಕ್ಕೆ ಕಾಲಿಟ್ಟಿರುವ ರಿಯಾ, ವೃತ್ತಿ ಜೀವನದಲ್ಲಿ ಸಾಧನೆ ಮಾಡಲು ಹೆಚ್ಚು ಆಸಕ್ತಿ ತೋರಿದ್ದರು. ಹಾಗಾಗಿ ಮದುವೆಗೆ ಹಿಂದೇಟು ಹಾಕಿದ್ದರಂತೆ.

Share This Article
Leave a Comment

Leave a Reply

Your email address will not be published. Required fields are marked *