ಸುಳ್ಯ ವೆಂಕಟರಮಣ ದೇವಸ್ಥಾನದಲ್ಲಿ ಸೇವಾಂಜಲಿ ಆಶ್ರಯಹಸ್ತ ಕಿಟ್ ವಿತರಣೆ

Public TV
1 Min Read

ಮಂಗಳೂರು: ಅರ್ಹ ಫಲಾನುಭವಿಗಳಿಗೆ ಅಗತ್ಯವಸ್ತುಗಳನ್ನು ಒಳಗೊಂಡ ಸೇವಾಂಜಲಿ-ಆಶ್ರಯಹಸ್ತ ಕಿಟ್ ಅನ್ನು ವಿತರಿಸಲಾಗುತ್ತಿದ್ದು, ಸುಳ್ಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸುಮಾರು 300 ಕಿಟ್ ಗಳನ್ನು ವಿತರಿಸಲಾಯಿತು. ಇದನ್ನೂ ಓದಿ: ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ನೇಣಿಗೆ ಶರಣು

ಸಮಾಜಸೇವಾ ಸಂಘಟನೆ ಆಶ್ರಯಹಸ್ತ ಟ್ರಸ್ಟ್ ಕೋವಿಡ್ ಲಾಕ್‍ಡೌನ್‍ನ ಅವಧಿಯಲ್ಲಿ ಬದುಕು ಸಾಗಿಸಲು ಹರಸಾಹಸ ಪಡುತ್ತಿರುವ ಕುಟುಂಬಗಳ ಸಹಾಯಕ್ಕೆ ಮುಂದೆ ಬಂದಿದೆ. ಸಮಾಜದ ಕಡುಬಡವರಿಗೆ ಸಹಾಯಹಸ್ತ ಚಾಚುವ ಸೇವೆಯನ್ನು ಕಳೆದ ಎರಡು ದಶಕಗಳಿಗಿಂತಲೂ ಮಾಡುತ್ತಾ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತ್ಯೋದಯ ಕಾರ್ಡ್ ಹೊಂದಿರುವ ಬಿಪಿಎಲ್ ರೇಖೆಗಿಂತಲೂ ಕೆಳಗಿರುವ 3,000 ಕಡುಬಡವರಿಗೆ ಕಿಟ್ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ. ಉತ್ತಮ ದರ್ಜೆಯ ಆಹಾರ ವಸ್ತುಗಳು, ದಿನನಿತ್ಯದ ಅಗತ್ಯ ವಸ್ತುಗಳನ್ನು ಹೊಂದಿರುವ ಕಿಟ್ ಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯದಲ್ಲಿ ಮಂಗಳೂರಿನ ಸಮಾಜಮುಖಿ ಸಂಘಟನೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಕೈಜೋಡಿಸಲಿದೆ.

ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಮೇಜರ್ ಎಸ್ ನಂಜುಂಡಯ್ಯ ಅವರು ಟ್ರಸ್ಟಿಗಳಾದ ದಿನೇಶ್ ಕೆ, ಆಶಾ ದಿನೇಶ್ ಅವರು ಜೊತೆ ಸೇರಿ ಆರಂಭಿಸಿರುವ ಆಶ್ರಯಹಸ್ತ ಟ್ರಸ್ಟ್ ಪ್ರಸ್ತುತ ಇವರ ಮಕ್ಕಳಾದ ದಿವ್ಯಾ ಹಾಗೂ ದೀಕ್ಷಾ ಅವರ ಸಮರ್ಥ ನೇತೃತ್ವದಲ್ಲಿ ಜನಸೇವಾ ಕಾರ್ಯ ಕೈಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *