ಸುಮಲತಾ ಅಭಿಮಾನಿಗಳಿಗೆ ಹೆಚ್‍ಡಿಕೆ ಅಭಿಮಾನಿಗಳ ತಿರುಗೇಟು

Public TV
2 Min Read

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಫೋಟೋದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೈ ಕಟ್ಟಿ ನಿಂತಿರೋದನ್ನು ಸಂಸದೆ ಸುಮಲತಾ ಮತ್ತು ಅಂಬಿ ಅಭಿಮಾನಿಗಳು ವಿವಿಧ ಬರಹಗಳನ್ನು ಬರೆದು ಶೇರ್ ಮಾಡಿಕೊಂಡಿದ್ದಾರೆ.

ಕುಮಾರಸ್ವಾಮಿ ಅವರು ಆತ್ಮೀಯತೆ, ವಿನಮ್ರತೆಯಿಂದ ಕೈಕಟ್ಟಿ ನಿಂತಿರುವುದು ಸಹಜ. ಕುಮಾರಣ್ಣ-ಅಂಬರೀಶಣ್ಣರ ಬಾಂಧವ್ಯ ಅನನ್ಯ ಮತ್ತು ಅಮರ. ಇದು ಆಂಗಿಕ ಭಾಷೆಯೇ ಹೊರತು ಕುಮಾರಣ್ಣ ಶರಣಾಗತಿಯಿಂದ ಕೈಕಟ್ಟಿ ನಿಂತವರಲ್ಲ. ಸಾಮಾಜಿಕ ತಾಣದ ವಿಕೃತ, ವಿಲಕ್ಷಣ, ಅತೃಪ್ತ ಮತ್ತು ಹತಾಶಾ ಆತ್ಮಗಳಿಗೆ ಶಾಂತಿ ಸಿಗುವಂತಾಗಲಿ ಎಂದು ಕುಮಾರಸ್ವಾಮಿ ಅಭಿಮಾನಿ ನವೀನ್ ಕಾಡನಕುಪ್ಪೆ ಆಕ್ರೋಶ ಹೊರ ಹಾಕಿದ್ದಾರೆ.

ಅಂಬರೀಷ್ ಎಂಬ ಆತ್ಮೀಯ ಗೆಳೆಯ ಹಾಗೂ ಚಿತ್ರರಂಗದ ಪ್ರಮುಖರೊಂದಿಗೆ ಆತ್ಮೀಯತೆ, ವಿನಯತೆ, ನಮ್ರತೆ ನಮ್ಮ ಕುಮಾರಣ್ಣನ ಸಂಸ್ಕಾರ. ಕೈಕಟ್ಟಿ ನಿಂತಿರುವುದನ್ನೇ ಶರಣಾಗತಿ ಎಂದು ಭಾವಿಸಿ ವಿಕೃತವಾಗಿ ಮುಖಪುಟಗಳಲ್ಲಿ ಕೂಗುಮಾರಿಗಳಂತೆ ಅರಚಿ-ಕಿರುಚುತ್ತಿರುವ ಮುಖಗೇಡಿಗಳೇ ಎಂದು ಕುಮಾರಸ್ವಾಮಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ತಿರುಗೇಟು ನೀಡುತ್ತಿದ್ದಾರೆ. ಇದನ್ನೂ ಓದಿ: ನಾನು ಕ್ಷಮೆ ಕೇಳೋದಿಲ್ಲ ಸುಮಲತಾ ಕುತಂತ್ರಿ: ಎಚ್‍ಡಿಕೆ

ಸುಮಲತಾ ಹೇಳಿಕೆ ಬೆನ್ನಲ್ಲೇ ಫೋಟೋ ವೈರಲ್:
ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಸುಮಲತಾ, ನಮ್ಮ ಪಕ್ಷ ನಿಮ್ಮಂತಹ ಸಾವಿರಾರೂ ಲೀಡರ್ ಗಳನ್ನು ತಯಾರು ಮಾಡಿದೆ ಅಂತ ಹೇಳುತ್ತಾರೆ. ನೀವು ಸಾವಿರಾರರು ಜನರನ್ನು ತಯಾರು ಮಾಡಿಸಿರಬಹುದು. ಆದ್ರೆ ನಿಮ್ಮ ಈ ರೀತಿಯ ನಡವಳಿಕೆ, ಮಾತುಗಳಿಂದಲೇ ಎಷ್ಟೋ ಒಳ್ಳೆಯ ಜನ ಬೇರೆ ಪಕ್ಷ ಸೇರಿಕೊಂಡಿದ್ದಾರೆ. ನಿಮ್ಮ ಮಾತುಗಳಿಂದಲೇ ಅವರೆಲ್ಲ ನಿಮ್ಮ ಪಕ್ಷ ತೊರೆದಿರೋದು. ನೀವು ತಯಾರು ಮಾಡಿರುವ ಸಾವಿರಾರರು ಜನ, ಅದಕ್ಕಿಂತ ದೊಡ್ಡವರು ಅಂಬರೀಶ್ ಅವರ ಮುಂದೆ ಕೈ ಕಟ್ಟಿ ನಮ್ಮ ಮನೆಯಲ್ಲಿ ನಿಂತಿರೋದನ್ನು ಹಲವು ವರ್ಷ ನೋಡಿದ್ದೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಅಂಬರೀಶ್ ಮುಂದೆ ಹೆಚ್‍ಡಿಕೆ ಕೈಕಟ್ಟಿ ನಿಂತ ಫೋಟೋ ವೈರಲ್

ಸುಮಲತಾ ಕ್ಷಮೆ ಕೇಳಲ್ಲ:
ನಾನು ಯಾಕೆ ಕ್ಷಮೆ ಕೇಳಲಿ. ನಾನು ಕ್ಷಮೆ ಕೇಳೊದಿಲ್ಲ. ನಾನು ಕ್ಷಮೆ ಕೇಳೋ ಪದ ಬಳಿಕೆ ಮಾಡಿಲ್ಲ. ಯಾವ ತರಹ ಪದ ಬಳಕೆ ಮಾಡಬೇಕಿತ್ತು ನಾನು. ನಾನು ಸಂಸ್ಕೃತಿ, ಕನ್ನಡ ಭಾಷೆ ತಿಳಿದುಕೊಂಡಿದ್ದೇನೆ. ಕ್ಷಮೆ ಕೇಳಬೇಕಾದ ಪದ ನಾನು ಬಳಕೆ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಸುಮಲತಾ Vs ಕುಮಾರಸ್ವಾಮಿ – ಮೈ ಶುಗರ್ ವಿವಾದ ಈಗ ಎದ್ದಿದ್ದು ಯಾಕೆ?

Share This Article
Leave a Comment

Leave a Reply

Your email address will not be published. Required fields are marked *