ಸುಮಲತಾಗೆ ಯಾರೂ ಇಲ್ಲ ಅಂದ್ಕೋಬೇಡಿ, ಜೂ. ರೆಬೆಲ್ ಸ್ಟಾರ್ ಇದ್ದಾನೆ: ರಾಕ್‍ಲೈನ್ ವೆಂಕಟೇಶ್

Public TV
4 Min Read

– ನನ್ನಂತಹ ಸಾವಿರಾರು ಜನ ಕೂಡ ಸಂಸದೆ ಜೊತೆಗಿದ್ದಾರೆ
– ರವೀಂದ್ರ ಶ್ರೀಕಂಠಯ್ಯ ವಿರುದ್ಧ ವಾಗ್ದಾಳಿ
– ಕುಮಾರಸ್ವಾಮಿ ಸಿನಿಮಾದಿಂದ ಪರಿಚಯ, ರಾಜಕೀಯದಿಂದಲ್ಲ

ಬೆಂಗಳೂರು: ಸುಮಲತಾಗೆ ಯಾರೂ ಇಲ್ಲ ಅಂದುಕೊಂಡಿದ್ದೀರಾ? ನನ್ನಂತ ಸಾವಿರಾರು ಜನ ಸುಮಲತಾ ಜೊತೆ ಇದ್ದಾರೆ. ಜೂನಿಯರ್ ರೆಬೆಲ್ ಸ್ಟಾರ್ ಇದ್ದಾನೆ ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಲಿ: ಹೆಚ್‍ಡಿಕೆಗೆ ರಾಕ್‍ಲೈನ್ ವಾರ್ನಿಂಗ್

ಮಂಡ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಕೆ.ಆರ್.ಎಸ್ ಜಲಾಶಯ ಕುರಿತು ಮಾತಿನ ಸಮರ ಇಂದು ಕೂಡ ಮುಂದುವರಿದಿದ್ದು, ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ರಾಕ್ ಲೈನ್ ಪ್ರತಿಕ್ರಿಯಿಸಿದರು. ಅಂಬರೀಶ್ ಮುಂದೆ ಕೈ ಕಟ್ಟಿ ಮಾತಾಡುತ್ತಿದ್ರು. ಅವತ್ತು ಅಂಬಿ ಮುಂದೆ 000.5 ವಾಲ್ಯೂಮ್‍ನಲ್ಲಿ ಅಂದು ಮಾತಾಡ್ತಿದ್ದರು. ಇವತ್ತು ಯಾವ್ ಟೋನ್‍ನಲ್ಲಿ ಮಾತಾಡ್ತಿದ್ದೀರಾ. ಇದೆಲ್ಲ ಬೇಡ. ಅಂಬರೀಶ್ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದರು ಅಂತ ಹೇಳುತ್ತಿರಾ? ನಿಮ್ಮ ವಕ್ತಾರರ ಕೈಯಲ್ಲಿ ಅಂಬರೀಶ್ ಬಗ್ಗೆ ಮಾತಾಡ್ತೀರಾ? ಅಂಬರೀಶ್ ಸ್ಮಾರಕ ವಿಚಾರ ಕೇಳೋಕೆ ಹೋದಾಗ ಎರಡೂವರೆ ಗಂಟೆ ಕುಮಾರಸ್ವಾಮಿ ಕಾಯಿಸಿದ್ದರು. ದೊಡ್ಡಣ್ಣನ ಕೊಟ್ಟ ಮನವಿ ಪತ್ರವನ್ನ ಮುಖದ ಮೇಲೆ ಬಿಸಾಕಿದ್ರಿ. ಇವನು ಏನ್ ಮಾಡಿದ್ದಾನೇ..ಯಾಕ್ರಿ ಸ್ಮಾರಕ ಮಾಡಬೇಕು ಇವನಿಗೆ ಅಂತ ಕುಮಾರಸ್ವಾಮಿ ಅವಮಾನ ಮಾಡಿದ್ರಿ. ಅಂಬರೀಶ್ ರಿಂದ ಏನೇನು ಲಾಭ ಪಡೆದಿದ್ದೀರಾ ನೆನಪು ಮಾಡಿಕೊಳ್ಳಿ. ಅಂಬರೀಶ್ ಸಾವಿನಲ್ಲಿ ಯಾಕೆ ರಾಜಕೀಯ ಮಾಡ್ತೀರಾ? ಅಂದು ನಿಖಿಲ್ ನಿಲ್ತಾರೆ ಅಂತ ನೀವು ಬಂದು ಕೇಳಿದ್ರೆ ಸುಮಲತಾ ಅವರೇ ನಿಂತು ನಿಖಿಲ್ ಪರ ಕೆಲಸ ಮಾಡೋರು. ಸುಮಲತಾಗೆ ಚುನಾವಣೆಗೆ ನಿಲ್ಲಲು ಇಷ್ಟ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಲತಾ ಅಡ್ಡ ಮಲಗಿಸಿದ್ರೆ ಅಂತ ಕುಮಾರಸ್ವಾಮಿ ಮಾತಾಡಿದ್ರು. ಅಮೇಲೆ ಕಾವಲು ಕಾಯಬೇಕು ಅಂದೆ ಅಂತ ಹೇಳಿದ್ರಿ. ಚುನಾವಣೆ ಸಮಯದಲ್ಲಿ ಫೈಸ್ಟಾರ್ ಹೋಟೇಲ್ ನಲ್ಲಿ ಕುಳಿತು ನೀವು ಏನ್ ಮಾಡಿದ್ರಿ ಎಲ್ಲರಿಗೂ ಗೊತ್ತು. ಸುಮಲತಾಗೆ ಯಾರೂ ಇಲ್ಲ ಅಂದುಕೊಂಡಿದ್ದೀರಾ? ನನ್ನಂತ ಸಾವಿರಾರು ಜನ ಸುಮಲತಾ ಜೊತೆ ಇದ್ದಾರೆ. ಜೂನಿಯರ್ ರೆಬೆಲ್ ಸ್ಟಾರ್ ಇದ್ದಾನೆ ಎಂದು ವಾರ್ನಿಂಗ್ ಮಾಡಿದ್ದಾರೆ.

ಅವನ ಹಣೆ ಬರಹದಲ್ಲಿ ಇದ್ದ ಹಾಗೆ ಆಗುತ್ತದೆ. ಅಂಬಿ ಅಭಿಮಾನಿಗಳು ಅವರ ಕುಟುಂಬ ಕಾಯುತ್ತಾರೆ. ಸುಮಲತಾ ಮಂಡ್ಯದ ಸೊಸೆಯಾಗಿ, ಮನೆ ಮಗಳಾಗಿ ಮಂಡ್ಯದ ಜನರಿಗಾಗಿ ಡ್ಯಾಮ್ ಬೇಕಾದ್ರು ಕಾಯುತ್ತಾರೆ. ಹೀಗೆ ಕುಮಾರಸ್ವಾಮಿ ಹಿಂದೆ ಇದ್ದವರು ಈಗ ಎಲ್ಲಿ ಇದ್ದಾರೆ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅಂಬರೀಶ್ ಬಗ್ಗೆ ಯಾರು ಮಾತಾಡಬೇಡಿ. ರವೀಂದ್ರ ಶ್ರೀಕಂಠಯ್ಯ ಅವರೆ ಬೇಡ. ನಾನು ಸ್ನೇಹಿತನಾಗಿ ಹೇಳುತ್ತಿದ್ದೇನೆ ಎಂದು ಎಚ್ಚರಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಮಾಡ್ತಿರೋರು ನೀವು. ಇದು ಸಾಬೀತಾದರೆ ಯಾರು ನಿಮ್ಮ ಜೊತೆ ಇರೊಲ್ಲ. ಇದು ನೆನಪು ಇರಲಿ. ಅಕ್ರಮ ಗಣಿಗಾರಿಕೆ ಜಾಗದಲ್ಲಿ ನಾನು ಹೋಗಿದ್ದೆ. ಅಲ್ಲಿ ಗಲಾಟೆ ಮಾಡಿಸ್ತೀರಾ. ರೋಡ್ ಕ್ಲೋಸ್ ಮಾಡಿಸ್ತೀರಾ. ಏನ್ ಸಾಧನೆ ಮಾಡ್ತಿದ್ದೀರಾ. ಮುಂದೆ ನಿಮ್ಮ ಮನೆ ಹೆಣ್ಣು ಬಗ್ಗೆ ಯಾರಾದ್ರು ಮಾತಾಡಿದ್ರೆ ನೀವು ಮುಂದೆ ಮಾತಾಡೋಕೆ ಆಗೊಲ್ಲ. ಶ್ರೀಕಂಠಯ್ಯ ನೀವು ಎಲ್ಲಿ ಇದ್ರಿ. ಎಸ್‍ಎಂ ಕೃಷ್ಣ ಮಾರ್ಗದರ್ಶನದಲ್ಲಿ ಬಂದವರು. ಅದನ್ನು ಮುಂದುವರಿಸಿ. ಅದನ್ನ ಬಿಟ್ಟು ನಟೋರಿಯಸ್, ಮೀರ್ ಸಾಧಿಕ್ ಅನ್ನೋದು ಯಾಕೆ? ಮುಂದೆ ಬರುವ ಚುನಾವಣೆಯಲ್ಲಿ ಜನ ಎಲ್ಲಾ ತೋರಿಸ್ತೀರಾ ಎಸ್‍ಎಂ ಕೃಷ್ಣ ಮಾರ್ಗದಲ್ಲಿ ಇದ್ದರೆ ನೀವು ಮಂತ್ರಿ ಆಗ್ತೀರಾ. ಇಲ್ಲ ಅಂದ್ರೆ ಶಾಸಕನು ಆಗೊಲ್ಲ. ಶಾಸಕ ಪುಟ್ಟರಾಜ್ ಕಾಂಗ್ರೆಸ್‍ಗೆ ಹೋಗ್ತಿದ್ದಾರೆ ಅಂತ ರವೀಂದ್ರ ಶ್ರೀಕಂಠಯ್ಯ ರನ್ನ ವಜ್ರಮುನಿ ತರಹ ಮಾತಾಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸುಮಲತಾ ಅಧಿಕೃತ ಕೆಲಸ ಮಧು ನೋಡ್ತಾರೆ. ದೆಹಲಿಗೆ ಹೋದಾಗ ನಾನು, ದೊಡ್ಡಣ್ಣ, ಮಧು ಯಾರಾದ್ರು ಹೋಗ್ತೀವಿ ಸುಮಲತಾ ಟ್ರ್ಯಾಪ್ ಮಾಡೋಕೆ ಯಾರ್ ಯಾರ್‍ನ್ನ ಕಳಿಸಿದ್ರು ಅಂತ ನಮಗೆ ಗೊತ್ತಿದೆ. ಒಂದು ಸಂಸ್ಥೆಯಿಂದ ಒಬ್ಬ ವ್ಯಕ್ತಿಯನ್ನ ಸುಮಲತಾ ಆಫೀಸ್‍ಗೆ ಕಳಿಸ್ತಾರೆ. ಸುಮಲತಾ ಟ್ರ್ಯಾಪ್ ಮಾಡೋಕೆ ಪ್ಲ್ಯಾನ್ ಮಾಡಿದ್ದರು. ಆದ್ರೆ ಸಂಸದರು ನಾವು ಮೀಟ್ ಆಗೊಲ್ಲ ಅಂದ್ರು. ನಂತರ ದೊಡ್ಡ ಸಂಸ್ಥೆ ಮಾತಾಡದೇ ಸರಿ ಹೋಗೊಲ್ಲ ಅಂತ ಮಧು ಮಾತಾಡಿದ್ರು. ಅವನು ಎಲ್ಲಾ ರೆಕಾರ್ಡ್ ಮಾಡುತ್ತಿದ್ದ. ಅವತ್ತು ನಾನು ವಿಡಿಯೋ, ಆಡಿಯೋ ಮಾಡಿದ್ದೇನೆ. ಇವರು ಯಾಕೆ ಆಡಿಯೋ ಬಿಡ್ತಿಲ್ಲ ಅಂದ್ರೆ ಕುಮಾರಸ್ವಾಮಿ ಹೆಸರು ಅದರಲ್ಲಿ ಇದೆ ಅದಕ್ಕೆ ಬಿಡ್ತಿಲ್ಲ ಎಂದು ತಿಳಿಸಿದರು.

ಅಕ್ರಮ ಗಣಿಗಾರಿಕೆ ಮೆಟೀರಿಯಲ್ ಬೇಡ ಅಂತ ನಾನೇ ಹೇಳಿದೆ. ಇದನ್ನ ಹೇಳೋಕೆ ಯಾಕೆ ಭಯ ಅವರಿಗೆ. ಇದು ಕುಮಾರಸ್ವಾಮಿ ಮತ್ತು ರವೀಂದ್ರ ಶ್ರೀಕಂಠಯ್ಯ ಮಾಡಿರೋ ಪ್ಲ್ಯಾನ್. ಕುಮಾರಸ್ವಾಮಿ ಕಡೆಯಿಂದ ಬಂದವರು ಅವರು. ನಾನ್ಯಾಕೆ ಬಿಡುಗಡೆ ಮಾಡಲಿ. ಅವರು ಏನ್ ಮಾಡ್ತಾರೋ ಮಾಡಲಿ. ನಾನು ಅದಕ್ಕೆ ಕೌಂಟರ್ ಕೊಡ್ತೀನಿ ಎಂದಿದ್ದಾರೆ.

ಕುಮಾರಸ್ವಾಮಿ ಅವರು ರಾಜಕೀಯದಿಂದ ನನಗೆ ಪರಿಚಯ ಅಲ್ಲ. ಸಿನಿಮಾದಿಂದ ಪರಿಚಯ. ಕುಮಾರಸ್ವಾಮಿ ಬೆಳೆದಿರೋದು ಸಂತೋಷ. ಚಿಕ್ಕ ಚಿತ್ರ ಮಂದಿರ ಇಟ್ಟುಕೊಂಡು ಬೆಳೆದಿದ್ದಾರೆ. ಅವರ ಚಾನಲ್ ಓಪನ್ ಮಾಡೋವಾಗ ಅವರ ಜೊತೆ ನಾನು ಇದ್ದೆ. ನಾನು ಯಾವುದೇ ಕೆಲಸಕ್ಕೆ ಅವ್ರಿಗೆ ಕೇಳಿಲ್ಲ. ರಾಜಕೀಯ ವಿಚಾರ ದಲ್ಲಿ ನಾನು ಏನು ಮಾತಾಡೊಲ್ಲ. ಅಂಬರೀಶ್ ಅಂದ್ರೆ ನಮಗೆ ಪ್ರಾಣ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *