ಚಾಮರಾಜನಗರ: ಪ್ರತಿಭಟನೆ ಮಾಡೋದು, ಹೋರಾಟ ಮಾಡೋದು ಎಲ್ಲರ ಹಕ್ಕು ಆದರೆ ಸಾಮಾನ್ಯ ಜನರಿಗೆ ತೊಂದರೆಯಾಗದಂತೆ, ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗದಂತೆ ಪ್ರತಿಭಟನೆ ನಡೆಸಲಿ ಎಂದು ಬಂದ್ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಚಾಮರಾಜನಗರ ದಲ್ಲಿ ಮಾತನಾಡಿದ ಅವರು, ಭೂಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಅಂಶಗಳನ್ನು ಸ್ವತಃ ಕಾಂಗ್ರೆಸ್ಸಿನ ಆರ್.ವಿ ದೇಶಪಾಂಡೆ ಅಂಶಗಳನ್ನು ಒಪ್ಪಿಕೊಂಡಿದ್ದಾರೆ. ಪ್ರೊ. ಎಂ.ಡಿ ನಂಜುಂಡಸ್ವಾಮಿಯವರ ಆಶಯವೂ ಸಹ ಅದೇ ಆಗಿತ್ತು ಎಂದರು.
ಸದನದಲ್ಲಿ ಸಚಿವ ಅಶೋಕ್ ಕೂಡ ಕಾಯ್ದೆ ತಿದ್ದುಪಡಿ ಬಗ್ಗೆ ವಿವರವಾಗಿ ಹೇಳಿದ್ದಾರೆ ಎಂದ ಅವರು ಕೊರೋನಾ ವೇಳೆ ದುರುಪಯೋಗ ಮಾಡಿಕೊಂಡು ತಿದ್ದುಪಡಿ ಮಾಡಲಾಗಿದೆ ಎಂಬ ಆರೋಪಗಳನ್ನು ನಿರಾಕರಿಸಿದರು. 2022ರ ಒಳಗೆ ರೈತರ ಪ್ರಗತಿ ಹಾಗೂ ಅವರ ಆದಾಯ ದ್ವಿಗುಣಗೊಳಿಸುವುದು ಮಸೂದೆ ತಿದ್ದುಪಡಿಯ ಉದ್ದೇಶ ಆಗಿದೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯರಿಂದ ಅವಿಶ್ವಾಸ ನಿರ್ಣಯ ವಿಚಾರದ ಪ್ರತಿಕ್ರಿಯಿಸಿದ ಸಚಿವರು, ಅವಿಶ್ವಾಸ ನಿರ್ಣಯ ಬಿದ್ದು ಹೋಗಿದೆ. ಸರ್ಕಾರದ ಮೇಲೆ ವಿಶ್ವಾಸ ಹೆಚ್ಚಾಗಿದೆ ಎಂದರು.