ಸಿಎಂ ಕೇಜ್ರಿವಾಲ್ 21ನೇ ಶತಮಾನದ ತುಘ್ಲಕ್: ಗೌತಮ್ ಗಂಭೀರ್

Public TV
1 Min Read

ನವದೆಹಲಿ: ಬಿಜೆಪಿ ಸಂಸದ ಗೌತಮ್ ಗಂಭೀರ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು 21ನೇ ಶತಮಾನದ ತುಘ್ಲಕ್ ರಾಜ ಎಂದು ಕರೆದಿದ್ದಾರೆ.

ದೆಹಲಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳ ವರದಿ ಆಗಿವೆ. ಕೆಲ ದಿನಗಳಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಆಪ್ ಸರ್ಕಾರ ಮತ್ತು ಬಿಜೆಪಿ ಇದರ ಕ್ರೆಡಿಟ್ ತೆಗೆದುಕೊಳ್ಳಲು ಟ್ವಿಟ್ಟರ್ ನಲ್ಲಿ ಯುದ್ಧಕ್ಕೆ ಇಳಿದಿವೆ. ನಿನ್ನೆ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ದೆಹಲಿಯ ಆಪ್ ಸರ್ಕಾರ ಜಾಹಿರಾತು ಮತ್ತು ಹ್ಯಾಶ್ ಟ್ಯಾಗ್ ಗಾಗಿ ಮಾಡಿದ ಖರ್ಚನ್ನು ಕೆಲಸದಲ್ಲಿ ತೊಡಗಿಸಬೇಕಿತ್ತು. ಈ ಟ್ವೀಟ್ ನನ್ನು ಸಿಎಂ ಕೇಜ್ರಿವಾಲ್‍ಗೆ ಟ್ಯಾಗ್ ಮಾಡಿ 21ನೇ ಶತಮಾನದ ತುಘ್ಲಕ್ ಎಂದಿದ್ದಾರೆ. ಮಾಧ್ಯಮಗಳ ಮುಂದೆ ಯಾವುದೇ ಕ್ರೆಡಿಟ್ (ಹೆಸರು) ಬೇಡ ಅಂತಾ ಹೇಳ್ತಾರೆ. ಟ್ವಿಟ್ಟರ್ ನಲ್ಲಿ ಎಲ್ಲವೂ ನಾನೇ ಮಾಡಿದ್ದು ಅಂತಾರೆ ಎಂದು ಟೀಕಿಸಿದ್ದಾರೆ.

ಮಗದೊಂದು ಟ್ವೀಟ್ ನಲ್ಲಿ ಚುನಾವಣೆಗೂ ಮುನ್ನ ಉಚಿತ ವಿದ್ಯುತ್ ಮತ್ತು ಶುದ್ಧ ನೀರು ಎಂದು ಹೇಳಿದ್ದರು. ಇದೀಗ ತುಘ್ಲಕ್ ರೀತಿಯಲ್ಲಿ ಮನಸ್ಸಿಗೆ ಬಂದಂತೆ ಆಡಳಿಯ ನಡೆಸುತ್ತಿದ್ದಾರೆ ಎಂದು ಗಂಭೀರ್ ಆರೋಪಿಸಿದ್ದರು.

ಎರಡು ದಿನಗಳ ಹಿಂದೆ ಸಿಎಂ ಕೇಜ್ರಿವಾಲ್ ದೆಹಲಿಯ ಎಲ್ಲ ಸಂಸದರು ಮತ್ತು ಆಪ್ ಪಕ್ಷದ ರಾಜ್ಯಸಭಾ ಸದಸ್ಯರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದರು. ಈ ವೇಳೆ ಕಾಂತಿನಗರದಲ್ಲಿ ಕೂಡಲೇ ಐಸೋಲೇಶನ್ ಕೇಂದ್ರ ಆರಂಭಿಸಬೇಕು ಎಂದು ಗಂಭೀರ್ ಸರ್ಕಾರವನ್ನು ಒತ್ತಾಯಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *