ಸಿಂಧೂರದ ಮಹತ್ವವೇನು..? – ಮದುವೆ ವೇಳೆ ವಧು ಧರಿಸಬಹುದಾದ ಡಿಸೈನ್‍ಗಳು ಇಲ್ಲಿವೆ

Public TV
2 Min Read

ಸಿಂಧೂರ ನಮ್ಮ ದೇಹದ ಏಳು ಚಕ್ರಗಳಲ್ಲಿ ಒಂದಾದ ಅಗ್ಯ ಚಕ್ರವಾಗಿದೆ. ಸಿಂಧೂರ ನಮ್ಮ ಮನಸ್ಸಿನ ಜೊತೆಗೆ ಹೆಚ್ಚಿನ ಸಂಪರ್ಕ ಹೊಂದಿದ್ದು, ಬುದ್ಧಿ ಮತ್ತು ಜ್ಞಾನವನ್ನು ಹೆಚ್ಚಾಗಿ ಕೇಂದ್ರೀಕರಿಸುತ್ತದೆ. ಸಿಂಧೂರಕ್ಕೆ ಅದರದ್ದೇ ಆದ ಶಕ್ತಿ ಮತ್ತು ಮಹತ್ವವಿದೆ. ಸುಳ್ಳು ಮತ್ತು ಪಕ್ಷಪಾತಕ್ಕಿಂತ ಹೆಚ್ಚಾಗಿ ಸತ್ಯಾಧಾರಿತ ವಿಚಾರಗಳನ್ನು ನೋಡಲು ಸಹಾಯಕವಾಗಿದೆ. ವಧುವಿನ ಹಣೆಯ ಮೇಲೆ ಕೆಂಪು ಬಣ್ಣದ ಸಿಂಧೂರ ಭಾರತೀಯ ನಾರಿಯ ಸಮೃದ್ಧಿ, ಪ್ರೀತಿ ಮತ್ತು ಸಹಾನುಭೂತಿಯನ್ನು ಸೂಚಿಸುತ್ತದೆ.

ಸಿಂಧೂರವನ್ನು ನೀವು ಪ್ರತಿದಿನ ಇಟ್ಟುಕೊಳ್ಳಬೇಕೋ ಅಥವಾ ಬೇಡವೋ ಎಂಬುವುದು ನಿಮ್ಮ ವೈಯಕ್ತಿಕ ಆಯ್ಕೆ. ಆದರೆ ವಧುವಿಗೆ ಕಂಪ್ಲೀಟ್ ಲುಕ್ ನೀಡುವುದರ ಜೊತೆಗೆ ಸುಂದರವಾಗಿ ಕಾಣಿಸುವಂತೆ ಮಾಡುವುದು ಮಾತ್ರ ಸಿಂಧೂರ. ಸಿಂಧೂರ ಕುರಿತಂತೆ ಕೆಲವೊಂದು ಡಿಸೈನ್‍ಗಳ ಮಾಹಿತಿ ಈ ಕೆಳಗಿನಂತಿದೆ.

ಬೋಲ್ಡ್ ಮತ್ತು ಬ್ಯೂಟಿಫುಲ್ ಸಿಂಧೂರ:
ಮದುವೆಯ ದಿನ ವಧುವಿಗೆ ಸಾಂಪ್ರದಾಯಿಕ ಲುಕ್ ನೀಡುವ ಸಿಂಧೂರಗಳಲ್ಲಿ ಇದು ಕೂಡ ಒಂದು. ಈ ಸಿಂಧೂರ ವಧುವಿಗೆ ಸುಂದರವಾದ ಲುಕ್ ನೀಡುತ್ತದೆ. ನಿಮ್ಮ ಹಣೆ ಚಿಕ್ಕದಾಗಿದ್ದರೆ ಚಿಂತಿಸಬೇಡಿ, ವಾಸ್ತವವಾಗಿ ಈ ಸಿಂಧೂರ ನಿಮ್ಮ ಹಣೆಯ ಮೇಲೆ ದೊಡ್ಡದಾಗಿ ಮತ್ತು ಸರಿಯಾಗಿ ಕಾಣಿಸುವಂತೆ ಮಾಡುತ್ತದೆ ಮತ್ತು ನಿಮಗೆ ಗ್ರಾಂಡ್ ಲುಕ್ ನೀಡುತ್ತದೆ.

ಸಿಂಧೂರದ ಸಣ್ಣ ಡಿಸೈನ್:
ಅನೇಕ ವಧುಗಳು ಸಾಮಾನ್ಯವಾಗಿ ಮದುವೆಯ ಸಮಯದಲ್ಲಿ ಸಣ್ಣದಾಗಿರುವ ಸಿಂಧೂರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲಿಯೂ ಇಳಿಮುಖವಾಗಿ ಹಣೆಯನ್ನು ಹೊಂದಿರುವವರಿಗೆ ಮಾಂಗ್ ಟಿಕ್ಕಾ ಬಹಳ ಚೆನ್ನಾಗಿ ಸೂಟ್ ಆಗುತ್ತದೆ. ಇದು ನಿಮ್ಮ ಮುಖವನ್ನು ವಿಕಾರಗೊಳಿಸದೇ ಅಂದವನ್ನು ಹೆಚ್ಚಿಸುತ್ತದೆ. ಈ ಸಿಂಧೂರವನ್ನು ನೀವು ಯಾವುದೇ ಕಾರ್ಯಕ್ರಮಗಳಲ್ಲಿ ಕೂಡ ಧರಿಸಬಹುದು.

ಸ್ಟಡ್/ ಸ್ಟೋನ್ ಸಿಂಧೂರ:
ಸ್ಟಡ್ ಮತ್ತು ಸ್ಟೋನ್ ಸಿಂಧೂರಗಳ ಡಿಸೈನ್ ಗ್ಲಾಮರ್ ಲುಕ್ ನೀಡುತ್ತದೆ. ಸ್ಟೋನ್ ಸಿಂಧೂರಗಳು ವಿವಿಧ ಆಕಾರ ಮತ್ತು ಗಾತ್ರದಲ್ಲಿ ಸಿಗುತ್ತದೆ. ನಿಮ್ಮ ವಿಶೇಷ ದಿನಗಳಲ್ಲಿ ಈ ಸಿಂಧೂರವನ್ನು ಧರಿಸುವುದರಿಂದ ನಿಮಗೆ ಹೆಚ್ಚು ಸ್ಫೂರ್ತಿ ಮತ್ತು ಉತ್ಸಾಹ ತುಂಬುತ್ತದೆ.

ಸ್ಟೋನ್ ಆವೃತ್ತಿಯ ಸಿಂಧೂರ:
ಸ್ಟೋನ್ ಮೂಲಕ ಆವೃತ್ತಿಗೊಳಿಸಿರುವ ಅನೇಕ ಆಕಾರದಲ್ಲಿ ಸಿಂಧೂರಗಳಿದೆ. ಸಿಂಧೂರದ ಸುತ್ತ ವೃತ್ತಾಕಾರದಲ್ಲಿ ಸಣ್ಣ, ಸಣ್ಣ ಸ್ಟೋನ್‍ಗಳನ್ನು ಅಳವಡಿಸಲಾಗಿದ್ದು, ಸಿಂಧೂರ ಎದ್ದು ಕಾಣಿಸುವುದರ ಜೊತೆಗೆ ನಿಮಗೆ ಅದ್ಭುತ ಲುಕ್ ನೀಡುತ್ತದೆ.

ಮಹಾರಾಷ್ಟ್ರ ಸಿಂಧೂರ:
ಭಾರತದ ಪ್ರತಿಯೊಂದು ರಾಜ್ಯವು ತನ್ನದೇ ಆದ ಸಂಸ್ಕøತಿ ಮತ್ತು ಸಂಪ್ರದಾಯವನ್ನು ಹೊಂದಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ವಿವಾಹದ ಪದ್ಧತಿಗಳಿದೆ. ಹಲವಾರು ರಾಜ್ಯಗಳಲ್ಲಿ ಮಹಾರಾಷ್ಟ್ರ ಕೂಡ ಒಂದು. ಮಹಾರಾಷ್ಟ್ರದ ಕಡೆ ಮದುವೆಯ ವೇಳೆ ವಧುವಿಗೆ ಚಂದ್ರನ ಆಕಾರದ ಸಿಂಧೂರ(ಚಂದ್ರ ಕೋರ್ ಬಿಂದಿ)ವನ್ನು ಇಡಲಾಗುತ್ತದೆ. ಇದನ್ನು ವಧು ಮಾತ್ರವಲ್ಲದೇ ಮಹಾರಾಷ್ಟ್ರದಲ್ಲಿರುವ ಮಹಿಳೆಯರು ಸರ್ವೇ ಸಾಮಾನ್ಯವಾಗಿ ಪ್ರತಿನಿತ್ಯ ಇಟ್ಟುಕೊಳ್ಳುತ್ತಾರೆ. ಇದನ್ನೂ ಓದಿ:ಬೆಳಗ್ಗೆ ಎದ್ದು ಬೆಚ್ಚಗಿನ ನೀರು ಕುಡಿಯಿರಿ- ಆರೋಗ್ಯ ಕಾಪಾಡಿಕೊಳ್ಳಿ

Share This Article
Leave a Comment

Leave a Reply

Your email address will not be published. Required fields are marked *