ಸಾವು, ನೋವುಗಳ ಮಧ್ಯೆ ಸಡಗರ ಎಷ್ಟು ಸಮಂಜಸ: ಪ್ರಜ್ವಲ್ ದೇವರಾಜ್

Public TV
1 Min Read

ಬೆಂಗಳೂರು: ಡೈನಾಮಿಕ್ ಪ್ರಿನ್ಸ್ ನಟ ಪ್ರಜ್ವಲ್ ದೇವರಾಜ್‍ರವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

ಪ್ರತಿ ವರ್ಷ ಜುಲೈ 4 ರಂದು ಸ್ನೇಹಿತರು ಹಾಗೂ ಅಭಿಮಾನಿಗಳೊಂದಿಗೆ ಬಹಳ ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಪ್ರಜ್ವಲ್ ದೇವರಾಜ್‍ರವರು ಈ ಬಾರಿ ಕೊರೊನಾದಿಂದಾಗಿ ತಮ್ಮ ಬರ್ತ್‍ಡೇ ಸೆಲೆಬ್ರೆಶನ್‍ಗೆ ಬ್ರೇಕ್ ಹಾಕಿದ್ದಾರೆ.

ಈ ವಿಚಾರವಾಗಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ, ಹಿಂದಿನ ವರ್ಷ ನನ್ನ ಹುಟ್ಟುಹಬ್ಬದ ದಿನ ನನ್ನ ಅಭಿಮಾನಿಗಳೆಲ್ಲರೂ ರಾಜ್ಯಾದ್ಯಂತ ಬಡ ಶಾಲಾ ಮಕ್ಕಳಿಗೆ ಪೆನ್ನು, ಪುಸ್ತಕಗಳನ್ನು ವಿತರಿಸಿದ್ದು ನನಗೆ ಸಂತಸ ತಂದಿದೆ. ಅದರಲ್ಲೂ ನೀವು ನೀಡಿದಂತಹ ಪೆನ್ನು ಪುಸ್ತಕ ಪರಿಕರಗಳನ್ನು ನಾನು ದತ್ತು ಪಡೆದ ಶಾಲಾ ಮಕ್ಕಳಿಗೆ ವಿತರಿಸಿದಾಗ ಆ ಮಕ್ಕಳು ಸಂತೋಷ ಪಟ್ಟಿದ್ದು, ಅವರ ಸಂತೋಷದಲ್ಲಿ ನಾನು ಭಾಗಿಯಾಗಿದ್ದು, ನಿಜವಾಗಿಯೂ ಸಂತಸ ವಿಷಯ.

ಈಗಿನ ಪರಿಸ್ಥಿತಿ ಹಿಂದಿನ ವರ್ಷದ ಪರಿಸ್ಥಿತಿಯಲ್ಲಿ ಇಷ್ಟೊಂದು ಸಾವು, ನೋವುಗಳ ಮಧ್ಯೆ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುಎಷ್ಟು ಸಮಂಜಸ? ಆದ್ದರಿಂದ ಈ ಪರಿಸ್ಥಿತಿಯಲ್ಲಿ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ಇದನ್ನೂ ಓದಿ:ದ್ವಿತ್ವ ಲುಕ್‍ನಲ್ಲಿ ಪವರ್ ಸ್ಟಾರ್ – ಫಸ್ಟ್ ಲುಕ್‍ನಲ್ಲಿ ಸಂಚಲನ ಸೃಷ್ಟಿಸಿದ ಪವನ್ ಕುಮಾರ್

ತಾವುಗಳು ನನ್ನ ಹುಟ್ಟು ಹಬ್ಬಕ್ಕೆ ಹಾರ, ಕೇಕ್, ಉಡುಗೊರೆಗಾಗಿ ಖರ್ಚು ಮಾಡುವ ಹಣವನ್ನು ಕೊರೊನಾದಿಂದ ಬಳಲುತ್ತಿರುವ ಜನರಿಗೆ ಸಹಾಯ ಹಸ್ತ ನೀಡಿದರೆ ಅದೇ ನನಗೆ ನೀವು ತೋರುವ ಪ್ರೀತಿಯ ಅಭಿಮಾನ ಆದ್ದರಿಂದ ದಯವಿಟ್ಟು ಅಭಿಮಾನಿಗಳು ಕೊರೊನಾ ಸಂತ್ರಸ್ಥರಿಗೆ ಸಹಾಯ ಹಸ್ತ ನೀಡುವ ಮೂಲಕ ನನ್ನಹುಟ್ಟು ಹಬ್ಬಕ್ಕೆ ಹರಸಿ ಹಾರೈಸಿ ಎಂದು ಮನವಿ ಮಾಡಿದ್ದಾರೆ.

 

View this post on Instagram

 

A post shared by Prajwal Devaraj (@prajwaldevaraj)

Share This Article
Leave a Comment

Leave a Reply

Your email address will not be published. Required fields are marked *