ಸಹೋದ್ಯೋಗಿಯ ಗರ್ಭಿಣಿ ಪತ್ನಿಗೆ ಸಹಾಯ- ಮಗುವಿಗೆ ಮಹಿಳೆಯ ಹೆಸರಿಟ್ಟ ದಂಪತಿ

Public TV
2 Min Read

ತಿರುವನಂತಪುರಂ: ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿದ್ದ ಸಹೋದ್ಯೋಗಿಯ ಪತ್ನಿಗೆ ಹೆರಿಗೆ ಸಮಯದಲ್ಲಿ ಸಹಾಯ ಮಾಡುವ ಮೂಲಕ ಮಹಿಳೆಯೊಬ್ಬಳು ಮಾನವೀಯತೆ ಮೆರೆದಿದ್ದಾರೆ. ಹೆರಿಗೆಯ ನಂತರ ಮಗುವಿಗೆ ಈಕೆಯ ಹೆಸರನ್ನು ಇಡುವ ಮೂಲಕ ಸಹೋದ್ಯೋಗಿ ಪತ್ನಿ ಕೃತಜ್ಞತೆ ಸಲ್ಲಿಸಿದ್ದಾಳೆ.

ಎಷ್ಟೋ ಜನ ಕೋವಿಡ್-19 ಇರುವ ವ್ಯಕ್ತಿಯನ್ನು ಹತ್ತಿರವು ಸೇರಿಸುವುದಕ್ಕೂ ಹೆದರಿಕೊಳ್ಳುತ್ತಾರೆ ಹಾಗೂ ಅವರಿಂದ ಸಾಮಾಜಿಕ ಅಂತರ ಕಾಯ್ದು ಕೊಳ್ಳುತ್ತಾರೆ. ಆದ್ರೆ ಸೋಫಿಯಾ ಎಂಬ ಮಹಿಳೆ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಸಹೋದ್ಯೋಗಿ ಪತ್ನಿಗೆ ಕೋವಿಡ್-19 ಇದೆ ಎಂದು ತಿಳಿದ ಮೇಲೂ ಕೂಡ ಆಕೆಗೆ ಹೆರಿಗೆಯಾಗುವ ತನಕ ಜೊತೆಯಲಿದ್ದು ಸಹಾಯ ಮಾಡಿದ್ದಾಳೆ.

ಪೋತ್ತರ್ ಕೋಯಿಕುನ್ನು ಸಮೀಪದ ವರಂದರಪಿಳ್ಳಿ ಮೂಲದ ಝುಲ್ಫಿಕರ್ ಅಲಿ ಮತ್ತು ಆತನ ಪತ್ನಿ ಸಫ್ನಾ ಅಯ್ಯಂತೋಲ್‍ನ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ.

ಪತಿ ಝುಲ್ಫಿಕರ್ ಅಲಿ, ಪತ್ನಿ ಸಪ್ನಾ ಸೇರಿದಂತೆ ಅವರ ನಾಲ್ಕು ಮಕ್ಕಳಿಗೆ ಕೊರೊನಾ ಪಾಸಿಟಿನ್ ಬಂದಿತು. ಸಫ್ನಾ ಕೋವಿಡ್ ಪಾಸಿಟಿವ್ ಬಂದಿದ್ದು, ಆಕೆ ಗರ್ಭಿಣಿಯಾಗಿದ್ದರಿಂದ ಸಪ್ನಾಳನ್ನು ವೈದ್ಯಕೀಯ ಕಾಲೇಜಿನ ಸಿಒವಿಐಡಿ ವಾರ್ಡ್‍ಗೆ ಸ್ಥಳಾಂತರಿಸಲಾಯಿತು. ಸಫ್ನಾಗೆ ಕೋವಿಡ್ ಪಾಸಿಟಿವ್ ಇದ್ದು ಜೊತೆಗೆ ಆಕೆಯ ಹೆರಿಗೆ ಸಮಯವು ಆಗಿತ್ತು. ಈ ವೇಳೆ ಸಫ್ನಾ ಕೊರೊನಾ ಇದ್ದಿದ್ದರಿಂದ ಆಕೆಯ ಸಹಾಯಕ್ಕೆ ಯಾವ ಸಂಬಂಧಿಕರು ಮುಂದಾಗಲಿಲ್ಲ.

ಅದೇ ಸಮಯಕ್ಕೆ ಅಡ್ವಾ ಸೋಫಿಯಾ ಸಫ್ನಾಳನ್ನು ತಾನು ನೋಡಿಕೊಳ್ಳುವುದಾಗಿ ಝುಲ್ಫಿಕರ್‍ಗೆ ತಿಳಿಸಿದಳು. ಸಫ್ನಾಳನ್ನು ಶಸ್ತ್ರ ಚಿಕಿತ್ಸೆಗೆ ಕರೆದೊಯ್ಯುವ ಮುನ್ನ ಆಸ್ಪತ್ರೆಗೆ ತಲುಪಿ ಸೋಫಿಯಾ ಕೋವಿಡ್ ಪಾಸಿಟಿವ್ ಮಹಿಳೆ ಸಫ್ನಾಳನ್ನು ನೋಡಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸುವ ಮೂಲಕ ಸೋಫಿಯಾ ಸಹಮತ ಪತ್ರವನ್ನು ಆಸ್ಪತ್ರೆಗೆ ನೀಡಿದರು. ಆಕೆಯನ್ನು ನೋಡಿಕೊಳ್ಳಲು ಸೋಫಿಯಾಗೆ ಮಾಸ್ಕ್ ಹೊರತುಪಡಿಸಿ ಬೇರೆ ಯಾವ ಹೆಚ್ಚುವರಿ ರಕ್ಷಣಾತ್ಮಕ ಸಾಧನಗಳನ್ನು ಉಪಯೋಗಿಸಲಿಲ್ಲ.

ಹೆರಿಗೆಯಾದ ಎರಡು ದಿನಗಳ ಬಳಿಕ ಸಪ್ನಾಗೆ ಕೋವಿಡ್ ನೆಗೆಟಿವ್ ಬಂದಿದೆ. ಸೋಫಿಯಾ ತಾಯಿ ಮತ್ತು ಮಗುವನ್ನು 5 ದಿನಗಳ ಕಾಲ ಜೊತೆಯಲ್ಲಿಯೇ ಇದ್ದು ನೋಡಿಕೊಂಡಿದ್ದಾಳೆ. ನಂತರ ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸಫ್ನಾ ಮತ್ತು ಮಗು ಸೋಂಕಿಗೆ ಒಳಗಾಗಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ ಇತ್ತೀಚೆಗಷ್ಟೇ ಸ್ಥಳೀಯ ಸಂಸ್ಥೆಯ ಚುನಾವಣೆ ಯುಡಿಎಫ್ ಅಭ್ಯರ್ಥಿಯಾಗಿ ಸೋಫಿಯಾ ಸ್ಪರ್ಧಿಸಿದ್ದರು. ಆದರೆ 5 ಮತಗಳಿಂದ ಸೋಲನ್ನು ಅನುಭವಿಸಿದರು.

ಸಪ್ನಾ ಆಸ್ಪತ್ರೆಗೆ ದಾಖಲಾದ ಪರವಟ್ಟಿ ಮೂಲದ ಫರ್ಹಾದ್ ಎಂಬ ಅಪರಿಚಿತ ಮಹಿಳೆಯೊಬ್ಬಳು ಸಹಾಯ ಮಾಡಿದ್ದಳು. ಹೀಗೆ ಸಂಕಷ್ಟದ ಸಮಯದಲ್ಲಿ ತಮಗೆ ಸಹಾಯ ಮಾಡಿದ ಈ ಇಬ್ಬರು ಮಹಿಳೆಯರ ಹೆಸರನ್ನು ಒಗ್ಗೂಡಿಸಿ ಸಫ್ನಾ ಮತ್ತು ಝುಲ್ಫಿಕರ್ ಯಾವುದೇ ಗೊಂದಲಗಳಿಲ್ಲದೆ ಮಗುವಿಗೆ ‘ಸೋಫಿಯಾ ಫರ್ಹಾದ್’ ಎಂದು ಹೆಸರಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *