ಸಹಾಯ ಮಾಡುವಂತೆ ಮನವಿ- ಮೂವರು ಅನಾಥ ಮಕ್ಕಳ ದತ್ತು ಪಡೆದ ಸೋನು ಸೂದ್

Public TV
2 Min Read

– ಮನವಿ ಮಾಡಿದ 15 ನಿಮಿಷದಲ್ಲಿ ನಟ ಸ್ಪಂದನೆ

ಮುಂಬೈ: ಬಾಲಿವುಡ್ ನಟ ಮತ್ತು ನಿರ್ಮಾಪಕ ಸೋನು ಸೂದ್ ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಮಾನವೀಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸೋನ್ ಸೂದ್ ತಾರೆಯಾಗಿ ಮಿಂಚುತ್ತಿದ್ದು, ಎಲ್ಲರೂ ಮೆಚ್ಚಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ನಟ ಮೂವರು ಮಕ್ಕಳನ್ನು ದತ್ತು ಪಡೆದುಕೊಳ್ಳುವ ಮೂಲಕ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ: ಕೆಲಸ ಕಳ್ಕೊಂಡು ತರಕಾರಿ ಮಾರಾಟ ಮಾಡ್ತಿದ್ದ ಟೆಕ್ಕಿಗೆ ಸೋನು ಸೂದ್ ಸಹಾಯ

ಇತ್ತೀಚೆಗೆ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದ ಹೈದರಾಬಾದ್ ಟೆಕ್ಕಿ ಉದ್ಯೋಗ ಕೊಡಿಸುವ ಮೂಲಕ ಸಹಾಯ ಮಾಡಿದ್ದರು. ಈಗ ತೆಲಂಗಾಣದ ಭುವನಗಿರಿ ಜಿಲ್ಲೆಯ ಮೂವರು ಅನಾಥ ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಮತ್ತೊಂದು ಮಹತ್ತರ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ಮನ ಗೆದ್ದ ಸೋನು ಸೂದ್ – ಐಸಿಯುನಲ್ಲಿರುವ ನಟನಿಗೆ ಸಹಾಯ

ಪತ್ರಕರ್ತ ರಾಜೇಶ್ ಕರಣಂ ಅವರು ಟ್ವಿಟ್ಟರಿನಲ್ಲಿ ಸೋನು ಸೂದ್ ಅವರಿಗೆ ಟ್ಯಾಗ್ ಮಾಡುವ ಮೂಲಕ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಪೋಷಕರಿಲ್ಲದ ಮಕ್ಕಳು ತಮ್ಮ ಮನೆಯ ಕೆಲಸಗಳನ್ನು ತಾನೇ ಮಾಡುತ್ತಿದ್ದರು. ಅಲ್ಲದೇ ಹಿರಿಯ ಸಹೋದರ ತನ್ನ ಇಬ್ಬರು ಒಡಹುಟ್ಟಿದವರನ್ನು ನೋಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ವಿಡಿಯೋ ಶೇರ್ ಮಾಡಿ, “ಭುವನಗಿರಿ ಜಿಲ್ಲೆಯ ಯಾದಾದ್ರಿ ಗ್ರಾಮದ ಈ ಮೂವರು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಈ ಮೂವರು ಮಕ್ಕಳು ನೋಡಿಕೊಳ್ಳಲು ಹಿರಿಯರು ಯಾರು ಇಲ್ಲ. ಆದ್ದರಿಂದ ಇವರು ಅನಾಥರಾಗಿದ್ದಾರೆ. ಹೀಗಾಗಿ ಇವರಿಗೆ ದಯವಿಟ್ಟು ಸಹಾಯ ಮಾಡಿ” ಎಂದು ಸೋನು ಸೂದ್ ಬಳಿ ಮನವಿ ಮಾಡಿಕೊಂಡಿದ್ದರು.

ಮಕ್ಕಳ ತಂದೆ ಈಗಾಗಲೇ ಮೃತಪಟ್ಟಿದ್ದರು. ಆದರೆ ಇತ್ತೀಚೆಗೆ ತಾಯಿಯೂ ಕೂಡ ಸಾವನ್ನಪ್ಪಿದ್ದಾರೆ. ಪತ್ರಕರ್ತ ಟ್ವೀಟ್ ಮಾಡಿದ ಸುಮಾರು 15 ನಿಮಿಷದೊಳಗೆ ಪ್ರತಿಕ್ರಿಯಿಸಿದ ಸೋನು ಸೂದ್, “ಅವರು ಇನ್ನು ಮುಂದೆ ಅನಾಥರಲ್ಲ. ಅವರು ನನ್ನ ಜವಾಬ್ದಾರಿಯಾಗುತ್ತಾರೆ” ಎಂದು ಭರವಸೆ ನೀಡಿದ್ದಾರೆ.

ಕೊಟ್ಟ ಮಾತಿನಿಂತೆ ಸೋನು ಸೂದ್ ತಮ್ಮ ಅಧಿಕಾರಿಗಳನ್ನು ಕಳುಹಿಸಿ ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಟ್ವಿಟ್ಟರಿನಲ್ಲಿ ನೆಟ್ಟಿಗರು ಸೋನ್ ಸೂದ್ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *