ಮುಂಬೈ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿ ಜಯರವರ ಚಿಕಿತ್ಸೆಗಾಗಿ ನೆರವು ನೀಡಿದ ನಟ ಸಲ್ಮಾನ್ ಖಾನ್ ಹಾಗೂ ಅವರ ಸಹೋದರ ಸೊಹೈಲ್ ಖಾನ್ ಅವರಿಗೆ ನಟಿ ರಾಖಿ ಸಾವಂತ್ ಮಂಡಿಯೂರಿ ಧನ್ಯವಾದ ಸಲ್ಲಿಸಿದ್ದಾರೆ.
ನಟಿ ರಾಖಿ ಸಾವಂತ್ ರವರ ತಾಯಿ ಜಯರವರಿಗೆ ನಿನ್ನೆ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ನಡೆದಿದೆ. ಈ ಕುರಿತಂತೆ ರಾಖಿ ಸಾವಂತ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕೆಲವೊಂದಷ್ಟು ಫೋಟೋವನ್ನು ಹಂಚಿಕೊಂಡಿದ್ದರು. ಅಲ್ಲದೇ ತಮ್ಮ ತಾಯಿಯ ಶಸ್ತ್ರ ಚಿಕಿತ್ಸೆಗೆ ನೆರವು ನೀಡಿದ ನಟ ಸಲ್ಮಾನ್ ಖಾನ್ ಹಾಗೂ ಅವರ ಸಹೋದರ ಸೊಹೈಲ್ ಖಾನ್‍ರವರಿಗೆ ವೀಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾರೆ.
View this post on Instagram
‘ಸಲ್ಮಾನ್ ಖಾನ್‍ರವರು ನನ್ನ ತಾಯಿಯನ್ನು ಉಳಿಸಿದ್ದಾರೆ. ನನಗೆ ನನ್ನ ಜೀವನದಲ್ಲಿ ನನ್ನ ತಾಯಿ ಬಿಟ್ಟರೆ ಏನು ಬೇಡ. ನನಗೆ ನನ್ನ ತಾಯಿ ಬೇಕು. ನನ್ನ ತಾಯಿಗೆ ಅವರು ಹೊಸ ಜೀವನ ನೀಡಿದರು ಎಂದು ಅಳುತ್ತಾ ಮಂಡಿಯೂರಿ ಕೆಳಗೆ ನಮಸ್ಕರಿಸಿ ಧನ್ಯವಾದ ಹೇಳಿದ್ದಾರೆ.
ನನ್ನ ಬಳಿ ಹಣವಿಲ್ಲದೇ ಇದ್ದಾಗ ಸಲ್ಮಾನ್ ಖಾನ್‍ರವರು ಭಾರತದ ಅತೀ ದೊಡ್ಡ ಕ್ಯಾನ್ಸರ್ ತಜ್ಞರಾದ ಸಂದೇಶ್ ಶರ್ಮಾರನ್ನು ತನ್ನ ತಾಯಿಗೆ ಶಸ್ತ್ರ ಚಿಕಿತ್ಸೆ ನೀಡಲು ಕಳುಹಿಸಿಕೊಟ್ಟರು. ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಇಡೀ ಜೀವನವನ್ನು ಅವರಿಗಾಗಿ ನಾನು ಮುಡಿಪಾಗಿಡುತ್ತೇನೆ. ಹೇ ಪರಮೇಶ್ವರ ನಾನು ಮಾಡಿದ ಪುಣ್ಯ ಹಾಗೂ ನನಗೆ ದೊರೆತ ಪ್ರೀತಿ ಎಲ್ಲವೂ ಸಲ್ಮಾನ್ ಖಾನ್ ಹಾಗೂ ಅವರ ಸಹೋದರ ಸೊಹೈಲ್ ಖಾನ್‍ರವರಿಗೆ ನೀಡಿ ಅವರು ನಮ್ಮ ತಾಯಿಯನ್ನು ಉಳಿಸಿದ್ದಾರೆ ಎಂದು ಹೇಳಿದ್ದಾರೆ.
View this post on Instagram