ಸಲಿಂಗ ಕಾಮ ಮುಚ್ಚಿಡಲು ವಿವಾಹವಾದ- ಯಾರಿಗೂ ಹೇಳದಂತೆ ಪತ್ನಿಗೆ ಕೊಲೆ ಬೆದರಿಕೆ

Public TV
2 Min Read

– ನಿತ್ಯ ಮನೆಗೆ ಪುರುಷರನ್ನು ಕರೆಸಿಕೊಳ್ಳುತ್ತಿದ್ದ
– ಪತಿಯನ್ನು ಆಕರ್ಶಿಸಲು ಎಷ್ಟೇ ಪ್ರಯತ್ನಿಸಿದರೂ ಆಗಿಲ್ಲ ಎಂದ ಮಹಿಳೆ

ಗಾಂಧಿನಗರ: ಕುತೂಹಲಕಾರಿ ಘಟನೆಯೊಂದರಲ್ಲಿ ವ್ಯಕ್ತಿ ತಾನು ಸಲಿಂಗ ಕಾಮಿ ಎಂಬುದನ್ನು ಮರೆಮಾಚಲು ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದು, ನಂತರ ಈ ವಿಷಯವನ್ನು ಯಾರಿಗಾದರು ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮಹಿಳೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಗುಜರಾತ್‍ನ ಗಾಂಧಿನಗರ ನಿವಾಸಿಯಾಗಿರುವ 32 ವರ್ಷದ ಮಹಿಳೆ ತನ್ನ ಪತಿ ಲೈಂಗಿಕತೆ ವಿಚಾರವನ್ನು ಮುಚ್ಚಿಟ್ಟಿದ್ದಾನೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ. ಸಲಿಂಗ ಕಾಮದ ವಿಚಾರವನ್ನು ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಗಾಂಧಿನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆ ಅಹ್ಮದಾಬಾದ್‍ನ ಸಂಸ್ಥೆಯೊಂದರಲ್ಲಿ ಗ್ರಂಥಪಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗಾಂಧಿನಗರದ ನಿವಾಸಿಯಾಗಿದ್ದಾರೆ. ವ್ಯಕ್ತಿಯನ್ನು ಪ್ರೀತಿಸಿ 2011ರಲ್ಲಿ ವಿವಾಹವಾಗಿದ್ದಾರೆ. ಆರೋಪಿ ಸಹ ಅಹ್ಮದಾಬಾದ್‍ನಲ್ಲಿ ಗ್ರಂಥಪಾಲಕನಾಗಿ ಕೆಲಸ ಮಾಡುತ್ತಿದ್ದು, ಗಾಂಧಿನಗರದ ಸೆಕ್ಟರ್ 3ರಲ್ಲಿ ವಾಸಿಸುತ್ತಿದ್ದಾನೆ.

ಒಂದು ವರ್ಷದ ವರೆಗೆ ಪತಿ ವರ್ತನೆ ಸರಿಯಾಗಿಯೇ ಇತ್ತು. ನಂತರ ಅವರ ಲೈಂಗಿಕ ವಿಚಾರದ ಕುರಿತು ನನಗೆ ಅನುಮಾನ ಬಂತು. ಈ ವೇಳೆ ಅವನ ಮೊಬೈಲ್ ಚಾಟ್ ಪರಿಶೀಲಿಸಿದಾಗ ಹಲವು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವ ಕುರಿತು ತಿಳಿಯಿತು ಎಂದು ಪೊಲೀಸರು ದಾಖಲಿಸಿದ ಎಫ್‍ಐಆರ್‍ನಲ್ಲಿ ಉಲ್ಲೇಖವಾಗಿದೆ.

ಲೈಂಗಿಕತೆ ಕುರಿತು ಮಹಿಳೆ ಪ್ರಶ್ನಿಸಿದಾಗ, ಪುರುಷರ ಬಗ್ಗೆ ಮಾತ್ರ ಆಸಕ್ತಿ ಹೊಂದಿದ್ದೇನೆ. ವಿವಾಹವಾಗದಿದ್ದರೆ ಸಮಾಜ ಒಪ್ಪಿಕೊಳ್ಳುವುದಿಲ್ಲ ಎಂಬ ಉದ್ದೇಶದಿಂದ ಮಾತ್ರ ನಿನ್ನ ವಿವಾಹವಾಗಿದ್ದೇನೆ. ಅಲ್ಲದೆ ಕೆಲಸ ಮಾಡಿ ಸಂಪಾದಿಸುವ ಮಹಿಳೆಯೇ ನನಗೆ ಬೇಕಿತ್ತು ಎಂದು ವ್ಯಕ್ತಿ ಹೇಳಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಪತಿಯನ್ನು ಆಕರ್ಶಿಸಲು ನಾನು ಎಲ್ಲವನ್ನೂ ಮಾಡಿದ್ದೇನೆ. ಎಲ್ಲ ಪ್ರಯತ್ನಗಳೂ ವ್ಯರ್ಥವಾಗಿವೆ. ಸಂಸ್ಥೆಯಲ್ಲಿನ ಇತರ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಕ್ಕಾಗಿ ಪತಿಯನ್ನು ಕೆಲಸದಿಂದ ವಜಾಗೊಳಿಸಿದೆ. ಕೆಲಸ ಕಳೆದುಕೊಂಡ ಬಳಿಕ ವ್ಯಕ್ತಿ ಲೈಂಗಿಕ ಆಸೆ ತೀರಿಸಿಕೊಳ್ಳಲು ತನ್ನ ಸ್ನೇಹಿತರು ಹಾಗೂ ಇತರ ಪುರುಷರನ್ನು ಮನೆಗೇ ಕರೆಸಿಕೊಳ್ಳಲು ಆರಂಭಿಸಿದ. ಲೈಂಗಿಕ ಆದ್ಯತೆಯನ್ನು ಬದಲಾಯಿಸುವಂತೆ ಮಗನಿಗೆ ತಿಳಿಸಿ ಎಂದು ಮಾವನನ್ನು ಕೇಳಿದೆ, ಅವರೂ ಬೆಂಬಲ ನೀಡಲಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *