ಸರ್ಕಾರ ಎರಡೂವರೆ ಲಕ್ಷ ಕೊರೊನಾ ಸಾವು ಮುಚ್ಚಿಟ್ಟಿದೆ ಹೆಚ್.ಕೆ.ಪಾಟೀಲ್

Public TV
2 Min Read

ಬೆಂಗಳೂರು: ಕೊರೊನಾ ಮಹಾಮಾರಿ ಎದುರಿಸಲು ರಾಜ್ಯ, ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸುಳ್ಳು ಲೆಕ್ಕ ಮಾಹಿತಿ, ಮುಚ್ಚಿಡುವುದು, ಹೀಗೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ 33.033 ಜನ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ ಅಂತ ಪ್ರಕಟಿಸಿದ್ದಾರೆ. ಮೊದಲ ಅಲೆ 23,000 ಆಗಿದೆ. ಇದು ಸರಿಯಾದ ಅಂಕಿ ಅಂಶಗಳಲ್ಲ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಆರೋಪಿಸಿದ್ದಾರೆ.

ಒಟ್ಟು ನಮ್ಮ ರಾಜ್ಯದಲ್ಲಿ 3,27,985 ಸಾವು ಜರುಗಿವೆ ಎಂದು ರಾಜ್ಯ ಸರ್ಕಾರದ ಮಾಹಿತಿ ಇದೆ. ಜನವರಿಯಿಂದ ಜೂನ್ ವರೆಗೂ ಇದು ಎಲ್ಲೂ ಮ್ಯಾಚ್ ಆಗಲ್ಲ. ಇದೆಲ್ಲಾ ನ್ಯಾಚುರಲ್ ಡೆತ್ ಆಗಿದ್ಯಾ? ಹೀಗೆ ಆಗಲು ಸಾಧ್ಯನಾ? ಕಳೆದ ವರ್ಷದ ಡೆತ್, ಈ ವರ್ಷದ ಡೆತ್ ಆಡಿಟ್ ಸಿಗದ ಹಾಗೆ ಮಾಡಿದ್ದಾರೆ. ಒಟ್ಟು 87,082 ಸಾವಿರ ಸಾವು ಸಂಭವಿಸಿದೆ. ಎರಡೂವರೆ ಲಕ್ಷ ಸಾವನ್ನು ಮುಚ್ಚಿಟ್ಟಿದ್ದಾರೆ. ಇದು ಮನುಷ್ಯತ್ವ ಅಲ್ಲ, ಮಾನವೀಯತೆ ಅಲ್ಲ .ಜನರಿಗೆ ಮೋಸ ಮಾಡುತ್ತಿದ್ದೀರಿ. ಯಾವ ಕಾರಣಕ್ಕೆ ಸಾವನ್ನು ಮುಚ್ಚಿಡುತ್ತಿದ್ದೀರಿ. ಡೆತ್ ಆಡಿಟ್ ಪ್ರಕಟಿಸುವುದನ್ನೇ ಮುಚ್ಚಿಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ರಾಷ್ಟ್ರ, ರಾಜ್ಯದಲ್ಲಿ ನಾವು ಸಂಕಷ್ಟದಲ್ಲಿ ಇದ್ದೇವೆ. ಪ್ರತಿಯೊಬ್ಬ ಜವಾಬ್ದಾರಿ ವ್ಯಕ್ತಿ ಜಾಗರೂಕತೆಯಿಂದ ನಡೆದುಕೊಳ್ಳಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಆದ್ರೆ ಈ ಕೊರೊನ ಸಂಧರ್ಭದಲ್ಲಿ ಹಾಗೆ ಮಾಡುತ್ತಿಲ್ಲ. ಕೊರೊನದಿಂದ ಜನ ತತ್ತರಿಸಿ ಹೋಗಿವೆ, ಕುಟುಂಬದವರು ತಮ್ಮವರನ್ನು ಕಳೆದುಕೊಂಡಿದ್ದಾರೆ. ಅವರಿಗರ ಹೇಗೆ ಅನುಕೂಲ ವಾಗುವ ಹಾಗೆ ಮಾಡುತ್ತೀರಿ.

ಮನಮೋಹನ್ ಸಿಂಗ್ ಅವರು ನ್ಯಾಷನಲ್ ಡಿಸಾಸ್ಟರ್ ಮ್ಯಾನೆಜ್‍ಮೆಂಟ್ ಆಕ್ಟ್ ತಂದ್ರು. 12-13 ರಲ್ಲಿ ಹೊಸ ಕಾನೂನು ತಂದ್ರು. ಮರಣ ಹೊಂದಿದ್ದವರಿಗೆ ಪರಿಹಾರ ಕೊಡಬೇಕು ಅಂತ ಇತ್ತು. ಮೊದಲ ಅಲೆ ಬಂದಾಗ ನಾವು ಸರ್ಕಾರಕ್ಕೆ ಒತ್ತಾಯ ಮಾಡಿದ್ದೀವಿ. ಕೊರೊನಾ ನ್ಯಾಷನಲ್ ಡಿಸಾಸ್ಟರ್ ಅಂತ ಘೋಷಣೆ ಮಾಡಿ ಅಂತ. ನಾವು ಹೇಳಿದ ನಂತರ ಏಪ್ರಿಲ್ ಗೆ ಘೋಷಣೆ ಮಾಡಿದ್ರು. ಇವರ ಬೇಜವಾಬ್ದಾರಿತನ ತೋರಿಸುತ್ತೆ. ತಕ್ಷಣ ನಮ್ಮ ಅಪೇಕ್ಷೆ 5 ರಿಂದ 6 ಲಕ್ಷ ಪರಿಹಾರ ಘೋಷಿಸಿ. ಆದರೆ ನಿಮ್ಮದು ಇದೆಯಲ್ಲ ಅದು 4 ಲಕ್ಷ ಇದೆ ಅದನ್ನು ಕೊಡಿ. ಎನ್‍ಡಿಆರ್ ಎಫ್ ಅಥವಾ ಎಸ್‍ಡಿಆರ್‍ಎಫ್ ನಿಂದನಾದ್ರು ಕೊಡಿ. ಹೆಚ್ಚುವರಿ ನಾಲ್ಕು ಲಕ್ಷ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಒಟ್ಟು 5 ಲಕ್ಷ ಪರಿಹಾರ ಮೃತರಿಗೆ ಕೊಡಬೇಕು ಎಂದು ಆಗ್ರಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *