ಸರ್ಕಾರದ ಲಾಕ್‍ಡೌನ್ ಅಸ್ತ್ರ ಪ್ರಯೋಗದ ಇನ್‍ಸೈಡ್ ಸ್ಟೋರಿ

Public TV
2 Min Read

ಬೆಂಗಳೂರು/ಬೀದರ್: ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್‍ಡೌನ್ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಮತ್ತೆ ಲಾಕ್‍ಡೌನ್ ಮಾಡೋ ಪ್ರಶ್ನೆ ಇಲ್ಲ ಎಂದಿದ್ದಾರೆ.

ಬೀದರ್‌ನಲ್ಲಿ ರಾಜ್ಯದ ಜನತೆಗೆ ಯುಗಾದಿಯ ಶುಭಾಶಯ ಕೋರಿ ಮಾತನಾಡಿದ ಸಿಎಂ, ಸದ್ಯಕ್ಕೆ ಲಾಕ್‍ಡೌನ್ ಪ್ರಶ್ನೆ ಇಲ್ಲ. 18ಕ್ಕೆ ಸರ್ವ ಪಕ್ಷ ಸಭೆ ಕರೆದಿದ್ದೇನೆ. ಎಲ್ಲಾ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ನಂತರ ನಿರ್ಧಾರ ಮಾಡ್ತೇವೆ  ಎಂದು ಹೇಳಿದ್ದಾರೆ.

ಸಲಹಾ ಸಮಿತಿ ಕೂಡ ಲಾಕ್‍ಡೌನ್‍ಗೆ ಯಾವುದೇ ಸಲಹೆ ಕೊಟ್ಟಿಲ್ಲ. ಆದರೆ, ಮೇ 2ನೇ ವಾರದಲ್ಲಿ ಕೋವಿಡ್ ಸಂಖ್ಯೆ ಜಾಸ್ತಿಯಾಗುತ್ತೆ ಎಂದು ಹೇಳಿದೆ. ಹೀಗಾಗಿ, ರಾಜ್ಯದ ಜನ ಮಾಸ್ಕ್ ಧರಿಸ್ಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಅಂತ ಮನವಿ ಮಾಡಿದ್ದಾರೆ.

ಮೂಲಗಳ ಪ್ರಕಾರ ಲಾಕ್‍ಡೌನ್ ಜಾರಿಗೆ ತರದೇ ಹೋದರೂ ಬೆಂಗಳೂರಿನಲ್ಲಿ ವೀಕೆಂಡ್ ಲಾಕ್‍ಡೌನ್ ಮತ್ತು ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಟಫ್ ರೂಲ್ಸ್ ಜೊತೆಗೆ ಕೊರೋನಾ ಕರ್ಫ್ಯೂ ಜಾರಿಗೆ ಮುಖ್ಯಮಂತ್ರಿ ಒಲವು ತೋರಿದ್ದಾರೆ. ಏಪ್ರಿಲ್ 18ರ ಸರ್ವಪಕ್ಷಗಳ ಸಭೆ ಬಳಿಕ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಅಂತ ತಿಳಿದು ಬಂದಿದೆ.

ಸರ್ವಪಕ್ಷ ಸಭೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೊದಲೇ ಸಭೆ ಕರೆಯಬೇಕಿತ್ತು. ಇನ್ನೂ ಆಹ್ವಾನ ಬಂದಿಲ್ಲ. ಬಂದರೆ ಏನ್ ಹೇಳ್ಬೇಕೋ ಅದನ್ನ ಹೇಳ್ತೀನಿ. ಆದರೆ, ಇದು ಸರ್ಕಾರದ ಫೆಲ್ಯೂರ್. ಹೊರಗಡೆಯಿದ ಬಂದವರನ್ನ ಸರಿಯಾಗಿ ಟೆಸ್ಟ್ ಮಾಡಲಿಲ್ಲ. ಜಾತ್ರೆ, ಸಮಾರಂಭಗಳು, ಚುನಾವಣಾ ಪ್ರಚಾರಗಳಿಗೆ ನಿಯಂತ್ರಣ ಹಾಕ್ಬೇಕಿತ್ತು. ಬೆಡ್‍ಗಳು, ಐಸಿಯು ಕೊರತೆ ಆಗಬಾರದು. ಸರ್ಕಾರ ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ.

ಸರ್ಕಾರದ ಕ್ರಮ ಏನು?
ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೊಳಿಸದಿದ್ದರೂ ಟಫ್ ರೂಲ್ಸ್ ಅಂತೂ ಗ್ಯಾರಂಟಿಯಾಗಿದೆ. ಕಳೆದ ಜುಲೈನಲ್ಲಿ ಜಾರಿಗೆ ತಂದಂತೆ ಬೆಂಗಳೂರಿಗೆ ಸೀಮಿತ ಲಾಕ್‍ಡೌನ್ ಜಾರಿ ಮಾಡಬಹುದು. ಆರ್ಥಿಕ ಪರಿಸ್ಥಿತಿಯ ದೃಷ್ಟಿಯಿಂದ ವೀಕೆಂಡ್ ಲಾಕ್‍ಡೌನ್‍ಗೂ ಮುಂದಾಗಬಹುದು.

ಟಫ್ ರೂಲ್ಸ್ ಏನು?
ಬೆಂಗಳೂರಿನಲ್ಲಿ ವೀಕೆಂಡ್ ಲಾಕ್‍ಡೌನ್ ಸಾಧ್ಯತೆ.
ಮಾರುಕಟ್ಟೆ, ಜನಸಂದಣಿ ಜಾಗಗಳಲ್ಲಿ ಸೆಕ್ಷನ್ 144 ಜಾರಿ ಸಾಧ್ಯತೆ.
8 ನಗರಗಳ ಬದಲು 13 ಜಿಲ್ಲೆಗಳಿಗೆ ನೈಟ್ ಕರ್ಫ್ಯೂವಿಸ್ತರಣೆ ಸಾಧ್ಯತೆ.
ಹಾಫ್ ಲಾಕ್‍ಡೌನ್ ಹೇರಿ ಕೆಲವೊಂದಕ್ಕೆ ನಿರ್ಬಂಧ ವಿಧಿಸುವುದು.

Share This Article
Leave a Comment

Leave a Reply

Your email address will not be published. Required fields are marked *