ಸರ್ಕಾರಕ್ಕೆ ವಂಚನೆ ಮಾಡಿಲ್ಲ, ಕ್ಷಮೆ ಕೇಳದಿದ್ದರೆ, ಕಾನೂನು ಹೋರಾಟದ ಎಚ್ಚರಿಕೆ: ವಿಜಯ್ ನಿರಾಣಿ ಸ್ಪಷ್ಟನೆ

Public TV
5 Min Read

ಬೆಂಗಳೂರು: ಸರ್ಕಾರಕ್ಕೆ ಯಾವುದೇ ರೀತಿಯಲ್ಲೂ ವಂಚನೆಮಾಡದೆ, ಕಾನೂನಿನ ಪ್ರಕಾರವೇ ಕಾರ್ಮಿಕರಿಗೆ ಸಕಾಲಕ್ಕೆ ಸರಿಯಾಗಿ ತಿಂಗಳ ವೇತನ, ರೈತರಿಗೆ ಹಣ ಪಾವತಿ ಹಾಗೂ ಶಾಸನಬದ್ಧವಾಗಿ ಶುಲ್ಕವನ್ನು ಭರಿಸಿದ್ದೇವೆ ಎಂದು ನಿರಾಣಿ ಶುಗಸ್9 ನ ವ್ಯವಸ್ಥಾಪಕ ನಿದೇರ್ಶಕ ವಿಜಯ್ ನಿರಾಣಿ ಅವರು ತಮ್ಮ ಸಂಸ್ಥೆ ಮೇಲೆ ಕೇಳಿ ಬಂದಿರುವ ಆರೋಪವನ್ನುಸರಾಸಾಗಾಟಾಗೆ ನಿರಾಕಾರಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಡಾ.ಹೆಚ್.ಎನ್. ರವೀಂದ್ರ ಅವರು, ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ವಂಚನೆ ಮಾಡಲಾಗಿದೆ ಎಂದು ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಕ್ಕೆ ದೂರು ನೀಡಿರುವ ಸಂಬಂಧ ಸುಧೀರ್ಘ ಸೃಷ್ಟನೆ ನೀಡಿರುವ ವಿಜಯ್ ನಿರಾಣಿ ಅವರು, ಕಾನೂನು ಬದ್ಧವಾಗಿಯೇ ವ್ಯವಹಾರ ನಡೆಸುತ್ತಿದ್ದು ಎಲ್ಲಿಯೂ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ನಷ್ಟಕ್ಕೆ ಸಿಲುಕಿದ್ದ ಕಾರ್ಖಾನೆಯನ್ನು ಕೊವಿಡ್ ಸಂಕಷ್ಟದ ನಡುವೆಯೂ ಅತಿ ಕಡಿಮೆ ಅವಧಿಯಲ್ಲಿ ಮರುಪ್ರಾರಂಭಿಸಿದ್ದೇವೆ. ಸುಖಾಸುಮ್ಮನೆ ತಮ್ಮ ಹಾಗೂ ನಿರಾಣಿ ಶುಗಸ್9 ಮೇಲೆ ಸುಳ್ಳು ಆರೋಪ ಮಾಡಿರುವ ಡಾ.ರವೀಂದ್ರ ಕೂಡಲೇ ಕ್ಷೆಮೆಯಾಚಿಸಬೇಕು ಇಲ್ಲದಿದ್ದರೆ, ಕಾನೂನು ಕ್ರಮಜರುಗುಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಸಂಸ್ಥೆ ಇಲ್ಲವೇ ವ್ಯಕ್ತಿಯೊಬ್ಬರ ಬಗ್ಗೆ ಸತ್ಯಾಸತ್ಯತೆಯನ್ನು ಅರಿತು ಡಾ.ರವೀಂದ್ರ ಅವರು ಮಾತನಾಡಬೇಕು. ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು ಆಧಾರರಹಿತವಾಗಿ ಆರೋಪ ಮಾಡುವುದು ತಪ್ಪು. ಈ ಕೂಡಲೇ ತಮ್ಮ ಸಂಸ್ಥೆ ವಿರುದ್ಧ ನೀಡಿರುವ ಹೇಳಿಕೆಯನ್ನು ಸಾರ್ವಜನಿಕವಾಗಿ ಹಿಂಪಡೆದು ಕ್ಷಮಾಪಣೆ ಕೇಳಬೇಕು. ಇಲ್ಲವಾದಲ್ಲಿ ಅವರ ಮೇಲೆ ಮಾನನಷ್ಟ ಮೊಕದ್ದಮೆಹೂಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಸರ್ಕಾರಕ್ಕೆ ವಂಚನೆ ಮಾಡುವ ಪ್ರಮೇಯವೇ ಬರುವುದಿಲ್ಲ. ಏಕೆಂದರೆ ನಾವು ಕಾನೂನಿನ ಪ್ರಕಾರವೇ ಎಲ್ಲಾ ಪ್ರಕ್ರಿಯೆಗಳನ್ನು ನಡೆಸುತ್ತಿದ್ದೇವೆ. ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಕುರಿತು ಡಾ.ರವೀಂದ್ರ ಆರೋಪ ಮಾಡಿ ಎಸಿಬಿಗೆ ದೂರು ಸಲ್ಲಿಸಿದ್ದು, ಅವೆಲ್ಲವೂ ನಿರಾಧಾರವಾಗಿವೆ. ನಮ್ಮ ಏಳ್ಗೆಯನ್ನು ಸಹಿಸದೆ ನಿರಾಣಿ ಸಮೂಹದ ಮೇಲೆ ಕೇವಲ ಬಿಟ್ಟಿ ಪ್ರಚಾರ ಪಡೆಯುವದುರುದ್ದೇಶದಿಂದ ಅವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಗಿತಗೊಂಡಿದ್ದ ಕಾರ್ಖಾನೆಯನ್ನು ಗುತ್ತಿಗೆ ಪಡೆದು ಕೋವಿಡ್ ಲೆಕ್ಕಿಸದೇ ಅತ್ಯಂತ ಕಡಿಮೆ ಅವಧಿಯಲ್ಲಿ ಪುನರುಜ್ಜೀವನಗೊಳಿಸಿ ಕಾರ್ಖಾನೆ ಪ್ರಾರಂಭಿಸಿ, ಸ್ಥಳೀಯರಿಗೆ ಹೆಚ್ಚಿನ ಪ್ರಮಾಣದಲ್ಲಿಉದ್ಯೋಗಗಳನ್ನು ನೀಡಲಾಗಿದೆ. ಕಾರ್ಮಿಕರ ವೇತನ, ರೈತರ ಬಿಲ್ ಪಾವತಿ, ಗುತ್ತಿಗೆದಾರರು, ಕಬ್ಬು ಕಟಾವುದಾರರು, ವಾಹನ ಬಾಡಿಗೆದಾರರ ಹಣ ಎಲ್ಲವನ್ನು ಸಕಾಲಕ್ಕೆ ನಿಯಮಿತವಾಗಿ ನೀಡುತ್ತಾ ಬಂದಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಟ್ರಯಲ್ ಅವಧಿಯಲ್ಲಿ 8 ಕೋಟಿ ರೂ. ನಷ್ಟ ಅನುಭವಿಸಿದರೂ ಸಕಾಲಕ್ಕೆ ರೈತರ ಬಿಲ್ ಪಾವತಿ ಮಾಡಲಾಗಿದೆ. ಎಲ್ಲಾ ಶಾಸನಬದ್ಧ ಶುಲ್ಕಗಳನ್ನು ನಿಯಮಿತವಾಗಿಪಾವತಿಸಿದ್ದೇವೆ. ಕಾರ್ಖಾನೆ ವಿಸ್ತರಣೆಗೆ 5 ವರ್ಷಗಳ ಕಾಲಮಿತಿ ಇದ್ದರೂ, ಶಾಸನಬದ್ದವಾಗಿ ಹಸ್ತಾಂತರವಾಗದಿದ್ದರೂ ಕಾರ್ಖಾನೆ ಸುಸ್ಥಿರವಾಗಿ ನಡೆಯಬೇಕು ಎಂಬ ಸದುದ್ದೇಶದಿಂದ 50 ಕೋಟಿ ರೂ. ಹಣ ಹೂಡಿಕೆ ಮಾಡಿ ಕೇವಲ ಒಂದೇ ವರ್ಷದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ 3,500 ಟಿಸಿಡಿಯಿಂದ 5,000 ಟಿಸಿಡಿ ಮೇಲ್ದರ್ಜೆಗೆ ಏರಿಸಿದ್ದೇವೆ ವಿಜಯ್ ನಿರಾಣಿ ಅವರು ತಿಳಿಸಿದ್ದಾರೆ.

ಕಾರ್ಖಾನೆಯಲ್ಲಿದ್ದ ಎಲ್ಲ ನಿರಪಯುಕ್ತ (ಸ್ಕ್ರ್ಯಾಪ್) ವಸ್ತು ಮಾರಿದ್ದಕ್ಕೂ ಪ್ರತ್ಯೇಕವಾಗಿ ಲೆಕ್ಕ ಇಡಲಾಗಿದೆ. ಡಿಸ್ಟಿಲರಿ ಘಟಕಸ್ಥಾಪನೆಗೆ ಎಲ್ಲ ಯೋಜನೆ ಹಾಕಿಕೊಂಡಿದ್ದೂ ಸರ್ಕಾರ ಸ್ಥಳ ಗುರುತಿಸಿ ಕೊಟ್ಟರೇ ಶೀಘ್ರವೇ ಕೆಲಸ ಪ್ರಾರಂಭವಾಗುತ್ತದೆ. ಕಾರ್ಮಿಕ ಹಾಗೂ ರೈತ ಸ್ನೇಹಿಯಾಗಿ ಕಾರ್ಖಾನೆಯನ್ನು ನಡೆಸಬೇಕು ಎಂಬ ಒಂದೇ ಉದ್ದೇಶದಿಂದ ಇದನ್ನು ಮಾಡಲಾಗಿದೆ. ರೈತರು ಹಾಗೂ ಕಾರ್ಮಿಕರ ಬಗ್ಗೆ ತಮಗಿರುವ ಬದ್ಧತೆಯನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ದೀರ್ಘ ಕಾಲದ ಗುತ್ತಿಗೆಯ ಅವಧಿಯನ್ನು ಪ್ರಶ್ನೆ ಮಾಡುತ್ತಿರುವಅವರಿಗೆ ಅದೊಂದು ಸರ್ಕಾರದ ನಿರ್ಧಾರ ಎಂಬ ಕನಿಷ್ಠ ಜ್ಞಾನವೂ ರವೀಂದ್ರ ಅವರಿಗೆ ಇಲ್ಲ ತಿರುಗೇಟು ನೀಡಿದ್ದಾರೆ. ಗುತ್ತಿಗೆಯನ್ನು ಸಹಕಾರಿ ಸಕ್ಕರೆ ಕಾರ್ಖಾನೆಗಳ ಇತಿಹಾಸದಲ್ಲೆ ಅತಿಹೆಚ್ಚು ಬೆಲೆಗೆ ಬಿಡ್ ಮಾಡಿ ಸರ್ಕಾರದ ಕರಾರಿನಂತೆ ಲೀಜ್ಪಡೆಯಲಾಗಿದೆ. 1 ಕೋಟಿ ರೂ. ಇ.ಎಂ.ಡಿ ಹಾಗೂ ಭದ್ರತಾ ಠೇವಣಿ5 ಕೋಟಿ ರೂ.ಯನ್ನು ಈಗಾಗಲೇ ಸಂದಾಯ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ

ಮೊದಲ ಕಂತಿನ 20 ಕೋಟಿ ರೂ. ಹಣ ಕಟ್ಟಲು ಪ್ರಾರಂಭದ ದಿನದಿಂದಲೂ ಇಂದಿನವರೆಗೂ ನಾವು ಸಿದ್ಧರಿದ್ದೇವೆ. ಆದರೆ 20 ಕೋಟಿ ರೂ. ಹಣವನ್ನು ಸರ್ಕಾರಕ್ಕೆ ಕಟ್ಟುವ ಕುರಿತು ಮಾತನಾಡುವ ಮುನ್ನ ಗುತ್ತಿಗೆ ಕರಾರು ಪತ್ರವನ್ನು ಒಮ್ಮೆ ಸರಿಯಾಗಿ ಓದಿಕೊಂಡು ನಮ್ಮ ಮೇಲೆ ಆರೋಪ ಮಾಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಗುತ್ತಿಗೆ ಪಡೆಯುವ ಮೊದಲು ಕಾರ್ಖಾನೆಯ ಮೇಲೆ ವಿವಿಧ ಹಣಕಾಸು ಸಂಸ್ಥೆಗಳ ಋಣಭಾರವಿತ್ತು. ಈ ಋಣಭಾರವನ್ನು ಸರ್ಕಾರ ತೆರೆವುಗೊಳಿಸಿದ ಕೊಟ್ಟ ನಂತರ ಮೊದಲ ಕಂತಿನ ಹಣವನ್ನು ಪಾವತಿಸಬೇಕು ಎಂದು ನಿಬಂಧನೆಯಿದೆ. ಈ ಕುರಿತು ಸದರಿ ಋಣಭಾರಗಳನ್ನು ತೆರವುಗೊಳಿಸಿ ಕೊಡಲು ಸರ್ಕಾರಕ್ಕೆ ಪ್ರಾರಂಭದ ದಿನದಿಂದಲೂ ಅನೇಕ ಬಾರಿ ವಿನಂತಿ ಮಾಡಿಕೊಂಡಿದ್ದೇವೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ

ಸರ್ಕಾರ ಋಣಭಾರ ತೆರವುಗೊಳಿಸದಿದ್ದರಿಂದ ಹಣ ಕಟ್ಟಿಲ್ಲ. ಸರ್ಕಾರದ ಈ ವಿಳಂಬದಿಂದ ನಮಗೂ ತೊಂದರೆಯಾಗಿದೆ. ಬೇರೆ ಹಣಕಾಸು ಸಂಸ್ಥೆಗಳ ಋಣಭಾರ ಇರುವುದರಿಂದ ನಮಗೂ ಹಣಕಾಸಿನ ಸೌಲಭ್ಯ ದೊರೆಯುತ್ತಿಲ್ಲ ಹಾಗೂ ಶಾಸನಬದ್ದವಾಗಿಹಸ್ತಾಂತರ ಪ್ರಕ್ರಿಯೆ ಸಾಧ್ಯವಾಗುತ್ತಿಲ್ಲ ಎಂದು ಈಗಿರುವಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.

ಹೊಸ ಕಾರ್ಖಾನೆ ಸ್ಥಾಪಿಸುವವರಿಗೆ ನೊಂದಣಿ ಸಮಯದಲ್ಲಿ ಮುದ್ರಾಂಕ ಶುಲ್ಕ ವಿನಾಯತಿ ಸೌಲಭ್ಯವಿದೆ. ಆದರೆ ಸ್ಥಗಿತಗೊಂಡ ಕಾರ್ಖಾನೆ ಮರುಪ್ರಾರಂಭಿಸುವವರಿಗೆ ಈ ಸೌಲಭ್ಯ ದೊರೆಯುತ್ತಿಲ್ಲ. ಈ ಕುರಿತು ಆರ್ಥಿಕ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ. ಇಲಾಖೆಯ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ. ಮುದ್ರಾಂಕ ಶುಲ್ಕ ವಿನಾಯಿತಿ ಸಿಕ್ಕರೆ 405 ಕೋಟಿ ಒಟ್ಟು ಮೊತ್ತಕ್ಕೆ ಕಟ್ಟಬೇಕಾದ 26 ಕೋಟಿ ಮುದ್ರಾಂಕಶುಲ್ಕದ ಹೊರೆ ಕಡಿಮೆಯಾಗುತ್ತದೆ.

21 ಜನ ಉದ್ಯೋಗಿಗಳನ್ನು ಕೆಲಸದಿಂದ ನಾವು ಬಿಡುಗಡೆಗೊಳಿಸಿಲ್ಲ. ಅದು ಪಿ.ಎಸ್.ಎಸ್.ಕೆ ಆಡಳಿತ ಮಂಡಳಿ ನಿರ್ಧಾರ. ಅದಕ್ಕೂ ನಮಗೂ ಸಂಬಂಧವಿಲ್ಲ. ಕಾರ್ಖಾನೆಯ ಎಲ್ಲ ಹಳೆಯ ಉದ್ಯೋಗಿಗಳನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದೇವೆ ಎಂದು ದೂರಿನಲ್ಲಿರುವ ಆರೋಪವನ್ನು ನಿರಾಕರಿಸಿದ್ದಾರೆ

ಕಾರ್ಖಾನೆ ಪ್ರಾರಂಭಿಸುವ ಮೊದಲೇ ಅವರಿಗೆ ಶೇ. 25 ವೇತನಬಡ್ತಿ ನೀಡಿದ್ದೇವೆ. ಮಂಡ್ಯ ಭಾಗದ 350 ನಿರುದ್ಯೋಗಿಯುವಕರಿಗೆ ಹೊಸ ಉದ್ಯೋಗ ನೀಡಿದ್ದೇವೆ. ತಿಂಗಳ ಮೊದಲವಾರದಲ್ಲಿಯೇ ನಿಯಮಿತವಾಗಿ ವೇತನ ನೀಡಲಾಗುತ್ತದೆ. ಐತಿಹಾಸಿಕ ಹಿನ್ನೆಲೆ ಹೊಂದಿದ ಒಂದು ಕಾರ್ಖಾನೆ ರೋಗಗ್ರಸ್ತವಾಗಿ ಸ್ಥಗಿತಗೊಂಡಾಗ ಸಾಮಾಜಿಕ ಕಳಕಳಿಯಿಂದನಿರಾಣಿ ಸಮೂಹ ಕಾರ್ಖಾನೆಯನ್ನು ಲೀಜ್ ಪಡೆದಿದೆ ಎಂದು ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ

ನಾವು ತೆಗೆದುಕೊಂಡ ತೀರ್ಮಾನದ ಫಲವಾಗಿ ಪಿಎಸ್‍ಎಸ್‍ಕೆ ಇಂದು ಸುಸ್ಥಿರವಾಗಿದ್ದು, ಮಂಡ್ಯ ಹಾಗೂ ಮೈಸೂರು ಭಾಗದ ರೈತರ ಬೆಳೆಗೆ ನಿಶ್ಚಿತ ಮಾರುಕಟ್ಟೆ ಹಾಗೂ ನಿಶ್ಚಿತ ಬೆಲೆ ದೊರಕಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿದೆ ಎಂದು ಹೇಳಿದ್ದಾರೆ.

ಕೊವಿಡ್‍ನಂತಹ ಸಂಕಷ್ಟದ ದಿನಗಳಲ್ಲಿಯೂ ಸ್ಥಗಿತಗೊಂಡ ಕಾರ್ಖಾನೆ ಸುಸ್ಥಿರವಾಗಿ ನಡೆಯುತ್ತಿರುವುದನ್ನು ನೋಡಿ ಸ್ವಾಭಿಮಾನಿ ಮಂಡ್ಯ ರೈತರು ಸಂತಸ ಪಡುತ್ತಿದ್ದಾರೆ. ಇದನ್ನು ಸಹಿಸದೇ ಅಪಪ್ರಚಾರ ಮಾಡುವುದು ಮೂರ್ಖತನದ ಪರಮಾವಧಿ ಎಂದು ಟೀಕಿಸಿದ್ದಾರೆ.

ಮತ್ತೊಬ್ಬರ ಮೇಲೆ ಆರೋಪ ಹೊರಿಸುವ ಬದಲು ಸಾಮರ್ಥ್ಯವಿದ್ದರೆ ತಾವೇ ಮುಂದೆ ಬಂದು ಕಾರ್ಖಾನೆನಡೆಸಬಹುದು. ಎಂದು ವಿಜಯ ನಿರಾಣಿ ಅವರು ಡಾ.ರವೀಂದ್ರ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *